More

    ರೈತರು, ವರ್ತಕರು ಕೃಷಿ ಉತ್ಪನ್ನ ಮಾರುಕಟ್ಟೆ ಲಾಭ ಪಡೆಯಲಿ

    ಆಲಮೇಲ: ಪಟ್ಟಣವು ನೂತನ ತಾಲೂಕು ಕೇಂದ್ರವಾಗಿದ್ದರಿಂದ ಈ ಭಾಗದ ರೈತರು ಹಾಗೂ ವರ್ತಕರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಲಾಭ ಪಡೆಯಬೇಕು ಎಂದು ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಹೇಳಿದರು.
    ಪಟ್ಟಣದ ಎಪಿಎಂಸಿ ಉಪ ಸಮಿತಿ ಪ್ರಾಂಗಣದಲ್ಲಿ ಸೋಮವಾರ ಬೆಳಗ್ಗೆ 2014-15ನೇ ಸಾಲಿನ ಡಬ್ಲೂೃ ಐ ಎಫ್ (ಹೆಚ್ಚುವರಿ) ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 500 ಎಂಟಿ ಸಾಮರ್ಥ್ಯದ ನೂತನ ಗೋದಾಮು ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಚಾಲನೆ ನೀಡಿ ಅವರು ಮಾತನಾಡಿದರು.
    ರೈತ ದೇಶದ ಬೆನ್ನೆಲುಬು, ಆತ ಸುಖ, ಶಾಂತಿ, ನೆಮ್ಮದಿಯಿಂದ ಇದ್ದರೆ ಇಡೀ ದೇಶವೇ ನೆಮ್ಮದಿಯಿಂದ ಇರಲು ಸಾಧ್ಯ ಎಂದರು.
    ಎಪಿಎಂಸಿ ಅಧ್ಯಕ್ಷ ಹಳೇಪಗೌಡ ಚೌಧರಿ(ಸಲಾದಳ್ಳಿ) ಮಾತನಾಡಿ, ನಮ್ಮ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಿಂದಗಿಯ ಉಪ ಸಮಿತಿ ಆಲಮೇಲದಲ್ಲಿ ಸದ್ಯ ನನ್ನ ಅಧಿಕಾರಾವಧಿಯಲ್ಲಿ ಗೋದಾಮು ಕಾಮಗಾರಿ ಮುಗಿದು ಕಟ್ಟಡ ಉದ್ಘಾಟನೆಗೊಂಡಿದೆ. ನಬಾರ್ಡ್ ಯೋಜನೆಯಡಿ 2.5 ಕೋಟಿ ರೂಗಳ ಚರಂಡಿ ಹಾಗೂ ರಸ್ತೆ ಕಾಮಗಾರಿಗೆ ಶೀಘ್ರ ಟೆಂಡರ್ ಕರೆದು ಚರಂಡಿ ಹಾಗೂ ರಸ್ತೆ ಕಾಮಗಾರಿ ಆರಂಭಿಸಲಾಗುವುದು. ಮುಳಸಾವಳಗಿ, ಬಳಗಾನೂರ ಹಾಗೂ ಸಿಂದಗಿ ಪಟ್ಟಣದಲ್ಲಿ ತಲಾ ಒಂದು ಕೋಟಿ ರೂ. ವೆಚ್ಚದಲ್ಲಿ ಸಂತೆ ಕಟ್ಟೆಗಳನ್ನು ನಿರ್ಮಿಸಲಾಗಿದೆ ಎಂದರು.
    ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದಣ್ಣ ಹಿರೇಕುರಬರ, ಭೀಮರಾಯ ಅಮರಗೋಳ, ಶರಣು ಕತ್ತಿ, ಗೊಲ್ಲಾಳಪ್ಪ ರೂಗಿ, ಹಣಮಂತ ಹೂಗಾರ, ಮಲ್ಲು ಅಚ್ಚಲೇರಿ, ವೆಂಕನಗೌಡ ಚೌಧರಿ, ವಿಜಯಪುರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಐ.ಎಸ್.ಕದರಿ, ಕೃಷಿ ಮಾರುಕಟ್ಟೆ ಮೇಲ್ವಿಚಾರಕ ಎಸ್.ಬಿ. ಅರಳಿಮಟ್ಟಿ, ಕಾರ್ಯದರ್ಶಿ ಎಂ.ಡಿ. ಚಬನೂರ, ಗುತ್ತಿಗೆದಾರ ಜಾವೀದ್ ಕರ್ಜಗಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts