ಬೆಂಗಳೂರು: ಕರ್ನಾಟಕದ ಈ ಬಾಲಕಿ ಅಮನ, ‘ಅತಿ ಕಿರಿಯ ಕವಯತ್ರಿ’ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಷ್ಟೇ ಅಲ್ಲ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಎರಡರಲ್ಲೂ ದಾಖಲೆ ಬರೆದಿದ್ದಾಳೆ.
2008ರ ಜೂನ್ 20ರಂದು ಜನಿಸಿರುವ ಅಮನ, ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, 61 ಕವನಗಳಿರುವ ‘ಇಕೋಸ್ ಆಫ್ ಸೌಲ್ಫುಲ್’ ಎಂಬ ಕವನಸಂಕಲನವನ್ನು ರಚಿಸಿದ್ದಾಳೆ. ಈ ಕವನ ಸಂಕಲನ 2020ರಲ್ಲಿ ಅಂದರೆ ಅಮನಗೆ 12 ವರ್ಷ, 5 ತಿಂಗಳು 10 ದಿನಗಳಾಗಿದ್ದಾಗ ಪ್ರಕಟಗೊಂಡಿದೆ. ಇದನ್ನು 2021ರ ಜುಲೈ 26ರಂದು ದಾಖಲೆ ಎಂದು ಖಚಿತ ಪಡಿಸಲಾಗಿದ್ದು, ಅಮನಳನ್ನು ‘ಅತಿಕಿರಿಯ ಕವಯತ್ರಿ’ ಎಂದು ಪರಿಗಣಿಸಿರುವುದಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ತಿಳಿಸಿದೆ.
ಇನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಈಕೆ ಕಿರಿಯ ವಯಸ್ಸಿನಲ್ಲೇ ಕವಿತೆ ಬರೆದ ಹಿನ್ನೆಲೆಯಲ್ಲಿ ‘ಗ್ರ್ಯಾಂಡ್ ಮಾಸ್ಟರ್’ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಈಕೆಯ ದಾಖಲೆಯನ್ನು 2021ರ ಜುಲೈ 27ರಂದು ಖಚಿತಪಡಿಸಿರುವುದಾಗಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ತಿಳಿಸಿದೆ.
ಅಮನ ಇದುವರೆಗೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಒಟ್ಟು 275 ಕವನಗಳನ್ನು ರಚಿಸಿದ್ದು, ಸದ್ಯದಲ್ಲೇ ಎರಡನೇ ಕವನಸಂಕಲನ ಕೂಡ ಪ್ರಕಟಗೊಳ್ಳಲಿದೆ. ಈಕೆ ಕೆಎಸ್ಆರ್ಟಿಸಿಯ ಚೀಫ್ ಪಬ್ಲಿಕ್ ರಿಲೇಷನ್ ಆಫೀಸರ್ ಡಾ.ಟಿ.ಎಸ್. ಲತಾ ಅವರ ಪುತ್ರಿ. ‘ಇಕೋಸ್ ಆಫ್ ಸೌಲ್ಫುಲ್’ ಕವನ ಸಂಕಲನವನ್ನು ಸಪ್ನಾ ಬುಕ್ ಹೌಸ್ ಪ್ರಕಟಿಸಿದೆ.
ಒಂದು ವರ್ಷದ ಆ ಮಗುವನ್ನು ಒಂದು ದಿನ ಭೇಟಿ ಮಾಡುವೆ ಅಂದ್ರು ನಟಿ ರಶ್ಮಿಕಾ; ಅದಕ್ಕೆ ಕಾರಣ ಕೂಡ ‘ರಶ್ಮಿಕಾ’ನೇ..
ಆಟ ಆಡ್ತ ಆಡ್ತ ಸತ್ತು ಹೋದ ಬಾಲಕಿ: ಶಾಲೆ ತೆರೆದಿಲ್ಲ, ಮಕ್ಕಳು ಮನೇಲೇ ಇದ್ದಾರೆ ಅಂತಾದರೆ ಯಾವುದಕ್ಕೂ ಹುಷಾರಾಗಿರಿ..!