More

    ಮೋರನಹಳ್ಳಿ ಶ್ರೀ ದುರ್ಗಾದೇವಿ ಜಾತ್ರೆ ಇಂದಿನಿಂದ

    ಅಳವಂಡಿ: ಶ್ರೀ ದುರ್ಗಾದೇವಿಯನ್ನು ಭಕ್ತಿಯಿಂದ ಆರಾಧಿಸುವ ಸುಕ್ಷೇತ್ರ ಮೋರನಹಳ್ಳಿ ಗ್ರಾಮ. ಶತಮಾನಗಳಿಂದಲೂ ನಡೆದುಕೊಂಡು ಬಂದ ಪದ್ಧತಿಯಂತೆ ಪ್ರಸಕ್ತ ವರ್ಷ ಕೂಡ ಮೋರನಹಳ್ಳಿ ಗ್ರಾಮದ ಆರಾಧ್ಯ ದೇವತೆ ಶ್ರೀದುರ್ಗಾದೇವಿ ಜಾತ್ರೆ ಮಾ.31ರಿಂದ ಏ.2ರವರೆಗೂ ನಡೆಯಲಿದ್ದು, ಸುತ್ತಲಿನ ಗ್ರಾಮಗಳು ಭಕ್ತರು ಪಾಲ್ಗೊಳ್ಳುತ್ತಾರೆ.

    ಪ್ರತಿ ವರ್ಷ ಮೂರು ದಿನಗಳ ಕಾಲ ಶ್ರೀ ದುರ್ಗಾದೇವಿ ಜಾತ್ರೆಯನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಿಂದ ಆಚರಿಸುತ್ತಾರೆ. ಮಾ.31ರ ಬೆಳಗ್ಗೆ ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ, ಪುನಸ್ಕಾರ, ಉಡಿ ತುಂಬುವ ಕಾರ್ಯ ಹಾಗೂ ಹೂಗಳಿಂದ ಅಲಂಕಾರ ಕಾರ್ಯ ನಡೆಯಲಿದೆ.

    ನಂತರ ವಿವಿಧ ಹೂ ಹಾಗೂ ಅಲಂಕಾರಿಕ ವಸ್ತುಗಳಿಂದ ಸಿಗಂರಿಸಿದ ಶ್ರೀದೇವಿಯ ಅಡ್ಡಪಲ್ಲಕ್ಕಿಯೊಂದಿಗೆ ಡೊಳ್ಳಿನ ಮೇಳ, ಕೋಲಾಟ, ಜಾಂಜ್‌ಮೇಳ ಹಾಗೂ ಇತರ ಮಂಗಳವಾದ್ಯ, ಮಹಿಳೆಯರ ಕಳಶದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಭಕ್ತರು ದೇವಿಗೆ ಉಡಿ ತುಂಬುವ ಕಾರ್ಯ ನೆರವೇರಿಸಲಿದ್ದಾರೆ. ಸಂಜೆ ಭಕ್ತರ ಸಮ್ಮುಖದಲ್ಲಿ ಲಘು ರಥೋತ್ಸವ (ಉಚ್ಚಾಯ) ಸಕಲ ವಾದ್ಯಮೇಳದೊಂದಿಗೆ ಅದ್ದೂರಿಯಿಂದ ನಡೆಯಲಿದೆ.

    ಏ.1ರಂದು ಶ್ರೀದುರ್ಗಾದೇವಿ ಅಡ್ಡಪಲ್ಲಕ್ಕಿಯೊಂದಿಗೆ ಹಾಗೂ ವಾದ್ಯಮೇಳದೊಂದಿಗೆ ಗಂಗಾಸ್ಥಳಕ್ಕೆ ತೆರಳುವ ಹಾಗೂ ಪೂಜಾ ಕಾರ್ಯಕ್ರಮ, ನಂತರ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 4ಕ್ಕೆ ಶ್ರೀ ದುರ್ಗಾದೇವಿ ಜಾಂಡಾ ಲಿಲಾವ ಕಾರ್ಯಕ್ರಮ ನಡೆಯಲಿದೆ. ನಂತರ ಶ್ರೀದೇವಿಯ ಮಹಾ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

    ಏ.2ರಂದು ಶ್ರೀ ದೇವಿಗೆ ಪೂಜೆ, ನೈವೇದ್ಯ ಅರ್ಪಣೆ, ಉಡಿ ತುಂಬುವ ಕಾರ್ಯ ನಡೆಯಲಿದೆ. ರಾತ್ರಿ ಕಡುಬಿನ ಕಾಳಗ ನಂತರ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರ ರಾತ್ರಿ ಶ್ರೀದೇವಿ ಮಹಾತ್ಮೆ ಬಯಲಾಟ ಕಾರ್ಯಕ್ರಮ, ಶನಿವಾರ ಸೇಡಿಗಾಗಿ ಸಿಡಿದೆದ್ದ ಶಿವನಾಗ ನಾಟಕ ಪ್ರದರ್ಶನ, ಭಾನುವಾರ ಹಾಲುಮತದ ಹುಲಿ ನಾಟಕ ಪ್ರದರ್ಶನ ಕಾರ್ಯಕ್ರಮ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts