More

    ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅತ್ಯಗತ್ಯ: ಕರ್ನಾಟಕ ವಿದ್ಯಾವರ್ಧಕ ಸಮಿತಿ ಅಧ್ಯಕ್ಷ ಬುಜಂಗಸ್ವಾಮಿ ಇನಾಮದಾರ ಅಭಿಮತ

    ಅಳವಂಡಿ: ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲೇ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪಾಲಕರು ಹಾಗೂ ಶಿಕ್ಷಕರಿಂದಾಗಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಮಿತಿ ಅಧ್ಯಕ್ಷ ಬುಜಂಗಸ್ವಾಮಿ ಇನಾಮದಾರ ಹೇಳಿದರು.

    ಗ್ರಾಮದ ಶ್ರೀ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಪ್ರೌಢ ಹಾಗೂ ಪ್ರಾಥಮಿಕ, ಕಾಲೇಜು ವಿಭಾಗದ ಪ್ರತಿಭಾ ಕಾರಂಜಿ, ಕ್ರೀಡೆ, ಇತರ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಪ್ರಶಸ್ತಿ ನೀಡಿ ಶನಿವಾರ ಮಾತನಾಡಿದರು. ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅತ್ಯಗತ್ಯ. ಶಿಕ್ಷಣ ಕೇವಲ ನೌಕರಿಗೆ ಮೀಸಲಾಗದೆ ಸಮಾಜದ ಉನ್ನತಿಗೆ ಬಳಕೆಯಾಗಬೇಕು ಎಂದರು.

    ನಿವೃತ್ತ ಪ್ರಾಚಾರ್ಯ ಎಂ.ಎಸ್. ಹೊಟ್ಟಿನ ಮಾತನಾಡಿ, ಕೇವಲ ನೌಕರಿಯಿಂದ ಜೀವನ ನಡೆಸಬಹುದು ಎಂಬುದು ತಪ್ಪು ಕಲ್ಪನೆ. ಹಾಸ್ಯ, ಕ್ರೀಡೆ, ಸಂಗೀತ, ರಂಗಭೂಮಿ, ಅಭಿನಯ ಮುಂತಾದವುಗಳಿಂದಲೂ ಬದುಕು ಕಟ್ಟಿಕೊಳ್ಳಬಹುದು ಎಂದರು.

    ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ಪ್ರಮುಖರಾದ ಸೂರ್ಯಕಾಂತ ಪಾಟೀಲ, ಶಂಕ್ರಪ್ಪ ಕೋಗಳಿ, ಡಿ.ಜಿ. ಲಕ್ಕನಗೌಡರ, ಹಿರಿಯ ಶಿಕ್ಷಕ ವಿ.ಎಚ್.ಪುಲೇಶಿ, ಎಂ.ಎಸ್. ಕೊಪ್ಪಳ, ಸಿದ್ದು ಅಂಗಡಿ, ಮಹಾನಂದಿ, ಬಸವರಾಜ ಕಲ್ಮನಿ, ಶಕುಂತಲಾ, ಎಚ್.ಎನ್. ಲಮಾಣಿ, ರಾಜಶೇಖರ, ಅಂಬರೇಶ, ನೀಲಪ್ಪ, ಗಾಯತ್ರಿ, ವಾಸವಿ, ವಿಜಯಕುಮಾರ, ಮಹೇಶ, ಚನ್ನಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts