More

    ನಕಲಿ ರಸಗೊಬ್ಬರ ತಯಾರಿಕೆ ಜಾಲದ ವಿರುದ್ಧ ಕ್ರಮಕ್ಕೆ ಆಗ್ರಹ

    ವಿಜಯಪುರ: ಆಲಮೇಲ ಗ್ರಾಮದಲ್ಲಿ ದೊರೆತ ನಕಲಿ ರಸಗೊಬ್ಬರ ತಯಾರಿಕೆ ಜಾಲದ ಬಗ್ಗೆ ಪತ್ತೆ ಹಚ್ಚಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲರಿಗೆ ಮಂಗಳವಾರ ಮನವಿ ಸಲ್ಲಿಸಿದರು.
    ಸಂಘದ ಜಿಲ್ಲಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿ, ನಕಲಿ ರಸಗೊಬ್ಬರ ತಯಾರಿಸಿ ಮಾರಾಟ ಮಾಡಿದ್ದರಿಂದ ಜಿಲ್ಲೆಯಾದ್ಯಂತ ಬೆಳೆ ನಾಶವಾಗುತ್ತಿದೆ. ಇಂತಹ ವಿಷಕಾರಿ ರಸಗೊಬ್ಬರ ಬಳಕೆಯಿಂದ ಬೆಳೆಯುವ ಪೈರು ಸಮಯದ ಮುಂಚೆ ಬೆಳೆಯುತ್ತಿದ್ದು, ಅದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಡಿಮೆ ಬೆಲೆಗೆ ಸಿಗುವ ಈ ಗೊಬ್ಬರ ಬಳಕೆಯಿಂದ ರೈತರ ಜಮೀನಿನ ಲವತತ್ತೆ ಹಾಳಾಗುತ್ತಿದೆ ಎಂದು ಹೇಳಿದರು.
    ಗೌರವಾಧ್ಯಕ್ಷ ಯಾಜ್ ಕಲಾದಗಿ ಮಾತನಾಡಿ, ಈ ಗೊಬ್ಬರದಿಂದ ರೈತರ ಜಮೀನಿನ ಫಲವತ್ತತೆ ಹಾಳಾಗುತ್ತಿದೆ. ಆದ್ದರಿಂದ ಈ ವಿಷಕಾರಿ ಗೊಬ್ಬರ ತಯಾರಿಸುವ ಹಾಗೂ ಮಾರಾಟ ಮಾಡುತ್ತಿರುವವರ ಪರವಾನಗಿ ರದ್ದು ಪಡಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.
    ಮಹಿಳಾ ಅಧ್ಯಕ್ಷೆ ಮಂಜುಳಾ ಹಿಪ್ಪರಗಿ, ಖಜಾಂಚಿ ಬಾಳಾಸಾಹೇಬ ಇಂಡಿ ಮಾತನಾಡಿದರು. ಶರಣಬಸು ರಾಚಪ್ಪ ಕೊನ್ನಳ್ಳಿ, ಗಂಗಾಧರ ಬೋಳೆಗಾಂವಿ, ಪರಶುರಾಮ ವಿಜಯಪುರ, ಸದಾಶಿವ ಬಿರಾದಾರ, ಶೈಲಜಾ ಹೆಗಡಿಹಾಳ, ಶ್ರೀದೇವಿ ಹಿರೇಮಠ, ಪುಂಡಲೀಕ ಕಾಖಂಡಕಿ, ಲಕ್ಷ್ಮಣ ನುಚ್ಚಿ, ಅನೀಲಕುಮಾರ ಕುಮಟಗಿ, ವಿಶ್ವನಾಥ ತಡಲಗಿ, ಗುಂಡು ಶಿಂಧೆ, ಶ್ರೀಶೈಲ ಹಂಜಗಿ, ದತ್ತಾತ್ರಯ ಹಿಪ್ಪರಗಿ, ಐ.ಸಿ. ಪಠಾಣ, ಡಿ.ಎಸ್. ಪೀರ್‌ಜಾದೆ, ಸಾಗರ ಆಜೂರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ನಕಲಿ ರಸಗೊಬ್ಬರ ತಯಾರಿಕೆ ಜಾಲದ ವಿರುದ್ಧ ಕ್ರಮಕ್ಕೆ ಆಗ್ರಹ
    ನಕಲಿ ರಸಗೊಬ್ಬರ ತಯಾರಿಕೆ ಜಾಲದ ವಿರುದ್ಧ ಕ್ರಮಕ್ಕೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts