More

    ಶೋಹೇಬ್ ಗೆ ಮನದ ಮೂಲೆಯಲ್ಲೇನೋ ಒಂದು ಕೊರಗು ಇದೆಯಂತೆ, ಏನದು?

    ನವದೆಹಲಿ: ಪಾಕ್ ಮಾಜಿ ವೇಗಿ ಶೋಹೇಬ್ ಅಖ್ತರ್ ಗೆ ಮನದ ಮೂಲೆಯಲ್ಲಿ ಒಂದು ಕೊರಗು ಇದೆಯಂತೆ.
    ಅದೇನು ಗೊತ್ತಾ? 2016 ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಿಕ್ಕಾಗ ಅವರೊಂದಿಗೆ ಮಾತನಾಡಲಾಗಲಿಲ್ಲವಂತೆ. ಅಂದು ಆತ ಸಿಕ್ಕಾಗ ಅವರ ಮುಖದ ಮೇಲೆ ಗೆಲುವು, ಉತ್ಸಾಹ, ಆತ್ಮವಿಶ್ವಾಸವಿದ್ದಂತೆ ಕಾಣಲಿಲ್ಲ. ತಾವು ಅವರನ್ನು ತಡೆದು ಜೀವನದ ಬಗ್ಗೆ ಮಾತನಾಡಿ ವಿಶಾಲ ದೃಷ್ಠಿಕೋನ ಬೆಳೆಸಿಕೊಳ್ಳಲು ಸಹಾಯ ಮಾಡಬಹುದಿತ್ತು. ಆದರೆ ಅದು ಆಗಲೇ ಇಲ್ಲವೆಂದು ಇದೇ ವಿಷಯಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಸುಶಾಂತ್​, ಟಿಕ್​ಟಾಕ್​ ಸ್ಟಾರ್​ ಸಿಯಾ ಆತ್ಮಹತ್ಯೆಗೂ ಸಂಬಂಧವಿದೆಯಾ? ಪೊಲೀಸರಿಗೇಕೆ ಸಂಶಯ?

    ಮುಂಬೈನಲ್ಲಿ ಸುಶಾಂತ್ ರನ್ನು ನೋಡಿದಾಗ ಆಗಷ್ಟೇ ಅಖ್ತರ್ ಭಾರತ ಬಿಟ್ಟು ಹೊರಟು ನಿಂತಿದ್ದರು. ಆಗ ಸುಶಾಂತ್ ಅವರನ್ನು ನೋಡಿದಾಗ ಅವರ ಮುಖದ ಮೇಲೆ ಹೆಚ್ಚು ವಿಶ್ವಾಸವಿರಲಿಲ್ಲ ಮತ್ತು ಜೀವನ ಮತ್ತು ಅವರ ಅನುಭವಗಳ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಲು ಸುಶಾಂತ್​​​ನನ್ನು ನಿಲ್ಲಿಸಬೇಕಾಗಿತ್ತು ಎಂದು ಅಖ್ತರ್ ಕಳವಳ ವ್ಯಕ್ತಪಡಿಸಿದ್ದಾರೆ.
    ಜೂನ್ 14 ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರು. ಅವರ ಅಕಾಲಿಕ ನಿಧನಕ್ಕೆ ದೇಶಾದ್ಯಂತ ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಸದಾ ಹಸನ್ಮುಖಯಾಗಿದ್ದ ನಟನ ನಿಧನಕ್ಕೆ ಹಲವಾರು ಕ್ರಿಕೆಟಿಗರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದರು.

    ಇದನ್ನೂ ಓದಿ: ದೆಹಲಿಯಲ್ಲಿ ಕೋವಿಡ್​ ರೋಗಿಗಳಿಗಾಗಿ ಸಜ್ಜಾಗಿದೆ ಜಗತ್ತಿನಲ್ಲಿಯೇ ಅತಿದೊಡ್ಡ ಚಿಕಿತ್ಸಾ ಕೇಂದ್ರ…!

    ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಚಿತ್ರದಲ್ಲಿ ಸುಶಾಂತ್ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದರು. ಅವರ ಆ ಸಮಯವನ್ನು ನೆನಪಿಸಿಕೊಂಡ ಅಖ್ತರ್, ಸುಶಾಂತ್ ಅವರೊಂದಿಗೆ ಮಾತನಾಡಬೇಕಾಗಿತ್ತು ಮತ್ತು ಜೀವನ ವೈಶಾಲ್ಯತೆಯನ್ನು ಅರಿತುಕೊಳ್ಳಲು ಸಹಾಯ ಮಾಡಬೇಕಿತ್ತು ಎಂದರು.
    “ನಾನು 2016 ರಲ್ಲಿ ಭಾರತವನ್ನು ಬಿಡುತ್ತಿದ್ದಾಗ ನಾನು ಅವರನ್ನು ಮುಂಬೈನ ಆಲಿವ್‌ ಹೊಟೆಲ್​​ನಲ್ಲಿ ಭೇಟಿಯಾಗಿದ್ದೆ. ನಿಜ ಹೇಳಬೇಕೆಂದರೆ, ಆತ ಹೆಚ್ಚು ಆತ್ಮವಿಶ್ವಾಸದಿಂದಿರುವಂತೆ ನನಗೆ ತೋರುತ್ತಿರಲಿಲ್ಲ. ಆತ ಎಂಎಸ್ ಧೋನಿ ಚಿತ್ರ ಮಾಡುತ್ತಿರುವುದಾಗಿ ನನ್ನ ಸ್ನೇಹಿತ ಹೇಳಿದಾಗ ಅವನು ತಲೆ ಕೆಳಗಿಳಿಸಿಕೊಂಡು ಹೋದ” ಎಂದು ಅಖ್ತರ್ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಕಳೆದುಹೋದ ಉಂಗುರ 18 ವರ್ಷಗಳ ಬಳಿಕ ಮನೆ ಬಾಗಿಲಲ್ಲಿ ಪ್ರತ್ಯಕ್ಷ!

    “ನಾನು ಅವನ ನಟನೆಯನ್ನು ನೋಡಬೇಕು ಎಂದುಕೊಂಡೆ, ಆತ ಉತ್ತಮ ಹಿನ್ನೆಲೆಯಿಂದ ಬಂದವ ಮತ್ತು ಉತ್ತಮ ಚಿತ್ರ ಮಾಡಿದ್ದಾರೆ. ನಾನು ಅವರೊಂದಿಗೆ ಮಾತನಾಡಿ ನನ್ನ ಜೀವನದ ಅನುಭವಗಳನ್ನು ಹಂಚಿಕೊಳ್ಳಬಹುದಿತ್ತು, ಅದು ಜೀವನದಲ್ಲಿ ವಿಶಾಲವಾದ ದೃಷ್ಟಿಕೋನ ನೀಡಬಹುದಿತ್ತು. ಆದರೆ ಅವರೊಂದಿಗೆ ಮಾತನಾಡದಿರುವುದಕ್ಕೆ ವಿಷಾದಿಸುತ್ತೇನೆ” ಎಂದು ಅಖ್ತರ್ ಹೇಳಿದರು.
    ತಮ್ಮ ಜೀವನವನ್ನು ಕೊನೆಗೊಳಿಸುವುದು ಯಾರಿಗೂ ಅಂತಿಮ ಆಯ್ಕೆಯಾಗಿರಬಾರದು. ಒತ್ತಡ ಮತ್ತು ಖಿನ್ನತೆಯೊಂದಿಗೆ ಹೋರಾಡುವವರು ಪರಿಣಾಮಾತ್ಮಕವೆನಿಸುವ ಇತರರೊಂದಿಗೆ ಮತ್ತು ಮಾತನಾಡಿ ಅದರಿಂದ ಹೊರಬರಲು ಪ್ರಯತ್ನಿಸಬೇಕೆಂದರು.

    ಇದನ್ನೂ ಓದಿ: ಕೋವಿಡ್-19ಗೆ ಸಿಆರ್​​​ಪಿಎಫ್ ಕಾನ್​​ಸ್ಟೆಬಲ್ ಬಲಿ

    “ನಿಮ್ಮ ಜೀವನವನ್ನು ಕೊನೆಗೊಳಿಸುವುದು ಎಂದಿಗೂ ಒಂದು ಆಯ್ಕೆಯಾಗಿರಬಾರದು. ಹಿನ್ನಡೆಗಳು ಜೀವನದಲ್ಲಿ ಒಂದು ಸ್ವತ್ತು ಇದ್ದಂತೆ. ನಿಮಗೆ ಸಮಸ್ಯೆಗಳಿವೆ ಎಂದೆನಿಸಿದರೆ ನೀವು ಬೇರೆಯರೊಂದಿಗೆ ಅದನ್ನು ಚರ್ಚಿಸಬೇಕು. ದೀಪಿಕಾ ಪಡುಕೋಣೆ ಅವರು ಕೂಡ ಹಲವು ಏರು ಪೇರುಗಳನ್ನು ಕಂಡು ಆತಂಕದಿಂದ ಬಳಲುತ್ತಿದ್ದಾಗ ಸಹಾಯದ ಅಗತ್ಯವನ್ನು ಮನಗಂಡು ಅದನ್ನು ಪೂರೈಸಿಕೊಂಡರು. ಸುಶಾಂತ್ ಗೂ ಕೂಡ ಬಹುಶಃ ಸಹಾಯದ ಅಗತ್ಯವಿತ್ತು ಎಂದು ಅವರು ಹೇಳಿದರು.

    ಕರ್ತಾಪುರ್ ಕಾರಿಡಾರ್ ಮರು ಆರಂಭಕ್ಕೆ ಸಿದ್ಧತೆ: ಪಾಕಿಸ್ತಾನದ್ದು ತೋರಿಕೆ ಸದ್ಭಾವನೆ ಎಂದ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts