More

    ನಿವೇಶನ ಹಂಚಿಕೆಯಲ್ಲಿ ವಿಳಂಬ ಆರೋಪ

    ಶಿರಹಟ್ಟಿ: ಆಶ್ರಯ ಮನೆಗಳ ನಿವೇಶನ ಹಂಚಿಕೆಯಲ್ಲಿ ಪಟ್ಟಣ ಪಂಚಾಯಿತಿ ವಿಳಂಭ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಫಲಾನುಭವಿ ಮಹಿಳೆಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

    ಕಡು ಬಡವರಿಗಾಗಿ ರಾಜೀವ ಗಾಂಧಿ ವಸತಿ ನಿಗಮದಡಿ ಆಶ್ರಯ ಮನೆಗಳ ನಿರ್ವಣಕ್ಕಾಗಿ 3 ವರ್ಷಗಳ ಹಿಂದೆಯೇ ಜಮೀನು ಖರೀದಿಸಲಾಗಿದೆ. ಆದರೆ, ನಿವೇಶನ ಹಂಚಿಕೆ ಮಾಡಲು ಮೀನಮೇಷ ಮಾಡಲಾಗುತ್ತಿದೆ ಪ್ರತಿಭಟನಾಕಾರರು ದೂರಿದರು.

    ಪಟ್ಟಣದ ಮಾರುತಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ರಸ್ತೆಯಲ್ಲಿ ಸಾಗಿತು. ಬಳಿಕ ಪಪಂ ಮುಖ್ಯಾಧಿಕಾರಿ ಮಲ್ಲೇಶ ಎಂ. ಅವರಿಗೆ ಮನವಿ ಸಲ್ಲಿಸಿದರು.

    ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ‘2017ರಲ್ಲಿ ಆಶ್ರಯ ಮನೆಗಳ ನಿರ್ವಣಕ್ಕಾಗಿ ಪಪಂನಿಂದ 5 ಎಕರೆ ಜಮೀನು ಖರೀದಿಸಿ 219 ನಿವೇಶನ ಸಿದ್ಧಪಡಿಸಿ, ಹಂಚಿಕೆ ಮಾಡುವ ಸಂಬಂಧ ಬಾಡಿಗೆ ಮನೆ ಹಾಗೂ ಗುಡಿಸಲಿನಲ್ಲಿ ವಾಸಿಸುವವರಿಂದ ಅರ್ಜಿ ಪಡೆಯಲಾಯಿತು. ಆದರೆ, ಅಂದು ಅಧಿಕಾರದಲ್ಲಿದ್ದ ಪಪಂ ಸದಸ್ಯರು ನಿವೇಶನ ಕೊಡಿಸುವ ಆಮಿಷವೊಡ್ಡಿ ನಮ್ಮಿಂದ 25 ಸಾವಿರ ರೂ. ಹಣ ಪಡೆದಿದ್ದಾರೆ. ಈಗ ನಿವೇಶನ ನೀಡದೇ ಸತಾಯಿಸುತ್ತಿದ್ದಾರೆ. ಒಂದು ವೇಳೆ ನಿವೇಶನ ನೀಡದಿದ್ದರೆ ಪಪಂ ಕಚೇರಿ ಎದುರು ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

    ಮನವಿ ಸ್ವೀಕರಿಸಿದ ತಹಸೀಲ್ದಾರ್ ಗೋಣೆಣ್ಣವರ, ಪಪಂ ಮುಖ್ಯಾಧಿಕಾರಿಯನ್ನು ಕರೆಸಿ ಸಮಗ್ರ ಮಾಹಿತಿ ಪಡೆದುಕೊಂಡು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸ್ತುತೇನೆ ಎಂದು ಭರವಸೆ ನೀಡಿದರು. ನಂತರ ಮಹಿಳೆಯರು ಪ್ರತಿಭಟನೆ ಕೈಬಿಟ್ಟರು.

    ಮನ್ಸೂರ ಅಹ್ಮದ ಮಕಾನದಾರ, ದೇವಪ್ಪ ಬಟ್ಟೂರ, ಗೌಸುಸಾಬ ಕಲಾವಂತ, ಈರಣ್ಣ ಬಾಗೇವಾಡಿ, ಸಹರಾಬಾನು ಒಂಟಿ, ಯೋಗಿತಾ ದೇಸಾಯಿಪಟ್ಟಿ, ಶೋಭಾ ತಳವಾರ, ಶಾಂಭವಿ ಹಿರೇಮಠ, ರೇಖಾ ಮುಧೋಳಕರ, ಸವಿತಾ ಗಾಮನಗಟ್ಟಿ, ಪುಷ್ಪಾ ಪವಾಡಶೆಟ್ಟರ, ಬಸವಣ್ಣೆವ್ವ ಡೊಂಕಬಳ್ಳಿ, ಕಾಳವ್ವ ದೇಸಾಯಿಪಟ್ಟಿ, ಈರಮ್ಮ ನವಲಗುಂದ, ನೂರಜಾನ್ ಮುಜಾವರ, ಮಲ್ಲವ್ವ ಕಾಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts