More

    ವಿವಿಧ ಮಾಸಾಶನ ಸ್ಥಗಿತಕ್ಕೆ ಆಕ್ರೋಶ: ಅಳವಂಡಿ ನಾಡಕಚೇರಿ ಮುಂದೆ ಫಲಾನುಭವಿಗಳ ಧರಣಿ

    ಅಳವಂಡಿ: ಸಾಮಾಜಿಕ ಭದ್ರತಾ ಯೋಜನೆಯಡಿ ಸಮರ್ಪಕವಾಗಿ ಮಾಸಾಶನ ಪಾವತಿಸಬೇಕೆಂದು ಆಗ್ರಹಿಸಿ ನಾಡಕಚೇರಿ ಮುಂದೆ ಫಲಾನುಭವಿಗಳು ಸೋಮವಾರ ಧರಣಿ ನಡೆಸಿದರು.

    ಕಳೆದ ಎರಡು ವರ್ಷದಿಂದ ವೃದ್ಧಾಪ್ಯ, ಅಂಗವಿಕಲರ, ವಿಧವಾ ವೇತನ, ಮನಸ್ವಿನಿ ಹಾಗೂ ಇತರ ಮಾಸಾಶವನ್ನು 350ಕ್ಕೂ ಹೆಚ್ಚು ಜನ ಪಡೆಯುತ್ತಿದ್ದಾರೆ. ಆದರೆ, ಕೆಲ ತಿಂಗಳ ಹಿಂದೆ ಏಕಾಏಕಿ ಸ್ಥಗಿತಗೊಳಿಸಿದ್ದರಿಂದ ಸಮಸ್ಯೆಯಾಗಿದೆ. ನಿತ್ಯ ಉಪತಹಸಿಲ್ ಕಚೇರಿಗೆ ಅಲೆಯುವಂತಾಗಿದೆ. ಬಡವರು, ವೃದ್ಧರು ಸಂಕಷ್ಟಕ್ಕೆ ಸಿಲುದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಇಂದು-ನಾಳೆ ಎಂದು ಹಾರಿಕೆ ಉತ್ತರ ನೀಡಿ ಸಾಗಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮನವಿ ಸ್ವೀಕರಿಸಿದ ಗ್ರೇಡ್-2 ತಹಸೀಲ್ದಾರ್ ಗವಿಸಿದ್ದಪ್ಪ ಮಾತನಾಡಿ, ಸರ್ಕಾರ ವಿವಿಧ ಮಾಸಾಶನ ಜಾರಿಯಲ್ಲಿ ಕೆಲ ಬದಲಾವಣೆ ಮಾಡಿದ ಪರಿಣಾಮ ತಾಂತ್ರಿಕ ಕಾರಣಗಳಿಂದ ಸಮಸ್ಯೆ ಉಂಟಾಗಿದೆ. ಸದ್ಯ ಗ್ರಾಮದ 274 ಜನರ ಪೈಕಿ 132 ಫಲಾನುಭವಿಗಳ ಮಾಸಾಶನ ಸಮಸ್ಯೆ ಬಗೆಹರಿಸಲಾಗಿದೆ. ಉಳಿದವರ ಮಾಸಾಶನ ಈ ತಿಂಗಳೊಳಗೆ ಪಾವತಿ ಆಗುವಂತೆ ಕ್ರಮವಹಿಸಲಾಗುವುದು. ಅಧಿಕಾರಿಗಳಿಗೆ ಸೂಕ್ತ ದಾಖಲಾತಿ ನೀಡಿ ಸಹಕರಿಸುವಂತೆ ತಿಳಿಸಿದರು.

    ಮುಖಂಡರಾದ ತೋಟಯ್ಯ ಅರಳೆಲೆಮಠ, ಹನುಮಂತ ಮೋರನಾಳ, ಗುರುಬಸವರಾಜ ಹಳ್ಳಿಕೇರಿ, ಸತೀಶ ಜಾಣಗಾರ, ವೀರೇಶ, ಮಲ್ಲಪ್ಪ ಬೆಣಕಲ್, ಹನುಮಂತ ಮೂಲಿಮನಿ, ರೇಣುಕಪ್ಪ, ಪ್ರಕಾಶ ಈಳಿಗೇರ, ಮಂಜುನಾಥ ಹಿರೇಮಠ, ಶಿವಗ್ಯಾನಪ್ಪ, ಸಾಗರ ಉಪ್ಪಾರ, ಸಂಜೀವ ನಾಗರಳ್ಳಿ, ಅನ್ವರ ಗಡಾದ, ನಜರುದ್ದೀನ್, ಹನುಮಂತ ಜೋಗಿನ, ಗ್ಯಾನಪ್ಪ ಹಳ್ಳಿಕೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts