More

    “18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕರೊನಾ ಲಸಿಕೆ ನೀಡಿ” : ಕೇಜ್ರಿವಾಲ್

    ನವದೆಹಲಿ: ಕರೊನಾ ಲಸಿಕೆ ಪಡೆಯಲು ವಿಧಿಸಿರುವ ವಯಸ್ಸಿನ ಮಿತಿಯನ್ನು ಸಡಿಲಗೊಳಿಸಿದಲ್ಲಿ ಮೂರು ತಿಂಗಳಲ್ಲಿ ಇಡೀ ದೆಹಲಿಯ ಜನರಿಗೆ ಲಸಿಕೆ ನೀಡಿ ಪೂರೈಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಕರೊನಾ ಲಸಿಕೆ ಪಡೆಯಲು ಅವಕಾಶ ಕೊಡಬೇಕೆಂದು ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಇಂದು ದೆಹಲಿಯಲ್ಲಿ ವರ್ಚುವಲ್ ಸುದ್ದಿಗೋಷ್ಠಿ ನಡೆಸಿದ ಕೇಜ್ರಿವಾಲ್, ಇತರ ಹಲವು ರಾಜ್ಯಗಳಲ್ಲಿ ಕರೊನಾ ಎರಡನೇ ಅಲೆ ಕಾಣಿಸಿಕೊಳ್ಳುತ್ತಿದ್ದರೂ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 500 ಸೋಂಕು ಪ್ರಕರಣಗಳು ದಾಖಲಾಗಿದ್ದು, ಅಧಿಕಾರಿಗಳು ಸೋಂಕು ಹೆಚ್ಚದಂತೆ ತೀವ್ರ ನಿಗಾ ವಹಿಸುತ್ತಿದ್ದಾರೆ ಎಂದರು.

    ಇದನ್ನೂ ಓದಿ: ಕರೊನಾ ನಿಯಮ ಉಲ್ಲಂಘನೆ : ಬಾಲಿವುಡ್ ನಟಿ ವಿರುದ್ಧ ಮುಂಬೈ ಪಾಲಿಕೆ ದೂರು

    ಈ ಸಂದರ್ಭದಲ್ಲಿ, ಹೆಚ್ಚು ಜನರು ಲಸಿಕೆ ಪಡೆಯಲು ಸಾಧ್ಯವಾಗುವಂತೆ ಲಸಿಕೆ ಸಂಬಂಧೀ ನಿರ್ಬಂಧಗಳನ್ನು ಸಡಿಲೀಕರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಕೇಜ್ರಿವಾಲ್ ಒತ್ತಾಯಿಸಿದರು. “ಲಸಿಕೆಯ ಅರ್ಹತೆಯ ನಿಬಂಧನೆಯನ್ನು ಸಡಿಲೀಕರಿಸಿ, 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಮುಕ್ತಗೊಳಿಸಬೇಕೆಂದು ನಾನು ಕೇಂದ್ರವನ್ನು ಕೋರುತ್ತೇನೆ. ಇಡೀ ದೆಹಲಿಗೆ ನಾವು ಮೂರು ತಿಂಗಳಲ್ಲಿ ಲಸಿಕೆ ನೀಡಬಹುದು” ಎಂದರು.

    “ಲಸಿಕೆ ಉತ್ಪಾದನೆ ಹೆಚ್ಚಿರುವುದರಿಂದ ಎಲ್ಲರಿಗೂ ಲಸಿಕೆ ನೀಡುವ ನಿರ್ಧಾರ ಕೈಗೊಳ್ಳಬೇಕು. ಯಾರು ಅರ್ಹರು ಎಂಬ ಪಟ್ಟಿ ಮಾಡುವ ಬದಲು, ಯಾರ್ಯಾರು ಅನರ್ಹರು ಎಂಬ ಪಟ್ಟಿ ಮಾಡಬೇಕು. ಉಳಿದವರಿಗೆಲ್ಲಾ ವಾಕ್ಸಿನೇಷನ್ ಒದಗಿಸಬೇಕು. ವಾಕ್​-ಇನ್ ಸೌಲಭ್ಯ ಮಾಡಬೇಕು” ಎಂದು ಕೇಜ್ರಿವಾಲ್ ಹೇಳಿದರು.

    ಇದನ್ನೂ ಓದಿ: ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    ದೆಹಲಿಯಲ್ಲಿ ಪ್ರತಿದಿನ 30,000-40,000 ಲಸಿಕೆ ಡೋಸ್​ಗಳನ್ನು ನೀಡಲಾಗುತ್ತಿದ್ದು, ಸದ್ಯದಲ್ಲೇ ಈ ಪ್ರಮಾಣವನ್ನು ದಿನಕ್ಕೆ 1.25 ಲಕ್ಷ ಲಸಿಕೆಗಳ ಮಟ್ಟಕ್ಕೆ ಹೆಚ್ಚಿಸಲಾಗುವುದು. ಮುಂದಿನ ಕೆಲವು ದಿನಗಳಲ್ಲಿ ಲಸಿಕೆ ನೀಡುವ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಲಸಿಕೆ ಪಡೆಯಲು ಅರ್ಹತೆ ಇರುವವರೆಲ್ಲರೂ ತಕ್ಷಣ ಲಸಿಕೆ ಪಡೆಯಬೇಕೆಂದು ದೆಹಲಿ ನಾಗರೀಕರನ್ನು ಕೋರಿದರು. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಜಾತಕ ದೋಷ ನಿವಾರಿಸಲು 13 ವರ್ಷದ ವಿದ್ಯಾರ್ಥಿಯನ್ನು ‘ಮದುವೆ’ಯಾದ ಶಿಕ್ಷಕಿ !

    ನಿಯಮ ಪಾಲಿಸದ ಪ್ರಯಾಣಿಕರನ್ನು ಕೆಳಗಿಳಿಸಿದ ಏರ್ ಏಷಿಯಾ; ಮಾಸ್ಕ್ ಸರಿಯಾಗಿ ಧರಿಸದ 6 ಪ್ರಯಾಣಿಕರು ಭದ್ರತಾ ಪಡೆ ವಶಕ್ಕೆ

    “ನನ್ನ ಹೆಲಿಕಾಪ್ಟರ್ ಕೆಟ್ಟಿತ್ತು… ಆದರೆ ನಾನದನ್ನು ಸಂಚು ಎನ್ನುವುದಿಲ್ಲ…”

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts