More

    ಪುತ್ರಿಯ ಅಪಹರಣ ಯತ್ನ ವಿಫಲಗೊಳಿಸಿದ ದಿಟ್ಟ ಮಹಿಳೆ; ಕಿಡ್ನಾಪ್​ಗೆ ಸುಪಾರಿ ಕೊಟ್ಟಿದ್ದು ಯಾರು ಗೊತ್ತಾ…?

    ನವದೆಹಲಿ: ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಯೊಳಗೆ ಬಂದ ದುಷ್ಕರ್ಮಿಗಳು ತನ್ನ ಪುತ್ರಿಯನ್ನು ಅಪಹರಿಸಲು ಮಾಡಿದ ಪ್ರಯತ್ನವನ್ನು ತಾಯಿಯೊಬ್ಬಳು ವಿಫಲಗೊಳಿಸಿದ್ದಾಳೆ. ಈಕೆ ನೀರು ತರಲು ಒಳಹೋದಾಗ ಅಲ್ಲಿಯೇ ಆಟವಾಡುತ್ತಿದ್ದ 4 ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಬೈಕು ಹತ್ತಿ ಪರಾರಿ ಆಗಬೇಕು ಎನ್ನುವಷ್ಟರಲ್ಲಿ ಹೊರಬಂದ ಮಹಿಳೆ ಅಪಹರಣಕಾರನ ಕೈಯಿಂದ ಮಗುವನ್ನು ಕಿತ್ತುಕೊಂಡು ರಕ್ಷಿಸಿಕೊಂಡಿದ್ದಾಳೆ.

    ಮಹಿಳೆಯ ಕೂಗು ಕೇಳಿ ಹೊರಬಂದ ನೆರೆಹೊರೆಯವರು ಅಪಹರಣಕಾರರನ್ನು ಸುತ್ತುವರಿಯುತ್ತಿದ್ದಂತೆ ಇಬ್ಬರು ಅಪಹರಣಕಾರರು ಓಡಿ ಹೋಗಿ ತಪ್ಪಿಸಿಕೊಂಡಿದ್ದರು. ಆದರೆ, ಬೈಕ್​ನ ನೋಂದಣಿ ಸಂಖ್ಯೆ ಆಧರಿಸಿ ಬೈಕ್​ ಚಾಲಕ ಧೀರಜ್​ನನ್ನು (26) ಪೊಲೀಸರು ಬಂಧಿಸಿದ್ದರು. ಈತ ಕೊಟ್ಟ ಮಾಹಿತಿ ಆಧರಿಸಿ, ಅಪಹರಣಕ್ಕೆ ಒಳಗಾಗಬೇಕಿದ್ದ ಬಾಲಕಿಯ ಚಿಕ್ಕಪ್ಪ ಉಪೇಂದ್ರನನ್ನೂ ಬಂಧಿಸಿದ್ದಾರೆ.

    ಉಪೇಂದ್ರ ಕ್ಯಾಸಿನೋ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ. ಅದನ್ನು ತೀರಿಸಲಾಗದೆ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದ. ಸಾಲ ತೀರಿಸಲು ಗಾರ್ಮೆಂಟ್​ ಅಂಗಡಿ ನಡೆಸುತ್ತಿದ್ದು ತಕ್ಕಮಟ್ಟಿಗೆ ಸ್ಥಿತಿವಂತನಾಗಿದ್ದ ಅಣ್ಣ ತರುಣ್​ನಿಂದ 35 ಲಕ್ಷ ರೂ. ಹಣ ವಸೂಲಿ ಮಾಡಲು ಯೋಜನೆ ರೂಪಿಸಿದ. ಇದಕ್ಕಾಗಿ ಆತ ತರುಣ್​ನ ಪುತ್ರಿಯನ್ನೇ ಅಪಹರಿಸುವ ಸಂಚು ರೂಪಿಸಿದ್ದ.

    ಇದನ್ನೂ ಓದಿ: ಹಾಲುಣಿಸಿದರೆ ಸೋಂಕು ಹರಡಲ್ಲ: ಸರ್ಕಾರಿ ಡೆಲಿವರಿ ಆಸ್ಪತ್ರೆಗೆ ಹೆಚ್ಚಾಗಿದೆ ಬೇಡಿಕೆ!

    ಅದರಂತೆ ತನ್ನ ಸ್ನೇಹಿತ ಧೀರಜ್​ಗೆ 1 ಲಕ್ಷ ರೂ.ಗೆ ಸುಪಾರಿ ಕೊಟ್ಟು ಮಗುವನ್ನು ಅಪಹರಿಸುವಂತೆ ಸೂಚಿಸಿದ್ದ. ಧೀರಜ್​ ತನ್ನ ಸಹಚರನ ಜತೆಗೆ ಪೂರ್ವ ದೆಹಲಿಯ ಶಾಕಾರ್​ಪುರ್ ಬಡಾವಣೆಯಲ್ಲಿರುವ ತರುಣ್​ ಮನೆಗೆ ಮಂಗಳವಾರ ಸಂಜೆ 4 ಗಂಟೆಗೆ ಬಂದಿದ್ದ. ​ ತಾನು ಬೈಕ್​ನಲ್ಲಿ ಕುಳಿತು, ಕುಡಿವ ನೀರು ಕೇಳುವ ನೆಪದಲ್ಲಿ ತರುಣ್​ ಮನೆಯೊಳಗೆ ಕಳುಹಿಸಿದ್ದ. ಸಂಚಿನಂತೆ ಧೀರಜ್​ ಸಹಚರ ಮಗುವನ್ನು ಎತ್ತಿಕೊಂಡು ಬಂದಿದ್ದ. ಬೈಕ್​ ಹತ್ತಬೇಕೆನ್ನುವಷ್ಟರಲ್ಲಿ ಮನೆಯಿಂದ ಓಡೋಡಿ ಬಂದ ತರುಣ್​ ಪತ್ನಿ ಮಗುವನ್ನು ಬಲವಾಗಿ ಹಿಡಿದುಕೊಂಡು ಎಳೆದಾಡಿ ಆತನಿಂದ ಬಿಡಿಸಿಕೊಂಡಿದ್ದಳು. ಸಹಚರ ಮಗುವನ್ನು ಬಿಟ್ಟು ಓಡಲು ಮುಂದಾಗುತ್ತಿದ್ದಂತೆ ಬೈಕ್​ನ ಹಿಂಬದಿಗೆ ಒದ್ದು, ಬೈಕ್​ ಸವಾರನನ್ನು ಬೀಳಿಸಿದ್ದಳು.

    ಈ ದಾಳಿಯಿಂದ ಎಚ್ಚೆತ್ತುಕೊಂಡು ಧೀರಜ್​ ಬೈಕ್​ ಎತ್ತಿಕೊಂಡು ಮುಂದಕ್ಕೆ ಸಾಗುವಷ್ಟರಲ್ಲಿ ಎಚ್ಚೆತ್ತುಕೊಂಡಿದ್ದ ನೆರೆಹೊರೆಯವರು ದಾರಿಗೆ ಅಡ್ಡಲಾಗಿ ಮತ್ತೊಂದು ಬೈಕ್​ ಅನ್ನು ನಿಲ್ಲಿಸಿ ಆತನನ್ನು ತಡೆದಿದ್ದರು. ತಮ್ಮ ಕೈಗೆ ಸಿಕ್ಕಿಬಿದ್ದ ಇಬ್ಬರು ಅಪಹರಣಕಾರರನ್ನು ಚೆನ್ನಾಗಿ ಥಳಿಸಿದ್ದರು. ಅಷ್ಟರಲ್ಲಿ ಒಬ್ಬಾತ ಚೂರಿ ತೋರಿಸಿ ಬೆದರಿಸಿದ್ದರಿಂದ ಹಿಂದೆ ಸರಿದಿದ್ದರು. ಈ ಸಮಯವನ್ನು ಬಳಸಿಕೊಂಡು ಇಬ್ಬರು ಅಪಹರಣಕಾರರು ಪರಾರಿಯಾಗಿದ್ದರು.

    ಆದರೆ ದೆಹಲಿ ಪೊಲೀಸರು ಸ್ಥಳದಲ್ಲಿ ಸಿಕ್ಕ ಬೈಕ್​ ಮತ್ತು ಸಿಸಿ ಕ್ಯಾಮರಾಗಳ ವಿಡಿಯೋ ತುಣುಕುಗಳನ್ನು ಆಧರಿಸಿ ಮೊದಲಿಗೆ ಧೀರಜ್​ನನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಈತ ನೀಡಿದ ಮಾಹಿತಿಯ ಮೇರೆಗೆ ಉಪೇಂದ್ರನನ್ನೂ ಬಂಧಿಸಿದರು.

    2,600 ಕೋಟಿ ರೂ. ಪರಿಹಾರಕ್ಕಾಗಿ ಪ್ರತಿಭಟಿಸುತ್ತಲೇ ಫುಟ್​ಪಾತ್​ನಲ್ಲೇ ಸತ್ತ 70 ವರ್ಷದ ಮಹಿಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts