More

    ಸಂಸದನಿಂದ ರೇಪ್​ ಆರೋಪಿಸಿ ಸುಪ್ರೀಂ ಕೋರ್ಟ್​ ಮುಂದೆ ಬೆಂಕಿ ಹಚ್ಚಿಕೊಂಡರು!

    ನವದೆಹಲಿ: ಉತ್ತರಪ್ರದೇಶದ ಸಂಸದನಿಂದ ಅತ್ಯಾಚಾರಕ್ಕೊಳಗಾದ ಯುವತಿಗೆ ನ್ಯಾಯ ಸಿಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್​ ಎದುರಿಗೆ ಬೆಂಕಿಗೆ ಆಹುತಿಯಾಗಿದ್ದ 27 ವರ್ಷದ ಯುವಕ ಶನಿವಾರ ಸಾವಪ್ಪಿದ್ದಾನೆ. ಅವನೊಂದಿಗೆ ಬೆಂಕಿ ಹಚ್ಚಿಕೊಂಡಿದ್ದ 24 ವರ್ಷದ ಸಂತ್ರಸ್ತೆಯು ಶೇಕಡ 80 ರಷ್ಟು ಸುಟ್ಟ ಗಾಯಗಳೊಂದಿಗೆ ವೆಂಟಿಲೇಟರ್​ ಆಧಾರದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎನ್ನಲಾಗಿದೆ.

    ದೆಹಲಿ ವಿವಿ ಪದವೀಧರನಾದ ಮೃತನು ಆಗಸ್ಟ್​ 16 ರಂದು, ತನ್ನ ಸ್ನೇಹಿತೆಯಾದ ರೇಪ್​ ಸಂತ್ರಸ್ತೆಯೊಂದಿಗೆ ದೆಹಲಿಗೆ ಬಂದಿದ್ದ. ಸುಪ್ರೀಂ ಕೋರ್ಟ್​ನ ಗೇಟ್​ ನಂ.4 ಹೊರಗೆ ಬೆಂಕಿ ಹಚ್ಚಿಕೊಳ್ಳುವ ಮುನ್ನ ಈರ್ವರೂ ಫೇಸ್​ಬುಕ್​ ಲೈವ್​ನಲ್ಲಿ ಮಾಡಿದ ವಿಡಿಯೋದಲ್ಲಿ ಬಹುಜನ್ ಸಮಾಜ್​ ಪಾರ್ಟಿ(ಬಿಎಸ್ಪಿ)ಯ ಸಂಸದ ಅತುಲ್ ರೈ ಯುವತಿಯನ್ನು 2019 ರ ಜೂನ್​ನಲ್ಲಿ ಬಲಾತ್ಕಾರ ಮಾಡಿದ್ದಾಗಿ ಆರೋಪಿಸಿದ್ದರು. ಈ ಬಗ್ಗೆ ಯುಪಿ ಪೊಲೀಸರು ಒಂದು ವರ್ಷದಿಂದ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದ್ದರು ಎಂದು ವರದಿಗಳು ತಿಳಿಸಿವೆ.

    ಇದನ್ನೂ ಓದಿ: ಅಪ್ರಾಪ್ತ ಬಾಲಕಿಗೆ ಕಿರುಕುಳ: ಪೊಲೀಸ್ ಪೇದೆ ಬಂಧನ, ಕರ್ತವ್ಯದಿಂದ ಅಮಾನತು

    ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಈ ಯುವಕ ಮತ್ತು ಯುವತಿಯನ್ನು ನಗರದ ರಾಮ್​ ಮನೋಹರ್​ ಲೋಹಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಯುವಕನಿಗೆ ತಕ್ಷಣವೇ ಅಗತ್ಯ ಶಸ್ತ್ರಚಿಕಿತ್ಸೆ ಮಾಡಿ ಶುಶ್ರೂಷೆ ನೀಡಿದರೂ, ಚಿಕಿತ್ಸೆ ಫಲಿಸದೆ ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್)

    ಇವರು ತಾಲಿಬಾನ್​ ಬಗ್ಗೆ ಪೋಸ್ಟ್​ ಮಾಡಿ, ಪೊಲೀಸರ ಅತಿಥಿಯಾದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts