More

    PHOTOS| ಅಲ್ಬನಿ ಕನ್ನಡ ಸಂಘದಿಂದ ಮನಮೋಹಕ ಪಿಕ್ನಿಕ್: ಕಾನನದ ಮಧ್ಯೆ ಕಳೆದ ಸುಮಧುರ ಕ್ಷಣ ವಿವರಿಸಿದ ಕನ್ನಡಿಗ

    PHOTOS| ಅಲ್ಬನಿ ಕನ್ನಡ ಸಂಘದಿಂದ ಮನಮೋಹಕ ಪಿಕ್ನಿಕ್: ಕಾನನದ ಮಧ್ಯೆ ಕಳೆದ ಸುಮಧುರ ಕ್ಷಣ ವಿವರಿಸಿದ ಕನ್ನಡಿಗ| ಬೆಂಕಿ ಬಸಣ್ಣ ನ್ಯೂಯಾರ್ಕ್

    ನ್ಯೂಯಾರ್ಕ್​: ಸಪ್ಟೆಂಬರ್ 18ರ ರವಿವಾರದಂದು ನ್ಯೂಯಾರ್ಕ್ ರಾಜ್ಯದ ರಾಜಧಾನಿಯಾದ ಅಲ್ಬನಿ ನಗರದ ಕನ್ನಡ ಸಂಘದವರು ತಮ್ಮ ವಾರ್ಷಿಕ ವನಭೋಜನ (ಪಿಕ್ನಿಕ್) ಅನ್ನು ದಟ್ಟ ಕಾಡಿನ ಮಧ್ಯೆ ಇರುವ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ “ತ್ಯಾಚೆರ್ ಸ್ಟೇಟ್ ಪಾರ್ಕ್”ನಲ್ಲಿ ಬಲು ಸಡಗರದಿಂದ ಆಚರಿಸಿದರು.

    PHOTOS| ಅಲ್ಬನಿ ಕನ್ನಡ ಸಂಘದಿಂದ ಮನಮೋಹಕ ಪಿಕ್ನಿಕ್: ಕಾನನದ ಮಧ್ಯೆ ಕಳೆದ ಸುಮಧುರ ಕ್ಷಣ ವಿವರಿಸಿದ ಕನ್ನಡಿಗ

    ಈ ಪಿಕ್ನಿಕ್ ಅನ್ನು ತುಂಬಾ ಅಚ್ಚುಕಟ್ಟಾಗಿ ಆಯೋಜಿಸಿದ ಹೆಗ್ಗಳಿಕೆ (ಕ್ರೆಡಿಟ್) ನಮ್ಮ ಕನ್ನಡ ಸಂಘದ ತ್ರೀ-ದೇವಿಗಳಾದ ಅಧ್ಯಕ್ಷೆ ಸುಪ್ರಿಯಾ ವಾಳ್ವೆಕರ್, ಕಾರ್ಯದರ್ಶಿ ದೀಪಾ ಅಭಿಷೇಕ್ ಮತ್ತು ಖಜಾಂಚಿ ಸುನೀತಾ ವಿಜಯ್ ಅವರಿಗೆ ಸಲ್ಲುತ್ತದೆ.

    ಬೆಳಗ್ಗೆ ತಿಂಡಿ, ಮಧ್ಯಾಹ್ನ ಬಿಸಿ ಬಿಸಿಯಾದ ಊಟ ಮತ್ತು ಸಂಜೆ ಸ್ನಾಕ್ಸ್ ಗಳನ್ನು ಆಯೋಜಿಸಲಾಗಿತ್ತು. ಡಮ್ ಕ್ಯಾರೇಡ್ಸ್, ಅಂತಾಕ್ಷರಿ, ಬಿಂಗೊ, ಕ್ರಿಕೆಟ್, ವಾಲಿಬಾಲ್ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ಸದಸ್ಯರು ಸಕ್ರಿಯವಾಗಿ ಉತ್ಸಾಹದಿಂದ ಭಾಗವಹಿಸಿದರು.

    PHOTOS| ಅಲ್ಬನಿ ಕನ್ನಡ ಸಂಘದಿಂದ ಮನಮೋಹಕ ಪಿಕ್ನಿಕ್: ಕಾನನದ ಮಧ್ಯೆ ಕಳೆದ ಸುಮಧುರ ಕ್ಷಣ ವಿವರಿಸಿದ ಕನ್ನಡಿಗ

    ಬೆಂಕಿ ಬಸಣ್ಣ, ರಾಜೀವ್ ಮಹಾಜನ್ ಮತ್ತು ಮಾಸ್ಟರ್ ನಚಿಕೇತ ನಡೆಸಿಕೊಟ್ಟ ಬಿಂಗೋ ಸೂಪರ್ ಹಿಟ್ ಆಗಿ, ವಿಜೇತರಿಗೆ ನಗದು ಹಣವನ್ನು ವಿತರಿಸಲಾಯಿತು. ಉಮಾ ಶ್ರೀನಿವಾಸ್ ಮತ್ತು ಪ್ರದೀಪ್ ಪ್ರೇಕ್ಷಕರನ್ನು ನಾಲ್ಕು ತಂಡಗಳಾಗಿ ಹಂಚಿ ವಿಭಿನ್ನ ರೀತಿಯ ಅಂತಾಕ್ಷರಿಯನ್ನು ನಡೆಸಿಕೊಟ್ಟರು. ಮೋಡ ಕವಿದ ತಂಪನೆಯ ವಾತಾವರಣದಲ್ಲಿ ಉಮಾ ಬೆಂಕಿ ಮಾಡಿದ ಬಿಸಿ ಬಿಸಿ ಮಸಾಲ ಟೀ ಎಲ್ಲರನ್ನೂ ಬೆಚ್ಚಗಿರಿಸಿತು.

    ತೀವ್ರ ಪೈಪೋಟಿಯಿಂದ ಕೂಡಿದ್ದ ಕ್ರಿಕೆಟ್ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ವಿವಾದದಲ್ಲಿ ಅಂತ್ಯವಾಯಿತು. ಇಡೀ ದಿನ ಮೋಡ ಕವಿದಿದ್ದರೂ ಅದೃಷ್ಟವಶಾತ್ ಮಳೆಯಾಗದೇ ಪಿಕ್ನಿಕ್ ತುಂಬಾ ಯಶಸ್ವಿಯಾಗುವಂತೆ ಮಾಡಿದ ವರುಣ ದೇವನಿಗೆ ಎಲ್ಲರೂ ಪ್ರಣಾಮಗಳನ್ನು ತಿಳಿಸುತ್ತಾ ಸಂಜೆ ಮನೆಗೆ ನಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts