More

    ಸಂಗೀತ ಆಲಿಸುವುದರಿಂದ ಮನಃಶಾಂತಿ

    ಅಳವಂಡಿ: ಸಂಗೀತ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದರ ಜತೆಗೆ ಮನುಷ್ಯನಲ್ಲಿ ಚೈತನ್ಯ ತುಂಬುತ್ತದೆ ಎಂದು ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ಬೋಚನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಗೀತ, ನಾಟಕ, ಬಯಲಾಟ ಪ್ರದರ್ಶನ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ಮನುಷ್ಯನ ಮನಸ್ಸನ್ನುಶುದ್ಧವಾಗಿರಿಸುತ್ತವೆ. ಅಲ್ಲದೆ ಸೌಹಾರ್ದ ಭಾವ ಮೂಡಿಸುತ್ತವೆ ಎಂದರು.

    ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವರ ಸಂಚಾರ ಕಲಾ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಪ್ರಮುಖರಾದ ಕುಲ್ಲಳೆಪ್ಪ, ದೇವಪ್ಪ ಮೆಣೆಗಾರ, ಬಡವಪ್ಪ ಹಿಂದಲಮನಿ, ನಾಗನಗೌಡ, ಮುದಿಯಪ್ಪ, ನಿಂಗಪ್ಪ, ಸಣ್ಣ ಭೀಮಣ್ಣ, ಭರಮಣ್ಣ, ಮಂಜಪ್ಪ, ಹನುಮಪ್ಪ, ಹೊನಕೇರಪ್ಪ, ಕಮಲವ್ವ, ಜಗದೀಶ, ದುರಗವ್ವ, ಕಸ್ತೂರೆವ್ವ, ಲಕ್ಷ್ಮವ್ವ, ಮಂಜಪ್ಪ, ಶ್ರೀಕಾಂತ, ಶಂಕರ ಬಂಡಿ, ಪರಸಪ್ಪ, ಭೀಮೇಶಪ್ಪ, ರಾಮಣ್ಣ, ಈರಪ್ಪ, ಆನಂದ, ಮರಿಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts