More

    PHOTOS| ವೈರಲ್​ ಆಗ್ತಿದೆ ಹೆಬ್ಬುಲಿ ಬೆಡಗಿ ಅಮಲಾ ಪೌಲ್​ ಹಾಟ್​ ಬಿಕಿನಿ ಫೋಟೋ…!

    ಚೆನ್ನೈ: ಮದುವೆ ವಿಚಾರದಲ್ಲಿ ಇತ್ತೀಚೆಗಷ್ಟೇ ಭಾರಿ ಸುದ್ದಿಯಲ್ಲಿದ್ದ ನಟಿ ಅಮಲಾ ಪೌಲ್​ ಇದೀಗ ತಮ್ಮ ಬಿಕಿನಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

    ಇನ್​ಸ್ಟಾಗ್ರಾಂ ಖಾತೆಯಲ್ಲಿ ಟ್ರೀ ಹೌಸ್​​ನಲ್ಲಿ ಬಿಕಿನಿ ಉಡುಗೆ ಧರಿಸಿ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋಗಳನ್ನು ಅಮಲಾ ಶೇರ್​ ಮಾಡಿಕೊಂಡಿದ್ದಾರೆ. ಫೋಟೋ ಕುರಿತು “ಕೆಲವು ಜನರು ತಮ್ಮ ಅಮೂಲ್ಯವಾದ ವರ್ಷಗಳನ್ನು ಶಾಂತಿಯಿಂದ ವಿಶ್ರಾಂತಿ ಪಡೆಯುವ ಏಕೈಕ ಗುರಿಯೊಂದಿಗೆ ಯುದ್ಧದೊಂದಿಗೆ ಕಳೆದುಬಿಡುತ್ತಾರೆ. ಶಾಂತಿಯಿಂದ ಜೀವನ ನಡೆಸಲು ನೀವೇಕೆ ಪ್ರಯತ್ನಿಸಬಾರದು? ಜಗತ್ತು ಇದೀಗ ಕೆಲವನ್ನು ಮಾಡಬಹುದು” ಎಂಬ ಅಡಿ ಬರಹವನ್ನು ಬರೆದುಕೊಂಡಿದ್ದಾರೆ. ಅದಕ್ಕೆ #liveinpeace #peaceout #peacebewithyou ಎಂಬ ಹ್ಯಾಶ್​ಟ್ಯಾಗ್​ಗಳನ್ನು ನೀಡಿದ್ದಾರೆ. ಇದನ್ನೂ ಓದಿ: PHOTO GALLERY| ಹುಟ್ಟುಹಬ್ಬದ ಸಂಭ್ರಮದಲ್ಲಿರೋ ನಟಿ ದೀಪಾ ಸನ್ನಿಧಿಯ ಸ್ಟನ್ನಿಂಗ್​ ಫೋಟೋಗಳು!

    ಅಂದಹಾಗೆ ಅಮಲಾ ಆದೈ ಚಿತ್ರದಲ್ಲಿ ತುಂಬಾ ಬೋಲ್ಡಾಗಿ ಕಾಣಿಸಿಕೊಂಡಾಗಿನಿಂದ ಭಾರಿ ಸುದ್ದಿಯಲ್ಲಿದ್ದಾರೆ. ಆದೈ ಚಿತ್ರಕ್ಕೂ ಮುನ್ನ ಮದುವೆ ಹಾಗೂ ಡಿವೋರ್ಸ್​ ವಿಚಾರದಲ್ಲಿ ಹೆಚ್ಚು ಸುದ್ದಿ ಮಾಡಿದ್ದರು. ಇನ್ನು ಕನ್ನಡಿಗರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ನಟನೆ ಹೆಬ್ಬುಲಿ ಚಿತ್ರದ ಮೂಲಕ ಅಮಲಾ ಪರಿಚಿತರಾಗಿದ್ದಾರೆ. ಸದ್ಯ ಯೋಗಾಭ್ಯಾಸ ಹಾಗೂ ಆಧ್ಯಾತ್ಮಿಕತೆ ಕಡೆ ಒಲವು ಹೊಂದಿರುವ ಅಮಲಾ ಮುಂದಿನ ಚಿತ್ರ “ಅಧೋ ಅಂಧ ಪಾರ್ವೈ ಪೊಲಾ” ದಲ್ಲಿ ನಟಿಸಲಿದ್ದಾರೆ. (ಏಜೆನ್ಸೀಸ್​) ಇದನ್ನೂ ಓದಿ: VIDEO| ಲವ್​ ಮಾಡಿದ್ದಕ್ಕೆ ಹುಡುಗನ ಮೇಲೆ ಪುಡಿ ರೌಡಿಗಳ ಅಟ್ಟಹಾಸ: ಪಾರ್ಕ್​ಗೆ ಕರೆದೊಯ್ದು ಥಳಿತ

    ಸ್ಲೈಡ್​ ಶೋಗಾಗಿ ಫೋಟೋ ಮೇಲೆ ಕ್ಲಿಕ್ಕಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts