More

    ಮತ್ತೆ ದೇವರಾಗಲು ಹೊರಟಿದ್ದಾರೆ ಅಕ್ಷಯ್​ ಕುಮಾರ್​ …

    ಮುಂಬೈ: ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಅಕ್ಷಯ್​ ಕುಮಾರ್​ ಮತ್ತು ಪರೇಶ್​ ರಾವಲ್​ ಅಭಿನಯದ ‘ಓ ಮೈ ಗಾಡ್​’, ಸೂಪರ್​ ಹಿಟ್​​ ಆಗಿದ್ದಷ್ಟೇ ಅಲ್ಲ, ಕನ್ನಡ ಮತ್ತು ತೆಲುಗಿಗೂ ರೀಮೇಕ್​ ಆಗಿತ್ತು. ಆ ಚಿತ್ರದ ಯಶಸ್ಸಿನ ನಂತರ ಅದರ ಮುಂದುವರೆದ ಭಾಗ ಬರುತ್ತದೆ ಎಂಬ ಸುದ್ದಿಯಾಗಿತ್ತಾದರೂ, ಚಿತ್ರ ಪ್ರಾರಂಭವಾಗಿರಲಿಲ್ಲ.

    ಇದನ್ನೂ ಓದಿ: 24 ಗಂಟೆ ಕ್ಯಾಮೆರಾ ಮುಂದಿರೋಕೆ ಇಷ್ಟ ಇಲ್ಲ … ‘ಬಿಗ್​ ಬಾಸ್​’ಗೆ ನೋ ಎಂದ ಭೂಮಿಕಾ

    ಇದೀಗ ‘ಓ ಮೈ ಗಾಡ್​ 2’ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಎಲ್ಲಾ ಅಂದುಕೊಂಡಂತೆ ಆದರೆ ಸೆಪ್ಟೆಂಬರ್​ನಲ್ಲಿ ಪ್ರಾರಂಭವಾಗಲಿದೆ. ಮೊದಲ ಚಿತ್ರದಲ್ಲಿ ಪರೇಶ್​ ರಾವಲ್​ ಸಾಮಾನ್ಯ ಮನುಷ್ಯನಾಗಿ ಕಾಣಿಸಿಕೊಂಡರೆ, ಅಕ್ಷಯ್​ ಕುಮಾರ್​ ದೇವರ ಪಾತ್ರದಲ್ಲಿ ನಟಿಸಿದ್ದರು. ಸೀಕ್ವೆಲ್​ನಲ್ಲೂ ಅಕ್ಷಯ್​ ಕುಮಾರ್​ ದೇವರಾಗಿ ಮುಂದುವರೆಯಲಿದ್ದು, ಇನ್ನೊಂದು ಪ್ರಮುಖ ಪಾತ್ರದಲ್ಲಿ ಪಂಕಜ್​ ತ್ರಿಪಾಠಿ ನಟಿಸುತ್ತಿದ್ದಾರೆ.

    ಅಕ್ಷಯ್​ ಮತ್ತು ಪಂಕಜ್​ ತ್ರಿಪಾಠಿ ಒಟ್ಟಿಗೆ ನಟಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಅವರಿಬ್ಬರೂ, ಸಾಜಿದ್​ ನಡಿಯಾಡ್​ವಾಲಾ ನಿರ್ದೇಶನದ ‘ಬಚ್ಚನ್​ ಪಾಂಡೆ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು, ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅದರ ಬಿಡುಗಡೆಗೆ ಮುನ್ನವೇ, ಇಬ್ಬರೂ ಇನ್ನೊಂದು ಚಿತ್ರದಲ್ಲಿ ಜತೆಯಾಗಿ ನಟಿಸುತ್ತಿರುವುದು ವಿಶೇಷ.

    ಇದನ್ನೂ ಓದಿ: ಕಾರ್ಮಿಕರ ಒಕ್ಕೂಟಕ್ಕೆ ಪುನೀತ್​ 10 ಲಕ್ಷ, ಹೊಂಬಾಳೆ ಫಿಲಂಸ್​ 32 ಲಕ್ಷ ರೂ ನೆರವು

    ಈಗಾಗಲೇ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಸೆಪ್ಟೆಂಬರ್​ನಲ್ಲಿ ಚಿತ್ರೀಕರಣ ಪ್ರಾರಂಭವಾಗಿ ಅಕ್ಟೋಬರ್​ ಕೊನೆಯ ಹೊತ್ತಿಗೆ ಮುಕ್ತಾಯವಾಗಲಿದೆ. ಈ ಚಿತ್ರದಲ್ಲಿ ಅಕ್ಷಯ್​ ಮತ್ತು ಪಂಕಜ್​ ಜತೆಗೆ ಯಾಮಿ ಗೌತಮ್​ ಸಹ ಇನ್ನೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಮೊದಲ ಚಿತ್ರವನ್ನು ಉಮೇಶ್​ ಶುಕ್ಲಾ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎಂಬ ವಿಷಯ ಇನ್ನೂ ಬಹಿರಂಗವಾಗಿಲ್ಲ.

    ‘ಮಹಾರಾಜ’ನಾದ ಆಮೀರ್​​ ಖಾನ್​ ಪುತ್ರ … ಇಂದಿನಿಂದ ಚಿತ್ರೀಕರಣ ಪ್ರಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts