More

    10 ವಿಕೆಟ್ ಸರದಾರನಿಗೆ ಕೊಕ್ ನೀಡಿದ ಕಿವೀಸ್!

    ಕ್ರೈಸ್ಟ್‌ಚರ್ಚ್: ಭಾರತ ಎದುರು ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸಿ ಐತಿಹಾಸಿಕ ಸಾಧನೆ ಮಾಡಿದ್ದ ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್, ತವರಿನಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಕೊಕ್ ಪಡೆದಿದ್ದಾರೆ. ಮುಂಬೈನಲ್ಲಿ ನಡೆದ ಭಾರತ ವಿರುದ್ಧದ ಸರಣಿಯ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಜಾಜ್ ಪಟೇಲ್ 119 ರನ್‌ಗಳಿಗೆ 10 ವಿಕೆಟ್ ಪಡೆದಿದ್ದರು. ಈ ಸಾಧನೆ ಮಾಡಿದ ವಿಶ್ವದ 3ನೇ ಬೌಲರ್ ಎನಿಸಿದ್ದರು. ಜನವರಿ 1ರಿಂದ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಗುರುವಾರ ಪ್ರಕಟಿಸಲಾದ 13 ಆಟಗಾರರ ಕಿವೀಸ್ ತಂಡದಿಂದ ಅಜಾಜ್ ಪಟೇಲ್ ಅವರನ್ನು ಕೈಬಿಡಲಾಗಿದೆ.

    ಆಲ್ರೌಂಡರ್ ರಚಿನ್ ರವೀಂದ್ರ ತಂಡದಲ್ಲಿರುವ ಏಕೈಕ ಸ್ಪಿನ್ನರ್ ಆಗಿದ್ದಾರೆ. ತವರಿನ ಸ್ಪೀಡ್ ಪಿಚ್‌ಗಳಲ್ಲಿ ಆಡುವುದರಿಂದ ತಮ್ಮನ್ನು ಕಡೆಗಣಿಸಿರುವುದನ್ನು ಅರ್ಥಮಾಡಿಕೊಳ್ಳಬಲ್ಲೆ ಎಂದಿರುವ ಅಜಾಜ್, ಕಿವೀಸ್‌ನಲ್ಲೂ ಸ್ಪಿನ್ ಸ್ನೇಹಿ ಪಿಚ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತಾಗಬೇಕು ಎಂದಿದ್ದಾರೆ. ಟ್ರೆಂಡ್ ಬೌಲ್ಟ್, ಟಿಮ್ ಸೌಥಿ, ಕೈಲ್ ಜೇಮಿಸನ್, ನೀಲ್ ವಾಗ್ನರ್, ಮ್ಯಾಟ್ ಹೆನ್ರಿ ಸ್ಥಾನ ಉಳಿಸಿಕೊಂಡರೆ, ಬಾಂಗ್ಲಾ ವಿರುದ್ಧದ ಸರಣಿಗೆ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿದ್ದು, ಕೇನ್ ವಿಲಿಯಮ್ಸನ್ ಬದಲಿಗೆ ಈ ಸರಣಿಗೂ ಟಾಮ್ ಲಾಥಮ್ ತಂಡ ಮುನ್ನಡೆಸಲಿದ್ದಾರೆ.

    ಕಿವೀಸ್ ತಂಡ: ಟಾಮ್ ಲಾಥಮ್ (ನಾಯಕ), ಟಾಮ್ ಬ್ಲಂಡೆಲ್, ಟ್ರೆಂಡ್ ಬೌಲ್ಟ್, ದೆವೊನ್ ಕಾನ್‌ವೇ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಡೆರಿಲ್ ಮಿಚೆಲ್, ಹೆನ್ರಿ ನಿಕೋಲಸ್, ರಚಿನ್ ರವೀಂದ್ರ, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವಾಗ್ನರ್, ವಿಲ್ ಯಂಗ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts