More

    ಮೊದಲ ಬಾರಿ ಆಯ್ಕೆಯಾದರೂ ಅಭಿವೃದ್ಧಿಯಲ್ಲಿ ಮುಂದು

    ಮೂಡಿಗೆರೆ: ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರೂ ನನ್ನ ಮೇಲೆ ವಿಶ್ವಾಸವಿರಿಸಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಿದ್ದಾರೆ. ಇದರಿಂದಾಗಿ ಅಲ್ಪ ಸಮಯದಲ್ಲೇ ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಬಹಳಷ್ಟಾಗುತ್ತಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

    ಬುಧವಾರ ಗೋಣಿಬೀಡು ಸಮೀಪದ ಆನೆದಿಬ್ಬ ಗ್ರಾಮದಲ್ಲಿ 4 ಲಕ್ಷ ರೂ. ಅನುದಾನದಲ್ಲಿ ನೂತನ ಚಿತಾಗಾರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮುಖ್ಯಮಂತ್ರಿಗಳ 25 ಕೋಟಿ ರೂ. ಅನುದಾನದಲ್ಲಿ 130 ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 17 ಕೋಟಿ ರೂ. ಮೀಸಲಿರಿಸಲಾಗಿದೆ. ಇನ್ನು 8 ಕೋಟಿ ರೂ.ನಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈ ಹಿಂದೆ ಬಿಡುಗಡೆಯಾಗಿದ್ದ ಅನುದಾನದಲ್ಲಿ ಅನೇಕ ಕಾಮಗಾರಿಗಳು ಬಾಕಿ ಉಳಿದಿವೆ. ಹಾಗಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳ ಸಭೆ ಕರೆದು ಸೂಚಿಸಿದ್ದೇನೆ. ಈಗ ಬಿಡುಗಡೆಯಾಗಿರುವ ಎಲ್ಲ ಅನುದಾನವನ್ನು ಪ್ರತಿ ಗ್ರಾಮದ ಅಭಿವೃದ್ಧಿಗಾಗಿ ಹಂಚಿಕೆ ಮಾಡಲಾಗಿದೆ. ಎಲ್ಲ ಕಾಮಗಾರಿಗಳೂ ಮಳೆಗಾಲಕ್ಕೆ ಮುಂಚಿತವಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
    ಗೋಣಿಬೀಡು ಸಮೀಪದ ಕಮ್ಮರಗೋಡು, ಗಾಡಿಚೌಕ ರಸ್ತೆಯ ಸೇತುವೆ ನಿರ್ಮಾಣಕ್ಕೆ 1.50 ಕೋಟಿ, ಅಣಜೂರು ಗ್ರಾಮದ ರಸ್ತೆ ಅಭಿವೃದ್ಧಿಗೆ 15 ಲಕ್ಷ, ತರುವೆ ಗ್ರಾಮದ ಏಕಲವ್ಯ ಶಾಲೆ ಕಟ್ಟಡ ನಿರ್ಮಾಣಕ್ಕೆ 1.54 ಕೋಟಿ, ಬಿಳ್ಳೂರು-ಬಣಕಲ್ ಸೇತುವೆ ನಿರ್ಮಾಣಕ್ಕೆ 2 ಕೋಟಿ, ಸಬ್ಬೇನಹಳ್ಳಿ ರಸ್ತೆ ಅಭಿವೃದ್ಧಿಗೆ 15 ಲಕ್ಷ, ಬಿಳಗುಳ ಗ್ರಾಮದ ಇಂದಿರಾನಗರ ರಸ್ತೆ ಅಭಿವೃದ್ಧಿಗೆ 15 ಲಕ್ಷ, ಬಿಳಗುಳ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಮಲಯಾಳಂ ಸಮಾಜ ಸೇವಾ ಭವನದ ಅಡುಗೆ ಕೊಠಡಿ ಹಾಗೂ ಶೌಚಗೃಹ ನಿರ್ಮಾಣಕ್ಕೆ 3.50 ಲಕ್ಷ, ಮಾಕೋನಹಳ್ಳಿ ಸಮೀಪದ ಬೊಮ್ಮನಹಳ್ಳಿ ಸೇತುವೆ ನಿರ್ಮಾಣಕ್ಕೆ 1.50 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಎಲ್ಲ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
    ಗೋಣಿಬೀಡು ಗ್ರಾಪಂ ಅಧ್ಯಕ್ಷ ಜಿ.ಎಸ್.ದಿನೇಶ್, ಗ್ರಾಪಂ ಸದಸ್ಯರಾದ ರಾಧಾ ಮಿತ್ರೇಶ್, ರೇಣುಕಾ, ಸುಜಾತಾ, ಆನಂದ, ದೀಪಕ್, ಪ್ರಹ್ಲಾದ, ಪಿಡಿಒ ಸಿಂಚನಾ, ಮುಖಂಡರಾದ ಸುಬ್ರಾಯಗೌಡ, ಜಕಾವುಲ್ಲ, ಜಗದೀಶ್, ಸುರೇಂದ್ರ ಉಗ್ಗೆಹಳ್ಳಿ, ಪರಮೇಶ್, ನಯನಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts