More

    ಡಾ. ಸುಮಾ ದೇಸಾಯಿಗೆ ರಂಗನಾಥ ಶರ್ಮ ಪ್ರಶಸ್ತಿ

    ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ನೀಡುವ ಪ್ರಸಕ್ತ ಸಾಲಿನ ‘ಮಹಾಮಹೋಪಾಧ್ಯಾಯ ವಿದ್ವಾನ್ ರಂಗನಾಥ ಶರ್ಮ ಪ್ರಶಸ್ತಿ’ಗೆ ಬೆಳಗಾವಿ ಜಿಲ್ಲೆ ಕೌಜಲಗಿಯ ಪ್ರಾಧ್ಯಾಪಕಿ ಹಾಗೂ ಸಂಶೋಧಕಿ ಡಾ. ಸುಮಾ ಶಿವಾನಂದ ದೇಸಾಯಿ ಅವರು ಆಯ್ಕೆಯಾಗಿದ್ದಾರೆ.

    ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು, ಡಿ.3ರಂದು ಬೆಳಗ್ಗೆ 10.30ಕ್ಕೆ ಬಾಗಲಕೋಟೆಯ ಬ.ವಿ.ವಿ. ಸಂಘದ ಪಾಲಿಟೆಕ್ನಿಕ್ ಸೆಮಿನಾರ್ ಹಾಲ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ ಕೋಣೆಮನೆ ತಿಳಿಸಿದ್ದಾರೆ.

    ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಎಸ್.ಜಿ. ಕೋಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಚಿದಾನಂದ ಸ್ವಾಮಿ ಹಿರೇಮಠ ಅವರು ಪ್ರಧಾನ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts