More

    ಸಂಸಮನಿ ವಟಿಯಿಂದ ಅಲರ್ಜಿ ದೂರವಾಗುವುದೆಂದ ಶ್ರೀ ಮರುಳಾರಾಧ್ಯ ಶಿವಾಚಾರ್ಯ

    ಅಳವಂಡಿ: ಕಾಯ ಮತ್ತು ಮನಸನ್ನು ಸದಾ ಸದೃಢವಾಗಿಟ್ಟುಕೊಂಡು ಸಾಧನೆಯ ಮೆಟ್ಟಿಲೇರಬೇಕು ಎಂದು ಶ್ರೀ ಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು.

    ಗ್ರಾಮದ ಸಮುದಾಯ ಭವನದಲ್ಲಿ ಮುಂಡರಗಿಯ ಎಸ್‌ಬಿಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿಂದ ಸ್ವಾತಂತ್ರೊೃೀತ್ಸವದ 75ನೇ ವರ್ಷಾಚರಣೆಯ ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ನಡೆದ ಆರೋಗ್ಯ ತಪಾಸಣೆ ಹಾಗೂ ಸಂಸಮನಿ ವಟಿ ಮಾತ್ರೆ ವಿತರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಯಾರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೋ ಅವರು ಎಂತಹ ಸಾಧನೆ ಬೇಕಾದರೂ ಮಾಡಬಹುದು ಎಂದರು.

    ಡಾ.ಬಿ.ಡಿ. ತಳವಾರ ಮಾತನಾಡಿ, ಅಲರ್ಜಿಯಂತಹ ರೋಗದಿಂದ ಬಳಲುತ್ತಿರುವವರಿಗೆ ಹಾಗೂ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಕೇಂದ್ರ ಸರ್ಕಾರ ಸಂಸಮನಿ ವಟಿ ಆಯುರ್ವೇದ ಮಾತ್ರೆಗಳನ್ನು ಕೊಡಮಾಡಿದೆ. ರೋಗಿಗಳ ಆರೋಗ್ಯ ತಪಾಸಣೆ ನಡೆಸಿ ಅವರ ದೇಹ ಸ್ಥಿತಿಗನುಗುಣವಾಗಿ ಮಾತ್ರೆ ನೀಡಲಾಗುತ್ತದೆ. ಅರ್ಹರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.

    ಪ್ರಮುಖರಾದ ಗುರುಮೂರ್ತಿಸ್ವಾಮಿ ಇನಾಮದಾರ, ಡಾ. ಸಿದ್ದಲಿಂಗಸ್ವಾಮಿ ಇನಾಮದಾರ, ದೇವಪ್ಪ ಕಟ್ಟಿಮನಿ, ಮಂಜುನಾಥಗೌಡ ಪಾಟೀಲ, ಭೀಮರಡ್ಡೆಪ್ಪ, ಸುರೇಶ ದಾಸರಡ್ಡಿ, ಶರಣಪ್ಪ ಜಡಿ, ಅನ್ವರ ಗಡಾದ, ಈಶಪ್ಪ ಜೋಳದ, ಅರವಿಂದಪ್ಪ ಬಿರಾದಾರ, ಶ್ರೀಶೈಲಪ್ಪ, ರಮೇಶ ಬಾವಿಹಳ್ಳಿ, ಹನುಮಂತಗೌಡ ಗಾಳಿ, ವೀರಭದ್ರಯ್ಯ, ಡಾ. ಜಹಗೀರದಾರ, ಡಾ. ಜ್ಯೋತಿ, ಡಾ, ಶಬನಾಜ್, ಡಾ. ಗುಜರಿ, ಡಾ. ಸಲ್ಮಾ, ಡಾ, ಸವಿತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts