More

    ಆಲ್ದೂರು ಬಸ್ ನಿಲ್ದಾಣದ ಶೌಚಗೃಹಕ್ಕೆ ಬೀಗ

    ಆಲ್ದೂರು: ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಗೃಹಕ್ಕೆ ಬೀಗ ಹಾಕಿ ಒಂದು ವಾರ ಕಳೆದಿದ್ದು ಪ್ರಯಾಣಿಕರು, ಸಾರ್ವಜನಿಕರು ಪರದಾಡುವಂತಾಗಿದೆ.

    ಆಲ್ದೂರು ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಗೃಹದ ಗುಂಡಿ (ಪಿಟ್) ತುಂಬಿದ್ದರಿಂದ ಬಂದ್ ಮಾಡಿಸಲಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶೌಚಗೃಹದ ಗುಂಡಿ ತುಂಬಿರುವುದರಿಂದ ಬಸ್ ನಿಲ್ದಾಣ ಹಾಗೂ ಸುತ್ತಮುತ್ತ ದುರ್ನಾತ ಉಂಟಾಗಿದೆ. ಆಟೋ ಚಾಲಕರು ಪಂಚಾಯಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಶೌಚಗೃಹಕ್ಕೆ ಬೀಗ ಹಾಕಿಸಲಾಗಿದೆ.
    ಶೌಚಗೃಹದ ಪಕ್ಕದಲ್ಲೇ ಆಟೋ ನಿಲ್ದಾಣವಿದ್ದು, ಹತ್ತಾರು ಆಟೋಗಳನ್ನು ನಿಲ್ಲಿಸುತ್ತಾರೆ. ದುರ್ನಾತದಿಂದ ಆಟೋ ಚಾಲಕರು ಅಸಮಾಧಾನಗೊಂಡು ಕಳೆದ ವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದ್ದರಿಂದ ತಾತ್ಕಾಲಿಕವಾಗಿ ಬಂದ್ ಮಾಡಿಸಲಾಗಿದೆ.
    ಶೌಚಗೃಹವನ್ನು ಶುಚಿ ಇಂಟರ್‌ನ್ಯಾಷನಲ್ ಅವರು ನಿರ್ವಹಣೆ ಮಾಡುತ್ತಿದ್ದಾರೆ. ಶೌಚಗೃಹದ ಗುಂಡಿ ತುಂಬಿ ದುರ್ನಾತ ಬೀರುತ್ತಿದ್ದು ಬಂದ್ ಮಾಡಲಾಗಿದೆ. ಗುಂಡಿಯನ್ನು ಸ್ವಚ್ಛಗೊಳಿಸಲು ಚಿಕ್ಕಮಗಳೂರು ನಗರಸಭೆಯ ವಾಹನಕ್ಕೆ ಹಣ ಪಾವತಿಸಿದ್ದು ಸ್ವಚ್ಛ ಮಾಡಿಸಲಾಗುವುದು ಎಂದು ಆಲ್ದೂರು ಗ್ರಾಪಂ ಅಧ್ಯಕ್ಷೆ ಜಯಶೀಲಾ ಚಿದಂಬರ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts