More

    ಅಬ್ಬಬ್ಬಾ.. ಒಂದೇ ಪ್ರಕರಣದ ಹಿಂದೆ ಒಂದೂವರೆ ಸಾವಿರ ಪೊಲೀಸರು!

    ವಿಜಯಪುರ: ಯಾವುದಾದರೂ ಒಂದು ಅಪರಾಧ ಪ್ರಕರಣವನ್ನು ಒಬ್ಬಿಬ್ಬರು ಪೊಲೀಸರು ಅಥವಾ ಹತ್ತಾರು ಪೊಲೀಸರ ಒಂದು ತಂಡ ಬೆನ್ನು ಹತ್ತುವುದು ಸಾಮಾನ್ಯ. ಆದರೆ ಅಪರೂಪಕ್ಕೆಂಬಂತೆ ಇಲ್ಲೊಂದು ಪ್ರಕರಣದ ಹಿಂದೆ ಬರೋಬ್ಬರಿ ಒಂದೂವರೆ ಸಾವಿರ ಪೊಲೀಸರು ಬೆನ್ನುಬಿದ್ದಿದ್ದಾರೆ.

    ಹೌದು.. ಈ ಅಪರಾಧ ಪ್ರಕರಣದ ಪತ್ತೆಗಾಗಿ ಒಬ್ಬರು ಎಸ್​ಪಿ, ಇನ್ನೊಬ್ಬರು ಹೆಚ್ಚುವರಿ ಎಸ್​ಪಿ, ಅವರೊಂದಿಗೆ 37 ಇನ್​ಸ್ಪೆಕ್ಟರ್​ಗಳು ನೇತೃತ್ವದ ಹತ್ತಕ್ಕೂ ಅಧಿಕ ತಂಡಗಳ ರಚನೆಯಾಗಿದ್ದು, ಒಟ್ಟು ಒಂದೂವರೆ ಸಾವಿರ ಪೊಲೀಸರು ಇದೊಂದೇ ಪ್ರಕರಣದ ತನಿಖಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಅಂದಹಾಗೆ ಇದು ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣ. ಈ ಪ್ರಕರಣದ ತನಿಖೆಗಾಗಿ ವಿಜಯಪುರ ಜಿಲ್ಲೆಯ 1500 ಪೊಲೀಸರನ್ನು ನಿಯೋಜಿಸಲಾಗಿದೆ.

    ಘಟನೆ ನಡೆದ ಸ್ಥಳದ ಸುತ್ತಲೂ 3 ಕಿಲೋಮೀಟರ್​ ವ್ಯಾಪ್ತಿಯಲ್ಲಿ ಪೊಲೀಸರಿಂದ ಶೋಧ ನಡೆಯುತ್ತಿದ್ದು, ಭೀಮಾತೀರದ ಚಡಚಣ, ಕೆರೂರ, ಟಾಕಳಿ, ಉಮರಾಣಿ, ಲೋಣಿ, ಕೊಂಕಣಗಾಂವ ಸುತ್ತಲೂ ಪೊಲೀಸರ ತಂಡ 24×7 ಗಸ್ತಿನಲ್ಲಿದೆ. ಅಲ್ಲದೆ ಐಜಿಪಿ ರಾಘವೇಂದ್ರ ಸುಹಾಸ್ ಭೇಟಿ ಬಳಿಕ ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಬಾಂಬ್ ಪತ್ತೆ ನಿಷ್ಕ್ರಿಯದಳ ಪರಿಶೀಲನೆಯನ್ನೂ ನಡೆಸಿದೆ.

    ಭೀಕರ ದಾಳಿ ವೇಳೆ 18 ರೌಂಡ್​ಗಳಲ್ಲಿ ಫೈರಿಂಗ್ ನಡೆದಿದ್ದು, ಈ ವರೆಗೆ ಸ್ಥಳದಲ್ಲಿ 15 ಬುಲೆಟ್ ಕ್ಯಾಪ್ ಹಾಗೂ 3 ಜೀವಂತ ಗುಂಡು, 10ಕ್ಕೂ ಅಧಿಕ ಪೆಟ್ರೋಲ್ ಬಾಂಬ್, ಹೊಸದಾಗಿ ರೆಡಿ ಮಾಡಿಸಿದ್ದ ತಲವಾರ್‌ಗಳು ಪತ್ತೆ ಆಗಿವೆ.

    ಈ ದಾಳಿಗೆ ಬಿಹಾರದ ಮುಂಗರ್ ಜಿಲ್ಲೆಯ ಕಂಟ್ರಿಮೇಡ್ ಪಿಸ್ತೂಲ್ ಬಳಕೆಯಾಗಿರುವ ಸಾಧ್ಯತೆ ಇದೆ ಎಂಬ ಶಂಕೆ ಪೊಲೀಸರಲ್ಲಿ ಮೂಡಿದೆ. ಈ ದಾಳಿಯಲ್ಲಿ ಮಹಾದೇವ ಬೈರಗೊಂಡ ಕಡೆಯ ಇಬ್ಬರು ಸಾವಿಗೀಡಾಗಿದ್ದರು. ಅಟ್ಯಾಕ್ ಮಾಡಿದವರು ಮಹಾರಾಷ್ಟ್ರದ ಪೂನಾ, ನಾಂದೆಡ್, ಯು.ಪಿ, ಬಿಹಾರ ಕಡೆಗೆ ಪರಾರಿಯಾಗಿರುವ ಸಾಧ್ಯತೆ ಇದ್ದು, ಎಲ್ಲ ನಿಟ್ಟಿನಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts