More

    ನೀರಿಲ್ಲದೆ ಬದುಕು ಅಸಾಧ್ಯ; ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಪ್ರತಿಪಾದನೆ

    ಕವಲೂರು ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ

    ಅಳವಂಡಿ: ಕೆರೆ ಎಂಬುದು ನೀರಿನ ಬ್ಯಾಂಕ್ ಇದ್ದಂತೆ. ಮನುಷ್ಯ ಹಣ ಇಲ್ಲದೆ ಬದುಕಬಹುದು. ಆದರೆ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರೂ ಜೀವಜಲ ಸಂಗ್ರಹಕ್ಕೆ ಒತ್ತು ನೀಡಬೇಕು ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

    ಸಮೀಪದ ಕವಲೂರು ಗ್ರಾಮದಲ್ಲಿ ಅಳವಂಡಿ ರಸ್ತೆಯಲ್ಲಿನ ಕುಡಿಯುವ ನೀರಿನ ಕೆರೆ ಹೂಳೆತ್ತುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ನೀರು ದೊಡ್ಡ ಆಸ್ತಿ. ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಕೆರೆ ಹೂಳೆತ್ತುವ ಕಾರ್ಯ ಆರಂಭಿಸಲಾಗಿದೆ. 12 ಎಕರೆ ವಿಸ್ತೀರ್ಣದ ಕುಡಿವ ನೀರಿನ ಕೆರೆ ಸ್ಥಳವನ್ನು ಬಡಿಗೇರ ಕುಟುಂಬ ದಾನವಾಗಿ ನೀಡಿದ್ದು, ನಂತರ ಗ್ರಾಮದ ಬಸವಂತಗೌಡ ಕೆರೆ ನಿರ್ಮಿಸಿದರು. ಪ್ರದೀಪ ಗೌಡ ದುರಸ್ತಿ ಕಾರ್ಯ ನೆರವೇರಿಸಿದ್ದಾರೆ. ನೀರು ಸಂಗ್ರಹ ಉದ್ದೇಶದಿಂದ ಗ್ರಾಪಂ ಸದಸ್ಯರು, ಗ್ರಾಮಸ್ಥರು ಕೆರೆ ಹೂಳೆತ್ತುವ ಕಾರ್ಯ ಕೈಗೊಂಡಿದ್ದಾರೆ ಎಂದು ಹೇಳಿದರು.

    ಶುದ್ಧ ಗಾಳಿ ಹಾಗೂ ನೀರು ಅಮೂಲ್ಯ ಸಂಪತ್ತು. ಒಂದೊಂದು ಕೆರೆಯೂ ಸಂಪತ್ತು. ಸಮಾನ ಮನಸ್ಕರು ಜತೆಗೂಡಿ ಕೆರೆ ಹೂಳೆತ್ತಲು ನಿರ್ಧರಿಸಿರುವುದು ಮಾದರಿ ಕಾರ್ಯ. ನೀರು ಸಂಗ್ರಹಿಸುವಲ್ಲಿ ಯಾರೂ ಅಡೆತಡೆ ಮಾಡಬಾರದು ಎಂದು ಗವಿಶ್ರೀಗಳು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts