More

    ಜಮೀನುಗಳಿಗೆ ತೆರಳಲು ದಾರಿ ಮಾಡಿಕೊಡಿ

    ಆಲಮಟ್ಟಿ: ಬಸವನಬಾಗೇವಾಡಿ ಶಾಖಾ ಕಾಲುವೆಗೆ ಸೇತುವೆ ನಿರ್ಮಿಸಿ ರೈತರ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಆರ್.ಪಿ. ಕುಲಕರ್ಣಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಳವಾಡ ಏತ ನೀರಾವರಿ ಯೋಜನೆಯಡಿ ಇಂಗಳೇಶ್ವರ-ಬಮ್ಮನಹಳ್ಳಿಗೆ ಹೋಗುವ ರಸ್ತೆ ಮಧ್ಯದಲ್ಲಿ ಬಸವನಬಾಗೇವಾಡಿ ಶಾಖಾ ಕಾಲುವೆ ನಿರ್ಮಿಸಿದ್ದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಕಷ್ಟ ಪಡುವಂತಾಗಿದೆ. ರೈತರು ತಮ್ಮ ಜಮೀನುಗಳಿಗೆ ಹೋಗಲು ಇತರರ ಜಮೀನುಗಳನ್ನು ಬಳಸಿ ಹೋಗಬೇಕಾಗದ ಅನಿವಾರ್ಯತೆ ಇದೆ ಎಂದರು.

    ಮಳೆಗಾಲ ಆರಂಭವಾಗಿದ್ದರಿಂದ ರೈತರು ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವರು ಇತರರ ಜಮೀನುಗಳ ಮೂಲಕ ಹೋದರೆ ಬಿತ್ತನೆ ಮಾಡಿದ, ಬಿತ್ತನೆಗೆ ಸಜ್ಜುಗೊಳಿಸಿದ ಭೂಮಿ ಹಾಳಾಗುವ ಸಾಧ್ಯತೆ ಇರುತ್ತದೆ. ಜತೆಗೆ ರೈತರಲ್ಲಿ ಸಂಘರ್ಷಕ್ಕೆ ಕಾರಣವಾಗುತ್ತದೆ ಹೀಗಾಗಿ ಇಂಗಳೇಶ್ವರ ರೈತರು ತಮ್ಮ ಜಮೀನುಗಳಿಗೆ ತೆರಳಲು ಬೊಮ್ಮನಳ್ಳಿ ರಸ್ತೆಗೆ ಸೇತುವೆ ನಿರ್ಮಿಸಬೇಕು. ಇಲ್ಲವಾದಲ್ಲಿ ಪರ್ಯಾಯ ಮಾರ್ಗ ಕಲ್ಪಿಸಬೇಕೆಂದು ಒತ್ತಾಯಿಸಿದರು.

    ಸಿಇ ಆರ್.ಪಿ. ಕುಲಕರ್ಣಿ ಮನವಿ ಸ್ವೀಕರಿಸಿ ಮಾತನಾಡಿ, ರೈತರ ಅನುಕೂಲಕ್ಕಾಗಿ ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಮಲ್ಲಿಕಾರ್ಜುನ ಪಾಟೀಲ, ಬಸಗೊಂಡಪ್ಪ ಡಿಗ್ಗಾವಿ, ರೇವಣಸಿದ್ದಪ್ಪ ಅವಟಿ, ಸಿದ್ದಪ್ಪ ಜಕ್ಕೆನಾಳ, ಸಿದ್ದಪ್ಪ ಕಾಳಗಿ, ಸಿದ್ದರಾಮ ಎಮ್ಮಿ, ಮುರಿಗೆಪ್ಪ ತಾಳಿಕೋಟೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts