More

    ಎಲ್ಲ ರಾಜ್ಯಗಳಲ್ಲೂ ಯೂನಿಟಿ ಮಾಲ್​ ಸ್ಥಾಪಿಸಿ ಪ್ರಾದೇಶಿಕ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ

    ನವದೆಹಲಿ: ಪ್ರತಿ ರಾಜ್ಯದಲ್ಲೂ ಯೂನಿಟಿ ಮಾಲ್​ ಸ್ಥಾಪನೆ ಮಾಡಿ, ಅದರ ಮೂಲಕ ದೇಶೀಯ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

    ಇದನ್ನೂ ಓದಿ: ಕೇಂದ್ರ ಬಜೆಟ್ 2023: ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಪೂರ್ಣ ಪಟ್ಟಿ…

    2023-24ನೇ ಸಾಲಿನ ಕೇಂದ್ರ ಬಜೆಟ್​ ಮಂಡಿಸಿ ಮಾತನಾಡಿರುವ ವಿತ್ತ ಸಚಿವ ನಿಮರ್ಲಾ ಸೀತಾರಾಮನ್​, ‘ಪ್ರತೀ ರಾಜ್ಯದ ರಾಜಧಾನಿಯಲ್ಲೂ ಯೂನಿಟಿ ಮಾಲ್​ ಹೆಸರಿನ ಒಂದೊಂದು ಮಾಲ್​ ಸ್ಥಾಪಿಸಿ, ಅದರ ಮೂಲಕ ಪ್ರಾದೇಶಿಕ ಉತ್ಪನ್ನಗಳು (ಜಿಯಾಗ್ರಫಿಕಲ್​ ಇಂಡಿಕೇಶನ್) ಮತ್ತು ಕರಕುಶಲ ವಸ್ತುಗಳನ್ನು ಅಲ್ಲಿ ಮಾರಾಟ ಮಾಡುವುದಕ್ಕೆ ಉತ್ತೇಜಿಸಲಾಗುತ್ತದೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಏಕಲವ್ಯ ಮಾದರಿ ಶಾಲೆಗಳ ನಿರ್ಮಾಣ; 38,800 ಶಿಕ್ಷಕರ ನೇಮಕ

    ಈ ಮಾಲ್​ಗಳಲ್ಲಿ ಆಯಾ ರಾಜ್ಯದ ವಿಭಿನ್ನ ಪ್ರದೇಶಗಳಲ್ಲಿ ಪ್ರಸಿದ್ಧವಾಗಿರುವ ಉತ್ಪನ್ನಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದ. ಉದಾಹರಣೆಗೆ, ಬೆಂಗಳೂರಿನಲ್ಲಿ ಯೂನಿಟಿ ಮಾಲ್​ ಸ್ಥಾಪನೆಯಾದರೆ, ಅಲ್ಲಿ ಚೆನ್ನಪಟ್ಟಣದ ಗೊಂಬೆ, ಬ್ಯಾಡಗಿ ಮೆಣಸಿನಕಾಯಿ, ಇಳಕಲ್​ ಸೀರೆ, ಮೈಸೂರು ರೇಷ್ಮೆ ಸೀರೆ ಸೇರಿದಂತೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದೆ.

    ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್​! ಉಳಿತಾಯಕ್ಕೆ ಹೊಸ ಯೋಜನೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts