More

    ಅಂಗವೈಕಲ್ಯವಿರುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ

    ಆಲಮೇಲ: ಅಂಗವಿಕಲ ಮಕ್ಕಳಲ್ಲಿರುವ ಪ್ರತಿಭೆ ಮತ್ತು ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಮಹತ್ತರ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಹೇಳಿದರು.

    ಪಟ್ಟಣದ ಶ್ರೀಗುರು ಸಂಸ್ಥಾನ ಹಿರೇಮಠದ ಸಮುದಾಯ ಭವನದಲ್ಲಿ ಸೋಮವಾರ ರಾಜ್ಯ ಅಂಗವಿಕಲರ ವಿಕಾಸ ಸಂಘ ಆಲಮೇಲ ಘಟಕದಿಂದ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಅಂಗವೈಕಲ್ಯವಿರುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ. ಅಂಗವಿಕಲ ಮಕ್ಕಳನ್ನು ಕೀಳಾಗಿ ಕಾಣದೆ ಪ್ರೀತಿ-ವಿಶ್ವಾಸದಿಂದ ನೋಡಬೇಕು. ಅಂಗವಿಕಲರನ್ನು ಸಬಲರನ್ನಾಗಿಸಲು ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಛಲದಿಂದ ಜೀವನ ನಡೆಸಬೇಕು ಎಂದರು.

    ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಪ್ರಶಾಂತ ದೊಮಗೊಂಡ ಮಾತನಾಡಿ, ಸರ್ಕಾರದಿಂದ ಅಂಗವಿಕಲರಿಗೆ ಬರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬನೆಯಿಂದ ಸಮಾಜದಲ್ಲಿ ಬದುಕಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು. ಹಿರೊಳ್ಳಿಯ ಶಿವಬಸವ ಶ್ರೀ ಆಶೀರ್ವಚನಗಳು ನೀಡಿದರು.

    ಪಪಂ ಅಧ್ಯಕ್ಷ ಹಣಮಂತ ಹೂಗಾರ, ಪಪಂ ಮುಖ್ಯಾಧಿಕಾರಿ ಬಿ.ಜಿ. ನಾರಾಯಣಕರ, ಮಲ್ಲಿಕಾರ್ಜುನ ಕರ್ನಾಳ, ವಿಜುಗೌಡ ಪಾಟೀಲ, ಸಬಿಯಾಬೇಗಂ ಮರ್ತೂರ, ಅಪ್ಪು ಶೆಟ್ಟಿ, ಮಂಗಲಾ ಗುಡಿಮಠ, ಮಲ್ಲು ಅಚಲೇರಿ, ಮತ್ತುರಾಜ ಸಾತಿಹಾಳ, ವಸಂತರಾವ ಕುಲಕರ್ಣಿ, ಶರಣಗೌಡ ಬಿರಾದಾರ, ಯಮನಾಬಾಯಿ ಅಗಸರ, ವಿಜಯಕುಮಾರ ಭಜಂತ್ರಿ, ನಿಂಗಣ್ಣ ಬಿಸನಾಳ, ಮಲ್ಲಮ್ಮ ಬಬಲೇಶ್ವರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts