More

    ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿ

    ಹೊಳೆಆಲೂರ: ಮೆಣಸಗಿ, ಹೊಳೆಆಲೂರ, ಹೊಳೆಮಣ್ಣೂರ, ಗಾಡಗೋಳಿ, ಹೊಳೆಹಡಗಲಿ, ಅಮರಗೋಳ ಸೇರಿದಂತೆ ನವಗ್ರಾಮಗಳ ಫಲಾನುಭವಿಗಳಿಗೆ ಶೀಘ್ರವೇ ಮನೆ ಹಂಚಿಕೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಣ್ಣ ಕೈಗಾರಿಕೆ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ಮೆಣಸಗಿ ಗ್ರಾಮದಲ್ಲಿ ಹೊಳೆಆಲೂರ- ಶಿರೋಳ ರಸ್ತೆ, ನವಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 50 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ, ಹಳೆಯ ಮೆಣಸಗಿಯಿಂದ ನವಗ್ರಾಮದ ಕೂಡು ರಸ್ತೆಗೆ 30 ಲಕ್ಷ ರೂ. ವೆಚ್ಚದ ಕಾಮಗಾರಿ, ಮೇಗೂರ ಗ್ರಾಮದಿಂದ ಮೇಗೂರ ಕ್ರಾಸ್​ವರೆಗಿನ ರಸ್ತೆ ಸುಧಾರಣೆಗೆ 65 ಲಕ್ಷ ರೂ. ವೆಚ್ಚದ ಕಾಮಗಾರಿ ಹಾಗೂ ಮೇಗೂರ ಕ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆಯಡಿ 20 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಕರೊನಾದಿಂದ ಆರ್ಥಿಕ ಚಟುವಟಿಕೆ ಕುಂಠಿತಗೊಂಡು ಅಭಿವೃದ್ಧಿ ಕೆಲಸಗಳಿಗೆ ಅಲ್ಪ ಹಿನ್ನಡೆಯಾಗಿತ್ತು. ಬಿಜೆಪಿ ಸರ್ಕಾರ ನೆರೆ ಹಾವಳಿ, ಕರೊನಾ ಯಶ್ವಸಿಯಾಗಿ ಎದುರಿಸಿದ್ದು, ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವಾಗಿ ಜರುಗಲಿವೆ. ಮಲಪ್ರಭಾ ನೆರೆ ಹಾವಳಿಗೆ ತುತ್ತಾಗಿರುವ ಹೊಳೆಆಲೂರ ಭಾಗದ ಎಲ್ಲ ಗ್ರಾಮಗಳಲ್ಲಿ ಶಾಲಾ ಕಟ್ಟಡ, ಸುಸಜ್ಜಿತ ರಸ್ತೆ, ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಒದಗಿಸಲಾಗುತ್ತದೆ. ಸಾರ್ವಜನಿಕರಿಗೆ ಸೌಲಭ್ಯ ಒದಗಿಸುವಲ್ಲಿ ಅಸಡ್ಡೆ ತೋರುವ ಅಧಿಕಾರಿಗಳ ಮೇಲೆ ನಿರ್ಧಾಕ್ಷಿ್ಷ್ಯಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

    ಜಿ.ಪಂ. ಸದಸ್ಯ ಶಿವಕುಮಾರ ನೀಲಗುಂದ, ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗದ ಮೋರ್ಚಾ ಅಧ್ಯಕ್ಷ ಅಶೋಕ ಹೆಬ್ಬಳ್ಳಿ, ಮಂಡಲ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ತಾ.ಪಂ. ಅಧ್ಯಕ್ಷೆ ಪ್ರೇಮಾ ನಾಯಕ, ತಾ.ಪಂ. ಸದಸ್ಯ ರಾಮನಗೌಡ ಪಾಟೀಲ, ಎಪಿಎಂಸಿ ಸದಸ್ಯ ಶಿವಾನಂದ ಅರಹುಣಸಿ, ಎ.ಪಿ. ಕುಲಕರ್ಣಿ, ಶರಣು ಬರಶಟ್ಟಿ, ಸುರೇಶ ಹುಡೇದಮನಿ, ಗಿರೀಶಗೌಡ ಚನ್ನಪ್ಪಗೌಡ್ರ, ಶ್ರೀಕಾಂತ ಗುರಮ್ಮನ್ನವರ, ಮುದಿಗೌಡ ಫಕೀರಗೌಡ್ರ, ಶಿವರಡ್ಡಿ ರಿತ್ತಿ, ಚೇತನಾ ಪಾಟೀಲ, ಆನಂದಪ್ಪ ಅರಹುಣಸಿ, ಶಿವಲಿಂಗಪ್ಪ ಅರಹುಣಸಿ, ಈರಪ್ಪ ದನದಮನಿ, ಕೇದಾರಗೌಡ ಮಣ್ಣೂರ, ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts