More

    ನಿರ್ದಿಷ್ಟ ಗುರಿ ಮುಟ್ಟಲು ಪುಸ್ತಕ ಓದಿ

    ಅಳವಂಡಿ: ಪುಸ್ತಕಗಳನ್ನು ಮನಪೂರ್ವಕವಾಗಿ ಓದಿ ಜ್ಞಾನ ಸಂಪಾದಿಸಿದಾಗ ಮಾತ್ರ ಜೀವನದ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಮುಖ್ಯಶಿಕ್ಷಕ ರಮೇಶ ಸುಣಗಾರ ತಿಳಿಸಿದರು.

    ಗ್ರಾಮದ ಗಂಥಾಲಯದಲ್ಲಿ ಕರ್ನಾಟಕ ಆರೋಗ್ಯ ಸಂವರ್ದನಾ ಸಂಸ್ಥೆ (ಕೆಎಚ್‌ಪಿಟಿ) ಗ್ರಂಥಾಲಯಕ್ಕೆ ಉಚಿತವಾಗಿ ನೀಡಿದ 500ಕ್ಕೂ ಹೆಚ್ಚು ಪುಸ್ತಕಗಳ ಸ್ವೀಕಾರ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.

    ಶಿಕ್ಷಕ ನೀಲಪ್ಪ ಹಕ್ಕಂಡಿ ಮಾತನಾಡಿ, ಪಠ್ಯದ ಜತೆಗೆ ಸಾಮಾನ್ಯ ಜ್ಞಾನವೂ ಅವಶ್ಯ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪುಸ್ತಕಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇದು ಅವರ ಭವಿಷ್ಯವನ್ನು ಮಂಕು ಮಾಡುತ್ತದೆ. ಮೊಬೈಲ್ ಅವಶ್ಯಕತೆ ತಕ್ಕಂತೆ ಮಾತ್ರ ಬಳಸಬೇಕು. ಪುಸ್ತಕ ಓದುವುದನ್ನು ಹವ್ಯಾಸವಾಗಿಸಿಕೊಳ್ಳಬೇಕು. ಜೀವನದಲ್ಲಿ ತಲೆ ಎತ್ತಿ ನಡೆಯಲು ಪುಸ್ತಕಗಳನ್ನು ಓದಬೇಕೆಂದು ಸಲಹೆ ನೀಡಿದರು.
    ಸಂಜೀವಿನಿ ಒಕ್ಕೂಟದ ಮಲ್ಲಮ್ಮ, ಪ್ರತಿಭಾ ಬಣ್ಣದ, ಬಸಮ್ಮ ತವದಿ, ಮಂಗಳಾ ಹಮ್ಮಗಿ, ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ ಕರಡಿ, ಗ್ರಂಥಪಾಲಕ ಶಂಕರಪ್ಪ ಕುಂಬಾರ, ಕೆಎಚ್‌ಪಿಟಿ ಸಮುದಾಯ ಸಂಘಟಕಿ ಅನ್ನಪೂರ್ಣ ಪೂಜಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts