More

  ಆಳಂದ: ಒನಕೆಯಿಂದಲೇ ಶತ್ರುಗಳಿಗೆ ಪಾಠ ಕಲಿಸಿದ ಓಬವ್ವ

  ಆಳಂದ: ಕೆಚ್ಚೆದೆಯ ಹೋರಾಟಗಾರ್ತಿ, ಒನಕೆಯಿಂದಲೇ ಶತ್ರುಗಳಿಗೆ ಪಾಠ ಕಲಿಸಿದ ಶ್ರೇಷ್ಠ ಮಹಿಳೆ ವೀರವನಿತೆ ಒನಕೆ ಓಬವ್ವ ಅವರ ಧೈರ್ಯ, ಸಾಹಸ ಅಜರಾಮರ ಎಂದು ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ ನುಡಿದರು.

  ವಿವೇಕವರ್ಧಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಒನಕ್ಕೆ ಓಬವ್ವ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಿತ್ತೂರ ರಾಣಿ ಚನ್ನಮ್ಮ, ಒನಕೆ ಓಬವ್ವ ಅವರು ಜೀವದ ಹಂಗು ತೊರೆದು ಶತ್ರುಗಳನ್ನು ಸೆದೆಬಡೆದಿದ್ದರು. ಇವರ ಸಾಹಸಗಾಥೆಯನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಕರೆ ನೀಡಿದರು. ಕಜಾಪ ತಾಲೂಕು ಕಾರ್ಯದರ್ಶಿ ಡಿ.ಎಂ.ಪಾಟೀಲ್ ವಿದ್ಯಾರ್ಥಿನಿಯರನ್ನು ಸನ್ಮಾನಿಸಿದರು.

  ಪ್ರಮುಖರಾದ ಗುರುಲಿಂಗಯ್ಯ ಅಳೋಳ್ಳಿಮಠ, ಗುಂಡೇರಾಯ ಆಲಗುಡೆ, ಶಿವಶರಣಪ್ಪ, ಸುನೀತಾ ಶೇರಿಕಾರ, ಸುರೇಖಾ ಲಂಗೋಟಿ, ಸವೀತಾ ಪಾಟೀಲ್ ಇತರರಿದ್ದರು. ವಿದ್ಯಾರ್ಥಿನಿಯರು ಕೈಯಲ್ಲಿ ಒನಕೆ ಹಿಡಿದು ಸಾಹಸ ಪ್ರದರ್ಶಿಸಿದ್ದು ಗಮನಸೆಳೆಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts