More

    ಎಲೆಕ್ಷನ್​ಗೆ ಮದ್ಯದ ಘಾಟು:ಸಿಎಂ,ಡಿಸಿಎಂ ತವರಲ್ಲಿ ಅಧಿಕ ಪ್ರಕರಣ

    ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹೆಂಡದ ಹೊಳೆ ಹರಿಸಲು ಸಕಲ ಸಿದ್ಧತೆ ನಡೆದಿರುವುದು ಬೆಳಕಿಗೆ ಬಂದಿದೆ. ಅಕ್ರಮ ಮದ್ಯ ಮಾರಾಟ, ದಾಸ್ತಾನು ಮತ್ತು ಸಾಗಾಟ ತಡೆಗೆ ಅಬಕಾರಿ ಇಲಾಖೆಯೂ ಸಿದ್ಧವಾಗಿದ್ದು, ಅಧಿಕಾರಿಗಳಿಗೆ ರ್ಯಾಂಕಿಂಗ್​ ಮಾದರಿ ಟಾಸ್ಕ್​ ಕೊಡುವ ಮೂಲಕ ಬರೀ 15 ದಿನದಲ್ಲಿ ಬರೋಬ್ಬರಿ 6,836 ಪ್ರಕರಣ ದಾಖಲಿಸಿದೆ.

    ರಾಜಕೀಯ ಅಭ್ಯರ್ಥಿಗಳು, ಮತದಾರರಿಗೆ ಆಮಿಷವೊಡ್ಡಲು ಅಡ್ಡದಾರಿಯಲ್ಲಿ ಈಗಾಗಲೆ ಕೋಟ್ಯಂತರ ರೂ. ಮೌಲ್ಯದ ಮದ್ಯ ಸಂಗ್ರಹಿಸಿಟ್ಟಿದ್ದಾರೆ. ಮದ್ಯ ಖರೀದಿ ಮೇಲೆ ಚುನಾವಣಾ ಆಯೋಗ ಹಾಗೂ ಇಲಾಖೆ ಕಣ್ಗಾವಲು ಇಟ್ಟಿದ್ದರೂ ಹಲವು ಜಿಲ್ಲೆಗಳಲ್ಲಿ ಕೆಲ ಅಭ್ಯರ್ಥಿಗಳು, ಬೇರೆ ಹೆಸರಿನಲ್ಲಿ ಸಾವಿರಾರು ಬಾಕ್ಸ್​ ಮದ್ಯ ಖರೀದಿಸಿ ಸಂಗ್ರಹಿಸುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ. ಹಾಗಾಗಿ, ಅಕ್ರಮ ಮದ್ಯ ಮಾರಾಟ ತಡೆಗೆ ರ್ಯಾಂಕಿಂಗ್​ ಮಾದರಿ ಟಾಸ್ಕ್​ ಜಾರಿಗೆ ತಂದಿದೆ. ಒಂದು ವೇಳೆ ಅಕ್ರಮ ಮದ್ಯ ಮಾರಾಟ ತಡೆಗೆ, ಕೇಸ್​ ದಾಖಲಿಸಲು ವಿಲವಾದ ಹಾಗೂ ಕಳಪೆ ಕಾರ್ಯಕ್ಷಮತೆ ತೋರುವವರಿಗೆ ಇಲಾಖೆ ಕಠಿಣ ಕ್ರಮಕೈಗೊಳ್ಳಲಿದೆ.

    ಏನಿದು ರ್ಯಾಂಕಿಂಗ್​:
    ಅಕ್ರಮ ಮದ್ಯ ಮಾರಾಟ ತಡೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಇಂಜಿನಿಯರಿಂಗ್​ ಮಾದರಿಯಲ್ಲಿ ರ್ಯಾಂಕಿಂಗ್​ ಹಾಗೂ ಅಂಕ ನೀಡಲಾಗುತ್ತಿದೆ. ಹೆಚ್ಚು ಕೇಸ್​, ಮದ್ಯ ಜಪ್ತಿ ಹಾಗೂ ಮದ್ಯ ಮಾರಾಟ ಮಾಡುವವರನ್ನು ಬಂಧಿಸಿದರೆ ಅಂಥ ಉಪ ಆಯುಕ್ತರಿಗೆ ಅಥವಾ ಜಿಲ್ಲಾ ರ್ಯಾಂಕಿಂಗ್​ ಪಟ್ಟಿಯಲ್ಲಿ ಮೊದಲ ಸ್ಥಾನ ನೀಡಲಾಗುತ್ತದೆ. ಕಳಪೆ ಸಾಧನೆ ಮಾಡಿದವರಿಗೆ ರ್ಯಾಂಕಿಂಗ್​ವಾರು ಹಂಚಿಕೆ ಮಾಡಲಾಗುತ್ತದೆ. ಕೆಲ ಅಧಿಕಾರಿಗಳು ಕರ್ತವ್ಯ ಲೋಪವೆಸಗಿ ಅಭ್ಯರ್ಥಿಗಳ ಪರ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.

    ಸಿಎಂ, ಡಿಸಿಎಂ ತವರಲ್ಲೇ ಅಧಿಕ:
    ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ತವರು ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧಪಟ್ಟಂತೆ ಅಧಿಕ ಕೇಸ್​ ದಾಖಲಾಗಿವೆ. ರಾಜ್ಯದ ಇತರೆ ಜಿಲ್ಲೆಗಳಗಿಂತ ಬೆಂಗಳೂರಿನಲ್ಲಿ 1,110 ಕೇಸ್​ ದಾಖಲಾಗುವ ಮೊದಲ ಸ್ಥಾನದಲ್ಲಿದ್ದರೆ, ಹಾಸನ (682) 2ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ತುಮಕೂರು (357) ಬರಲಿದೆ. ನಂತರ ಸ್ಥಾನಗಳಲ್ಲಿ ಮೈಸೂರು (299) ಹಾಗೂ ರಾಮನಗರ (298) ಬರಲಿದೆ. ಮಂಡ್ಯ 275, ಚಿತ್ರದುರ್ಗ 239, ಚಿಕ್ಕಬಳ್ಳಾಪುರ 201, ಉಡುಪಿ 173, ಬೆಂ.ಗ್ರಾಮಾಂತರ 166, ಚಿಕ್ಕಮಗಳೂರು 165, ಚಾಮರಾಜನಗರ 126, ಕೊಡಗು 121, ರಾಯಚೂರು 118.

    ಮಾಧುಸ್ವಾಮಿಯನ್ನು ಕಾಂಗ್ರೆಸ್ಸಿಗೆ ನಾನೇ ಸ್ವಾಗತಿಸುತ್ತೇನೆ: ಪರಂ

    ರಾಜ್ಯದಲ್ಲಿ ಮದ್ಯ ಕಿಕ್​ ಜೋರು:
    ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭವಾದ 15 ದಿನದಲ್ಲೇ 6,836 ಕೇಸ್​ ದಾಖಲಾಗಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಮಾ.16ರಿಂದ ಮಾ.31ರವರೆಗೆ ಅಕ್ರಮ ಮದ್ಯ ಮಾರಾಟ ಸಂಬಂಧಪಟ್ಟಂತೆ ಅಬಕಾರಿ ಇಲಾಖೆ ರಾಜ್ಯಾದ್ಯಂತ 6,836 ಕೇಸ್​ ದಾಖಲಿಸಿ 5,439 ಮಂದಿ ಬಂಧಿಸಿದೆ. ಲಾಂತರ ಲೀಟರ್​ ಮದ್ಯ ವಶಪಡಿಸಿಕೊಂಡಿದ್ದು, 564 ವಾಹನಗಳನ್ನು ಜಪ್ತಿ ಮಾಡಿದೆ. ಹಾಸನ, ರಾಮನಗರ, ಬೆಂ.ಗ್ರಾಮಾಂತರ, ತುಮಕೂರು, ಬೆಂಗಳೂರು, ದಣ ಕನ್ನಡದಲ್ಲಿ ಅತಿ ಹೆಚ್ಚು ಘೋರ, ಪರವಾನಗಿ ಉಲ್ಲಂನೆ ಕೇಸ್​ಗಳು ದಾಖಲಾಗಿವೆ.

    ನೂರಾರು ಕರೆ ಸ್ವೀಕಾರ
    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟ,ಸಾಗಾಣೆ, ದಾಸ್ತಾನು ಬಗ್ಗೆ ದೂರು ನೀಡಲು ಬೆಂಗಳೂರಿನ ಅಬಕಾರಿ ಆಯುಕ್ತರ ಕೇಂದ್ರ ಕಚೇರಿಯಲ್ಲಿ ತೆರೆದಿರುವ 1800&4252550 ಸಹಾಯವಾಣಿಗೆ ನೂರಾರು ದೂರುಗಳು ದಾಖಲಾಗುತ್ತಿದೆ. ಇಲಾಖೆಯು ಮೂರು ವರ್ಷಗಳಲ್ಲಿ ಪ್ರತಿ ಮದ್ಯದಂಗಡಿಗಳ ಎತ್ತವಳಿ ಆಧಾರದ ಮೇಲೆ ಚುನಾವಣೆ ಸಮಯದಲ್ಲಿ ಮದ್ಯದಂಗಡಿಗಳು ಖರೀದಿಸುವ ಬಗ್ಗೆ ನಿಗಾ ವಹಿಸುತ್ತಿದೆ. ಹೋಟೆಲ್​ ಮತ್ತು ವಸತಿಗೃಹ (ಸಿಎಲ್​&7), ಕ್ಲಬ್​ (ಸಿಎಲ್​4) ಸನ್ನದುಗಳ ಎತ್ತವಳಿ ಮೇಲೆ ವಿಶೇಷ ಗಮನ ಹರಿಸಿ ಅಕ್ರಮ ಮದ್ಯದ ಮೇಲೆ ಹದ್ದಿನ ಕಣ್ಣಿಟ್ಟಿದೆ. ತೋಟದ ಮನೆ, ಪಾಳು ಬಿದ್ದಿರುವ ಹಳೆ ಕಟ್ಟಡಗಳು, ಉಗ್ರಾಣ ಸೇರಿ ರ್ನಿಜನ ಪ್ರದೇಶಗಳಲ್ಲಿ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿದೆ. ಮದ್ಯ, ಬಿಯರ್​, ವೈನ್​, ಸ್ಪಿರಿಟ್​ ಸಂಗ್ರಹವಾಗದಂತೆ ಎಚ್ಚರಿಕೆ ವಹಿಸುತ್ತಿರುವ ಇಲಾಖೆ, ನವೀಕರಣಗೊಳ್ಳದ ಸನ್ನದುಗಳ ಮೇಲೆ ವಿಶೇಷ ನಿಗಾ ಇಟ್ಟಿದೆ.ಮದ್ಯ ಉತ್ಪಾದನಾ ಟಕಗಳು ತಮ್ಮ ಉತ್ಪಾದನೆ, ಶೇಖರಣೆ, ಸಾಗಾಣಿಕೆ ಕುರಿತು ಹೆಚ್ಚಿನ ನಿಗಾ ವಹಿಸಿ ಅಕ್ರಮ ಚಟುವಟಿಕೆಗಳಿಗೆ ಇಲಾಖೆ ಕಡಿವಾಣ ಹಾಕುತ್ತಿದೆ.

    ಹೇಗೆಲ್ಲಾ ಕೇಸ್​ ದಾಖಲು
    * ಮನೆಯಲ್ಲಿ ಶೇಖರಣೆ
    * ಅಕ್ರಮವಾಗಿ ವಾಹನಗಳಲ್ಲಿ ಸಾಗಾಣಿಕೆ
    * ಸಿಎಲ್​-2 (ವೈನ್​ಶಾಪ್​) ಮದ್ಯದಂಗಡಿಯಲ್ಲಿ ಪಾರ್ಸೆಲ್​ ಬದಲು ಕುಡಿಯಲು ಅವಕಾಶ
    * ಸಿಎಲ್​-7 ( ಹೋಟೆಲ್​ ಮತ್ತು ವಸತಿ ಗೃಹ) ಮದ್ಯದಂಗಡಿಗಳಲ್ಲಿ ಕೊಠಡಿ ಬದಲು ಹೊರಗಡೆ ಕುಡಿಯಲು ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts