More

    ರಾಷ್ಟ್ರ ಮಟ್ಟದ ಸಾಧನೆಗೆ ಸಹಕಾರಿ; ಶ್ರೀ ಮರುಳಾರಾಧ್ಯ ಶಿವಾಚಾರ್ಯ ಹೇಳಿಕೆ

    ಅಳವಂಡಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ ಎಂದು ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.

    ಗ್ರಾಮದ ಶ್ರೀ ಸಿದ್ದೇಶ್ವರ ಸಂಯುಕ್ತ ಪಿಯು ಕಾಲೇಜಿನಲ್ಲಿ ಜಿಪಂ, ಬಿಇಒ, ಕ್ಷೇತ್ರ ಸಮನ್ವಯಾಧಿಕಾರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ

    ಕ್ಲಷ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

    ಪಾಠ ಬೋಧನೆ, ಸಾಂಸ್ಕೃತಿಕ, ಜಾನಪದ, ಕ್ರೀಡೆ, ಸಂಗೀತ ಕಾರ್ಯಕ್ರಮಗಳು ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸುತ್ತವೆ. ಇವುಗಳಲ್ಲಿ ಹೆಚ್ಚಾಗಿ ತೊಡಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂದರು.

    ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ಕ.ವಿ.ಸಮಿತಿ ಕಾರ್ಯದರ್ಶಿ ವಿಜಯಲಕ್ಷ್ಮೀ ಇನಾಮದಾರ, ಪ್ರಾಚಾರ್ಯ ಚಂದ್ರಶೇಖರ, ಮುಖ್ಯಶಿಕ್ಷಕ ವಿ.ಎಚ್.ಪುಲೇಶಿ, ಸಿಆರ್‌ಪಿ ವಿಜಯಕುಮಾರ,

    ಪ್ರಮುಖರಾದ ಡಿ.ಜಿ.ಲಕ್ಕನಗೌಡರ, ಎ.ಟಿ.ಕಲ್ಮಠ, ಎಂ.ಎಸ್. ಹೊಟ್ಟಿನ, ಗುರುಬಸವರಾಜ, ಅನ್ವರ್ ಗಡಾದ, ಹನುಮಂತ ಮೂಲಿಮನಿ, ವಿಶ್ವನಾಥ, ರೇಣುಕಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts