More

    ಕಾವೇರಿಗಾಗಿ ಮೈತ್ರಿ ಗೆಲುವು ಅನಿವಾರ್ಯ

    ಶ್ರೀರಂಗಪಟ್ಟಣ: ದೇಶ ರಕ್ಷಣೆ ಹಾಗೂ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಮತ್ತು ರಾಜ್ಯದ ನೆಲ, ಜನ, ಜನರ ಸುರಕ್ಷತೆಗೆ ಎಚ್.ಡಿ.ಕುಮಾರಸ್ವಾಮಿ ಅವರ ಅಗತ್ಯತೆಯಿದ್ದು, ಕ್ಷೇತ್ರದ ಜನರು ಜವಾಬ್ದಾರಿಯಿಂದ ಮತಚಲಾಯಿಸಬೇಕು ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮನವಿ ಮಾಡಿದರು.

    ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಾದ ಬೊಮ್ಮೂರು ಅಗ್ರಹಾರ, ಬ್ರಹ್ಮಪುರ, ನಗುವನಹಳ್ಳಿ, ಕಾಲನಿ, ಚಂದಗಾಲು, ಹೊಸೂರು, ಹೆಬ್ಬಾಡಿ ಹುಂಡಿ, ಚಿಕ್ಕಅಂಕನಹಳ್ಳಿ ಸೇರಿದಂತೆ ಮೇಳಾಪುರದಲ್ಲಿ ಶುಕ್ರವಾರ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರೊಂದಿಗೆ ಮೈತಿ ಅಭ್ಯರ್ಥಿ ಎಚ್‌ಡಿಕೆ ಪರ ಮತಯಾಚಿಸಿ ಮಾತನಾಡಿದರು.

    ಎಚ್‌ಡಿಕೆ ಮುಖ್ಯಮಂತ್ರಿಯಾಗಿದ್ದ ವೇಳೆ ಕ್ಷೇತ್ರ ಸೇರಿದಂತೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಭರಪೂರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇಂದು ಜೀವನದಿ ಕಾವೇರಿ ಹಾಗೂ ಮೇಕೆದಾಟು ನಿರ್ಮಾಣ ವಿಚಾರದಲ್ಲಿ ಕನ್ನಡಿಗರು ಹಾಗೂ ಕಾವೇರಿ ಕಣಿವೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನಮ್ಮ ಪ್ರತಿನಿಧಿಯಾಗಿ ಕೇಂದ್ರದಲ್ಲಿ ದನಿ ಎತ್ತಲು ಕುಮಾರಣ್ಣನ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.

    ಕಾಂಗ್ರೆಸ್ ಕೋಟಿವೀರರನ್ನು ರಾಜಕಾರಣಕ್ಕೆ ಕರೆತಂದು ಹಣದ ಆಮಿಷವೊಡ್ಡಿ ಚುನಾವಣೆ ಗೆಲ್ಲಲು ಹಲವು ತಂತ್ರ ರೂಪಿಸುತ್ತಿದೆ. ಗ್ಯಾರಂಟಿ ಹೆಸರಲ್ಲಿ ನಮ್ಮ ಹಣವನ್ನು ನಮಗೆ ಹಂಚುತ್ತಿದೆ. ಈ ಬಗ್ಗೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಒಗಟ್ಟಿನಿಂದ ಜನರನ್ನು ಜಾಗೃತಿಗೊಳಿಸಬೇಕು ಎಂದರು.

    ಏ.21ರಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಕುಮಾರಣ್ಣ ಅವರ ಪರ ಪ್ರಚಾರಕ್ಕಾಗಿ ಶ್ರೀರಂಗಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಅಂದು ನಡೆಯುವ ಬೃಹತ್ ಸಮಾವೇಶಕ್ಕೆ ಮುಖಂಡರು, ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.

    ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ದಶರಥ್, ಕಾರ್ಯಾಧ್ಯಕ್ಷ ನಗುವನಹಳ್ಳಿ ಶಿವಸ್ವಾಮಿ, ಜೆಡಿಎಸ್ ಯುವ ಮುಖಂಡ ಸಂಜಯ್, ಮೇಳಾಪುರ ಸೂಸೈಟಿ ನಿರ್ದೇಶಕ ಚಂದಗಾಲು ಕೃಷ್ಣಪ್ಪ, ನಗುವನಹಳ್ಳಿ ಗ್ರಾಪಂ ಸದಸ್ಯರಾದ ಲತಾ, ಸುಮಾ, ಲೋಕೇಶ್ ಬಾಬು, ಮುಖಂಡರಾದ ಧನರಾಜ್, ಪುಟ್ಟಸ್ವಾಮಿ, ತಿಲಕ್, ಪ್ರದೀಪ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts