More

    ಅಳವಂಡಿಯಲ್ಲಿ ಬಣ್ಣದೋಕುಳಿ ಸಂಭ್ರಮ

    ಅಳವಂಡಿ: ಗ್ರಾಮದಲ್ಲಿ ಹೋಳಿ ಹಬ್ಬದ ನಿಮಿತ್ತ ಕಾಮದಹನ ಹಾಗೂ ಬಣ್ಣದ ಓಕುಳಿ ಕಾರ್ಯಕ್ರಮ ಮಂಗಳವಾರ ಸಂಭ್ರಮದಿಂದ ಜರುಗಿತು.

    ಪ್ರತಿ ವರ್ಷದಂತೆ ಈ ಬಾರಿಯೂ ಬೆಳಗ್ಗೆಯಿಂದಲೇ ಮಕ್ಕಳು, ಮಹಿಳೆಯರು, ಯುವಕರು ಹಲಗೆ ನಾದಕ್ಕೆ ಹೆಜ್ಜೆ ಹಾಕುತ್ತ ಪರಸ್ಪರ ಬಣ್ಣ ಎರಚಾಡಿ ಹೋಳಿ ಆಚರಿಸಿದರು. ಬಸ್ ನಿಲ್ದಾಣ ವೃತ್ತ, ಬಜಾರ ರಸ್ತೆ ಇತರ ಸ್ಥಳಗಳಲ್ಲಿ ಒಣ್ಣದೋಕುಳಿ ಕಾರ್ಯಕ್ರಮ ನಡೆಯಿತು. ಹಬ್ಬದ ನಿಮಿತ್ತ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರಿಂದ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು.

    ಇಲ್ಲಿಲ್ಲ ಹೋಳಿ ಆಚರಣೆ: ಶತಮಾನಗಳಿಂದಲೂ ನಡೆದುಕೊಂಡ ಪದ್ಧ್ದತಿಯಂತೆ ಅಳವಂಡಿ ವ್ಯಾಪ್ತಿಯ ಬೆಳಗಟ್ಟಿ, ಮುರ್ಲಾಪುರ, ಭೈರಾಪುರ, ಘಟ್ಟಿರಡ್ಡಿಹಾಳ, ಬೆಟಗೇರಿ ಇತರ ಗ್ರಾಮಗಳಲ್ಲಿ ಹೋಳಿ ಸಂಭ್ರಮ ಇರಲ್ಲಿಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts