More

    ರೈತರಿಗೆ ನೀರಿನ ಕೊರತೆ ನಿವಾರಣೆ

    ಇಂಡಿ: ಸರ್ಕಾರದ ಮೇಲೆ ಒತ್ತಡ ಹೇರಿ ತಾಲೂಕಿನ ವಿವಿಧ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದ್ದರಿಂದ ವಿವಿಧ ಗ್ರಾಮಗಳ ರೈತರು ಸಂಸದ ರಮೇಶ ಜಿಗಜಿಣಗಿ ಅವರಿಗೆ ಇತ್ತೀಚೆಗೆ ಅಥರ್ಗಾ ಗ್ರಾಮದಲ್ಲಿ ಸನ್ಮಾನಿಸಿದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಕೋಟ್ನಾಳ, ಕ್ಯಾತನಕೇರಿ, ಲಿಂಗದಳ್ಳಿ, ಅಥರ್ಗಾ, ರಾಜನಾಳ, ಬೋಳೆಗಾಂವ, ಹಂಜಗಿ, ನಿಂಬಾಳ, ತಡವಲಗಾ ಮುಂತಾದ ಗ್ರಾಮಗಳ ಜನ ಜಾನುವಾರು ನೀರಿನ ಸಮಸ್ಯೆಯಿಂದ ಬಳಲಿ ಈ ಭಾಗದ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಕೆರೆಗಳು ತುಂಬಿರುವುದರಿಂದ ಈಗ ಆ ಕೊರತೆ ನಿವಾರಣೆಯಾಗಿದೆ ಎಂದರು.

    ರೈತರ ಬಾಳು, ಸುಖ ಸಮೃದ್ಧಿಯಾಗಲಿ ಎಂದು ತಾಲೂಕಿನ ವಿವಿಧ ಗ್ರಾಮಗಳ ಕೆರೆ ತುಂಬುವ ಯೋಜನೆಗೆ 110 ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಿಂದ ಅಂರ್ಜಲಮಟ್ಟ ಹೆಚ್ಚಾಗಿ ರೈತರ ಬೋರ್‌ವೇಲ್‌ಗಳು, ತೆರೆದ ಬಾವಿಗಳು ತುಂಬುತ್ತವೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

    ಪ್ರವೀಣ ಮೇತ್ರಿ, ಭೀಮು ಚವಡಿಹಾಳ, ಕಾಂತು ಕಟ್ಟಿ, ಅರವಿಂದ ಗಿಡಗಂಟಿ, ಅಪ್ಪು ರೂಗಿ, ಶೇಖಯ್ಯಸ್ವಾಮಿ ಹಿರೇಮಠ, ಅಣ್ಣಪ್ಪಗೌಡ ಪಾಟೀಲ, ಬಸು ಇಂಗಳೇಶ್ವರ, ಶಿವಯ್ಯ ಹಿರೇಮಠ, ಕುಲಪ್ಪ ಹಿಟ್ನಳ್ಳಿ, ನಾಗುಗೌಡ ಪಾಟೀಲ, ಅಶೋಕಗೌಡ ಬಿರಾದಾರ, ಶ್ರೀಶೈಲ ನಾಗಣಸೂರ, ಈರಪ್ಪ ಕೂಡಗಿ, ಸುನೀಲ ರಬಶೇಟ್ಟಿ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts