ಗುಂಪು ಮನೆಗಳ ಹಂಚಿಕೆ ನನೆಗುದಿಗೆ

blank

ಮೃತ್ಯುಂಜಯ ಕಲ್ಮಠ ಗದಗ
ನಗರದ ಗಂಗಿಮಡಿ ಪ್ರದೇಶದಲ್ಲಿ ನಿರ್ವಿುಸಲಾಗುತ್ತಿರುವ ಗುಂಪು ಮನೆಗಳ ಹಂಚಿಕೆ ಪ್ರಕ್ರಿಯೆ ಬಹುತೇಕ ನನೆಗುದಿಗೆ ಬಿದ್ದಿದೆ. ಇದರಿಂದ ಸ್ವಂತ ಸೂರಿಗಾಗಿ ಕಾಯುತ್ತಿರುವ ನೂರಾರು ಫಲಾನುಭವಿಗಳು ನಗರಸಭೆಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಗಂಗಿಮಡಿ ಪ್ರದೇಶದ ಬಳಿ 75 ಎಕರೆ ಜಾಗದಲ್ಲಿ ಸರ್ವರಿಗೂ ಸೂರು ಯೋಜನೆಯಡಿ 3630 ಗುಂಪು ಮನೆ ನಿರ್ವಿುಸಲಾಗುತ್ತಿದೆ. ಈ ಪೈಕಿ ಸದ್ಯ 1008 ಮನೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಗುಂಪು ಮನೆಗಳಿಗೆ ಈಗಾಗಲೇ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಯಾಗಿರುವ ಫಲಾನುಭವಿಗಳು ವಾರದೊಳಗೆ ಆರಂಭಿಕ ಕಂತಿನ ಹಣ (50 ಸಾವಿರ ರೂ.) ಪಾವತಿಸಬೇಕು ಎಂದು ನಗರಸಭೆ ಕಳೆದ ವರ್ಷ ಜನವರಿ (2020) ತಿಂಗಳಲ್ಲಿ ನೋಟಿಸ್ ಜಾರಿಗೊಳಿಸಿತ್ತು. ಕಂತು ಕಟ್ಟಲು ನಗರಸಭೆ ದಿನಾಂಕ ನಿಗದಿಪಡಿಸದೆ ಇರುವುದರಿಂದ ಹಣ ಕಟ್ಟಬೇಕೆ? ಬೇಡವೇ? ಎಂಬ ಗೊಂದಲ ಫಲಾನುಭವಿಗಳಲ್ಲಿ ಉಂಟಾಯಿತು. ಒಂದೇ ಸಮಯಕ್ಕೆ 50 ಸಾವಿರ ರೂ. ಪಾವತಿಸಲು ಆಗದವರು 10, 20 ಸಾವಿರ ರೂ.ಪಾವತಿಸಬಹುದು ಎಂದು ನಗರಸಭೆ ರಿಯಾಯಿತಿ ನೀಡಿತು. ಅದರಂತೆ 100ಕ್ಕೂ ಹೆಚ್ಚು ಜನರು 10 ಸಾವಿರದಿಂದ 20 ಸಾವಿರ ರೂ.ವರೆಗೆ ಹಣ ಪಾವತಿಸಿದ್ದಾರೆ. ಹಣ ಪಾವತಿಸಬೇಕಾದವರ ಪಟ್ಟಿಯೇ ದೊಡ್ಡದಿದೆ.
ಪ್ರತಿ ಮನೆಗೆ 6.75 ಲಕ್ಷ ರೂ. ಖರ್ಚು: ಗಂಗಿಮಡಿ ಪ್ರದೇಶದಲ್ಲಿ ಅಪಾರ್ಟ್​ವೆುಂಟ್ ಮಾದರಿಯಲ್ಲಿ ನಿರ್ವಿುಸಿರುವ ಪ್ರತಿ ಮನೆ ನಿರ್ವಣಕ್ಕೆ ಸುಮಾರು 6.75 ಲಕ್ಷ ರೂಪಾಯಿ ಖರ್ಚಾಗಿದೆ. ಸರ್ಕಾರದಿಂದ ಎಸ್ಸಿಎಸ್ಟಿ ಫಲಾನುಭವಿಗಳಿಗೆ (ಕೇಂದ್ರ, ರಾಜ್ಯ ಸರ್ಕಾರ ಮತ್ತು ನಗರಸಭೆ ವಂತಿಕೆ ಸೇರಿ) 3.55 ಲಕ್ಷ ರೂ. ಹಾಗೂ ಸಾಮಾನ್ಯ ವರ್ಗದವರಿಗೆ 2.25 ಲಕ್ಷ ರೂ. ಸಹಾಯ ಧನ ನೀಡಲಾಗುತ್ತದೆ. ಉಳಿದ ಹಣವನ್ನು ಫಲಾನುಭಿಗಳು ಭರಿಸಬೇಕು ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.
ಸಾರ್ವಜನಿಕರ ವಿರೋಧ: ಆದರೆ, ಮನೆಗಳಿಗೆ ಹಣ ನೀಡಬೇಕೆಂಬ ನಗರಸಭೆ ನಿರ್ಣಯಕ್ಕೆ ಫಲಾನುಭವಿಗಳು ಸೇರಿ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಮನೆಗಳ ಹಂಚಿಕೆ ಕಾರ್ಯ ಕಗ್ಗಂಟಾಯಿತು. ಇತ್ತೀಚಿನ ಮೂರ್ನಾಲ್ಕು ತಿಂಗಳು ಕರೊನಾ 2ನೇ ಅಲೆ ಹಾವಳಿ ಹೆಚ್ಚಾಗಿದ್ದರಿಂದ ಈ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ.
ಕರೊನಾ ನೆಪವಾಯ್ತು: 3630 ಗುಂಪು ಮನೆಗಳಿಗೆ 243.68 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಬೆಂಗಳೂರು ಮೂಲದ ಜಂಪಾನಾ ಕನ್​ಸ್ಟ್ರಕ್ಷನ್ ಎಂಬ ಕಂಪನಿ ಗುತ್ತಿಗೆ ಪಡೆದುಕೊಂಡಿದ್ದು, 2018 ಮಾರ್ಚ್ ತಿಂಗಳಲ್ಲಿ ಕಾಮಗಾರಿ ಆರಂಭಿಸಿತು. 2020 ಮಾರ್ಚ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅವಧಿ ನಿಗದಿಪಡಿಸಲಾಗಿತ್ತು. ಆದರೆ, ಅವಧಿ ಪೂರ್ಣಗೊಂಡರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಕರೊನಾ ವ್ಯಾಪಿಸಿದ್ದರಿಂದ ಕಾರ್ವಿುಕರ ಕೊರತೆಯಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ ಎಂಬ ನೆಪವೊಡ್ಡಿ ನುಣುಚಿಕೊಳ್ಳಲಾಗುತ್ತಿದೆ. ರಾಜೀವಗಾಂಧಿ ವಸತಿ ನಿಗಮದಿಂದ ಮನೆಗಳ ನಿರ್ಮಾಣ ಮಾಡಲಾಗಿದ್ದು, ನಗರಸಭೆ ಉಸ್ತುವಾರಿ ನೋಡಿಕೊಳ್ಳುತ್ತಿದೆ.
ಇಲ್ಲೂ ಮತ ರಾಜಕೀಯ!
ಗದಗ-ಬೆಟಗೇರಿ ನಗರಸಭೆಗೆ ಶೀಘ್ರದಲ್ಲಿ ಚುನಾವಣೆ ನಡೆಯಬಹುದು. ಇನ್ನೆರಡು ವರ್ಷಗಳಲ್ಲಿ ವಿಧಾಸನಭೆ ಚುನಾವಣೆಯೂ ಬರಬಹುದು. ಈ ಎಲ್ಲ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮನೆಗಳ ಹಂಚಿಕೆ ಕುರಿತು ತೀರ್ವನಗಳು ನಡೆಯಲಿವೆ ಎಂದು ಅಂದಾಜಿಸಲಾಗುತ್ತಿದೆ. ಮತಗಳ ಮೇಲೆ ಕಣ್ಣಿಟ್ಟಿರುವ ಸ್ಥಳೀಯ ನಾಯಕರು ಗುಂಪು ಮನೆಗಳ ಹಂಚಿಕೆ ವಿಷಯವನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸುವ ಸಾಧ್ಯತೆಗಳಿವೆ.

ಗಂಗಿಮಡಿ ಬಳಿ ನಿರ್ವಿುಸಲಾಗುತ್ತಿರುವ ಗುಂಪು ಮನೆಗಳ ಪೈಕಿ ಸದ್ಯ 1008 ಮನೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸಣ್ಣಪುಟ್ಟ ಕೆಲಸ ಬಾಕಿ ಇದೆ. ಮನೆಗಳ ಹಂಚಿಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ. ಹಣ ಪಾವತಿಸಬೇಕೆಂದು ಫಲಾನುಭವಿಗಳಿಗೆ ನೋಟಿಸ್ ನೀಡಲಾಗಿದೆ. ಹಿರಿಯ ಅಧಿಕಾರಿಗಳ ಜತೆಗೆ ರ್ಚಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು.
| ರಮೇಶ ಜಾಧವ, ಪೌರಾಯುಕ್ತ, ಗದಗ-ಬೆಟಗೇರಿ ನಗರಸಭೆ

Share This Article

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…