More

    ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಇಬ್ಬರು ಶಂಕರಾಚಾರ್ಯರ ಬೆಂಬಲ: ವಿಎಚ್‌ಪಿ

    ನವದೆಹಲಿ: ಜನವರಿ 22ರಂದು ರಾಮಮಂದಿರದಲ್ಲಿ ನಡೆಯುವ ಪ್ರಾಣಪ್ರತಿಷ್ಠಾ ಕಾರ್ಯಕ್ರಮದಲ್ಲಿ ನಾಲ್ವರು ಶಂಕರಾಚಾರ್ಯರು ಭಾಗವಹಿಸುತ್ತಿಲ್ಲ ಎಂಬುದು ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಹೊರಿಸುತ್ತಿರುವ ಪ್ರಮುಖ ಆರೋಪಗಳಲ್ಲಿ ಒಂದಾಗಿದೆ. ಆದರೆ ಅವರಲ್ಲಿ ಇಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸದಿದ್ದರೂ ಕಾರ್ಯಕ್ರಮಕ್ಕೆ ಬೆಂಬಲ ಘೋಷಿಸಿದ್ದಾರೆ ಎನ್ನಲಾಗಿದೆ. ನಾಲ್ವರು ಶಂಕರಾಚಾರ್ಯರಲ್ಲಿ ಇಬ್ಬರು ಮಾತ್ರ ವಿರೋಧಿಸಿದರೆ ಉಳಿದ ಇಬ್ಬರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ವಿಎಚ್‌ಪಿ ಹೇಳಿಕೊಂಡಿದೆ.

    ನಾಲ್ವರು ಶಂಕರಾಚಾರ್ಯರಲ್ಲಿ ಇಬ್ಬರು ಮಾತ್ರ ವಿರೋಧಿಸಿದ್ದಾರೆ ಮತ್ತು ಇತರರು ಬೆಂಬಲಿಸುತ್ತಿದ್ದಾರೆ ಎಂದು ವಿಎಚ್‌ಪಿ ಹೇಳಿಕೊಂಡಿದೆ. ಹೇಳಿಕೆಗಳ ಪ್ರಕಾರ, ಶೃಂಗೇರಿ ಶಂಕರಾಚಾರ್ಯರು ‘ಪ್ರಾಣ ಪ್ರತಿಷ್ಠಾ’ವನ್ನು ಸ್ವಾಗತಿಸುತ್ತಿದ್ದಾರೆ ಎಂದು ವಿಎಚ್‌ಪಿ ಮುಖಂಡರು ಹೇಳಿದ್ದಾರೆ. ಇವರಲ್ಲದೆ ಪುರಿ ಶಂಕರಾಚಾರ್ಯರೂ ಸಹ ಸಮಾರಂಭದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಜ್ಯೋತಿರ್ಪೀಠ ಶಂಕರಾಚಾರ್ಯರು ಮಾತ್ರ ಸಮಾರಂಭದ ವಿರುದ್ಧ ಮಾತನಾಡಿದ್ದಾರೆ. ಇತರ ಮೂವರು ಶಂಕರಾಚಾರ್ಯರು ಈಗ ಸಮಾರಂಭವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಶೃಂಗೇರಿಯ ಶಾರದ ಪೀಠದ ಶಂಕರಾಚಾರ್ಯರು, ಸ್ವಾಮಿ ಭಾರತೀ ತೀರ್ಥರು ಮತ್ತು ದ್ವಾರಕಾ ಪೀಠ ಶಂಕರಾಚಾರ್ಯರು ಸಹ ಸನಾತನ ಧರ್ಮದ ಬೆಂಬಲಿಗರಿಗೆ ಇದು ಸಂತೋಷದ ವಿಷಯ ಎಂದು ಹೇಳಿದ್ದಾರೆ. ಪೀಠದ ಮಾಧ್ಯಮ ವಿಭಾಗವು ಕೂಡ ಹೇಳಿಕೆ ನೀಡಿದ್ದು, ವರದಿಗಳ ಪ್ರಕಾರ ಶೃಂಗೇರಿ ಪೀಠ ಕೂಡ ಇದೇ ಹೇಳಿಕೆ ನೀಡಿದೆ. ಕೆಲ ಸಾಮಾಜಿಕ ಜಾಲತಾಣಗಳು ಶೇರ್ ಮಾಡಿರುವ ಪೋಸ್ಟ್ ಗಳಲ್ಲಿ ಹೇಳಿರುವಂತೆ ಪ್ರಾಣ ಪ್ರತಿಷ್ಠೆಗೆ ಶಂಕರಾಚಾರ್ಯರರು ವಿರೋಧದ ಸಂದೇಶ ನೀಡಿಲ್ಲ ಎನ್ನಲಾಗಿದ್ದು, ಇದು ಅಪಪ್ರಚಾರ, ಶಂಕರಾಚಾರ್ಯರು ಸಮಾರಂಭದಲ್ಲಿ ಭಾಗವಹಿಸುವ ಭಕ್ತರನ್ನು ಆಶೀರ್ವದಿಸುತ್ತಾರೆ ಎಂದು ಹೇಳಲಾಗುತ್ತಿದೆ.

    ಜೋಶಿ ಮಠ ಜ್ಯೋತಿರ್ಪೀಠ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಈ ಹಿಂದೆ ನಾಲ್ವರು ಶಂಕರಾಚಾರ್ಯರಲ್ಲಿ ಯಾರೂ ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ವಿಡಿಯೋ ಸಂದೇಶದ ಮೂಲಕ ಹೇಳಿದ್ದರು. ಕಾಮಗಾರಿಯನ್ನು ಪೂರ್ಣಗೊಳಿಸದೆ ದೇವಸ್ಥಾನ ಉದ್ಘಾಟನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಅವಿಮುಕ್ತೇಶ್ವರಾನಂದ ಸರಸ್ವತಿ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ರಾಮರಾಜ್ಯ ಪರಿಷತ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. 

    ಈ ಕಾರಣಕ್ಕಾಗಿ ಯೂಟ್ಯೂಬ್‌ಗೆ ನೋಟಿಸ್ ನೀಡಿದ ಎನ್​​ಸಿಪಿಸಿಆರ್​​​; ಎಫ್‌ಐಆರ್ ಕೂಡ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts