More

    ಅಖಿಲ ಭಾರತ ರಜತ ಕೊಂಕಣಿ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಗೆ ಮೈಕಲ್ ಡಿಸೋಜ ಸಾರಥ್ಯ

    ಮಂಗಳೂರು: ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಮತ್ತು ಕಲೆಯ ಶ್ರೇಯೋಭಿವೃದ್ದಿಗಾಗಿ ವಿಷನ್ ಕೊಂಕಣಿ ಕಾರ್ಯಕ್ರಮ ಮೂಲಕ ಅವಿರತ ಶ್ರಮಿಸುತ್ತಿರುವ ಅನಿವಾಸಿ ಉದ್ಯಮಿ ಮತ್ತು ಸಮಾಜ ಕಲ್ಯಾಣ ಕಾರ್ಯಕರ್ತ ಮೈಕಲ್ ಡಿಸೋಜ 25ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನವೆಂಬರ್ 4, 5ರಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಆವರಣದಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಪ್ರಸ್ತುತ ಅಬುಧಾಬಿಯಲ್ಲಿರುವ ಮೈಕಲ್ ಡಿಸೋಜ, ವಿಶ್ವ ಕೊಂಕಣಿ ಕೇಂದ್ರ ಸಂಸ್ಥಾಪಕ ಬಸ್ತಿ ವಾಮನ ಶೆಣೈಯವರ ಅಭಿಮಾನಿ ಹಾಗೂ ನಿಕಟವರ್ತಿ ಆಗಿದ್ದವರು ದೇಶ -ವಿದೇಶಗಳಲ್ಲಿ ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಮತ್ತು ಕಲೆಯ ಕಾರ್ಯಕ್ರಮಗಳಿಗೆ ನಿರಂತರ ಪೋಷಕರಾಗಿದ್ದ ಇವರು ಕೊಂಕಣಿ ಲೇಖಕರಿಗೆ ಪುಸ್ತಕ ಪ್ರಕಟಿಸಲು 40 ಲಕ್ಷ ರೂ. ಅನುದಾನ, ಕೊಂಕಣಿ ಗೀತ ಸಾಹಿತ್ಯ, ಸಂಗೀತ ಸಂಯೋಜನೆ ಮತ್ತು ಪ್ರಸ್ತುತಿಗಾಗಿ 10 ಲಕ್ಷ ರೂ. ಹಾಗೂ ಕೊಂಕಣಿ ಸಿನಿಮಾಕ್ಕಾಗಿ 25 ಲಕ್ಷ ರೂ. ವಿಷನ್ ಕೊಂಕಣಿ ಕಾರ್ಯಕ್ರಮದ ಮೂಲಕ ಮುಡಿಪಾಗಿಟ್ಟಿದಾರೆ. ಕೊಂಕಣಿ ಭಾಷಿಕ ವಿದ್ಯಾರ್ಥಿಗಳಿಗೆ 25 ಕೋಟಿ ರೂ. ಮೌಲ್ಯದ ಎಜುಕೇರ್ ವಿದ್ಯಾರ್ಥಿ ನಿಧಿ ಸ್ಥಾಪಿಸಿದ್ದು ಸಿಒಡಿಪಿ, ಸಂಸ್ಥೆಯ ಮೂಲಕ ಈವರೆಗೆ ಸುಮಾರು 3,500 ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನದ ಪ್ರಯೋಜನ ಪಡೆದಿದ್ದಾರೆ.

    ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ.ನಂದಗೋಪಾಲ ಶೆಣೈ ಮತ್ತು ಸಾಹಿತಿ ಗೋಕುಲದಾಸ ಪ್ರಭು ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷರಾಗಿದ್ದು, ಕೊಂಕಣಿ ಕವಿ ಟೈಟಸ್ ನೊರೊನ್ಹಾ ಕಾರ್ಯದರ್ಶಿ ಮತ್ತು ಪತ್ರಕರ್ತ ಎಚ್.ಎಂ.ಪೆರ್ನಾಲ್ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದಾರೆ.

    ಇತ್ತೀಚೆಗೆ ನಲಂದಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ, ಕವಿ ಮೆಲ್ವಿನ್ ರೋಡ್ರಿಗಸ್, ಅಖಿಲ ಭಾರತ ಕೊಂಕಣಿ ಪರಿಷದ್ ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ ಮತ್ತು ಕೊಂಕಣಿ ಶಿಕ್ಷಣ ತಜ್ಞ ಡಾ.ಕಸ್ತೂರಿ ಮೋಹನ್ ಪೈ ಮಾರ್ಗದರ್ಶನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಉಪಸಮಿತಿಗಳನ್ನು ರಚಿಸಲಾಗಿದೆ. ಆರ್ಥಿಕ ಸಮಿತಿಗೆ ಸ್ಟೀಫನ್ ಪಿಂಟೊ ಬೆಂದೂರ್ ಮತ್ತು ಓಸ್ವಾಲ್ಡ್ ರೋಡ್ರಿಗಸ್ ಬಿಜೈ, ವಸತಿ ಸಮಿತಿಗೆ ವಿನ್ಸೆಂಟ್ ಪಿಂಟೊ, ಫ್ಲಾಯ್ಡಾ ಕಿರಣ್ ಮತ್ತು ಜೆರಿ ಕೊನ್ಸೆಸೊ, ನೋಂದಣಿ ಮತ್ತು ಸ್ವಯಂಸೇವಕ ಸಮಿತಿಗೆ ಸುಚಿತ್ರಾ ಶೆಣೈ ಮತ್ತು ಫೆಲ್ಸಿ ಲೋಬೊ, ಕಾರ್ಯಕ್ರಮ ಸಮಿತಿಗೆ ಡಾ.ಹನುಮಂತ್ ಚೋಪ್ಡೇಕರ್ ಮತ್ತು ಡಾ.ಜಯಂತಿ ನಾಯ್ಕ, ವೇದಿಕೆ ನಿರ್ವಹಣಾ ಸಮಿತಿಗೆ ಅನ್ವೇಷಾ ಸಿಂಘಬಾಳ್, ಮಾಧ್ಯಮ ಸಮಿತಿಗೆ ಸ್ಟಾೃನಿ ಬೇಳಾ ಮತ್ತು ಪ್ರವೀಣ್ ತಾವ್ರೊ, ಮುದ್ರಣ-ಸ್ಮರಣ ಸಂಚಿಕೆ ಸಮಿತಿಗೆ ಟೈಟಸ್ ನೊರೊನ್ಹಾ -ಪ್ರಮುಖರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts