More

    ‘ಬ್ಯಾಂಕ್​ ಆಫ್​ ಭಾಗ್ಯಲಕ್ಷ್ಮಿ’ಯಲ್ಲಿ ಅಜೇಯ್​ ರಾವ್​ ಹೊಸ ಖಾತೆ

    ‘ಶೋಕಿವಾಲ’ ನಂತರ ಅಜೇಯ್​ ರಾವ್​ ಯಾವೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಅವರ ಮುಂದಿನ ನಡೆ ಏನು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈ ಗ್ಯಾಪ್​ನಲ್ಲಿ ಅವರು ‘ದಿಲ್​ ಪಸಂದ್​’ ಚಿತ್ರದಲ್ಲೊಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಬ್ಯಾಂಕ್​ ಆಫ್​ ಭಾಗ್ಯಲಕ್ಷ್ಮಿ’ ಎಂಬ ಹೊಸ ಚಿತ್ರದಲ್ಲಿ ಅವರು ಹೊಸ ಖಾತೆ ತೆರೆಯಲು ಹೊರಟಿದ್ದಾರೆ.

    ಇದನ್ನೂ ಓದಿ: ಸ್ನೇಹಿತರಿಂದ ಸ್ನೇಹಿತನಿಗಾಗಿ ‘ಯೆಲ್ಲೋ ಗ್ಯಾಂಗ್ಸ್’; ಟ್ರೇಲರ್​ ಬಿಡುಗಡೆ

    ‘ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ಮತ್ತು ‘ಸ್ಪೂಕಿ ಕಾಲೇಜ್​’ ಚಿತ್ರಗಳನ್ನು ತಮ್ಮ ಶ್ರೀದೇವಿ ಎಂಟರ್​ಟೈನರ್ಸ್​ನಲ್ಲಿ ನಿರ್ಮಿಸಿರುವ ಹೆಚ್.ಕೆ, ಪ್ರಕಾಶ್ ದೀಪಾವಳಿಗೆ ಅಜೇಯ್​ ರಾವ್​ ಜತೆಗೆ ಹೊಸ ಚಿತ್ರವನ್ನು ಘೋಷಣೆ ಮಾಡಿದ್ದಾರೆ. ಅದೇ ‘ಬ್ಯಾಂಕ್​ ಆಫ್​ ಭಾಗ್ಯಲಕ್ಷ್ಮಿ’. ಪ್ರಕಾಶ್​ ಈ ಹಿಂದಿನ ಮೂರೂ ಚಿತ್ರಗಳಲ್ಲಿ ಹೊಸಬರಿಗೆ ನಿರ್ದೇಶನ ಮಾಡುವ ಅವಕಾಶ ನೀಡಿದ್ದಾರೆ. ಈ ಬಾರಿಯೂ ಅದು ಮುಂದುವರೆದಿದ್ದು, ಅಭಿಷೇಕ್ ಎಂ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ಈ ಹಿಂದೆ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’, ‘ಬಹುಪರಾಕ್’ ಮತ್ತು ‘ಆಪರೇಷನ್ ಅಲಮೇಲಮ್ಮ’ ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಪಿನಾಕ ಎಂಬ VFX ಸ್ಟುಡಿಯೋ ಹೊಂದಿರುವ ಅಭಿಷೇಕ್ ಎಂ ‘ಬ್ಯಾಂಕ್ ಆಫ್ ಭಾಗ್ಯಲಕ್ಷಿ’ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

    ಬ್ಯಾಂಕ್​ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಕಥಾಹಂದರ ಈ ಚಿತ್ರದಲ್ಲಿದ್ದು, ಸದ್ಯಕ್ಕೆ ಅಜೇಯ್​ ರಾವ್​ ಅವರ ಹೆಸರನ್ನು ಮಾತ್ರ ಚಿತ್ರತಂಡ ಬಹಿರಂಗ ಮಾಡಿದೆ. ಮಿಕ್ಕಂತೆ, ನಾಯಕಿ ಮತ್ತು ಇತರೆ ಕಲಾವಿದರು ಇನ್ನಷ್ಟೇ ಆಯ್ಕೆಯಾಗಬೇಕಿದೆ.

    ಇದನ್ನೂ ಓದಿ: ಕೃಷ್ಣನಿಗೆ ‘ಕೃಷ್ಣ’ ಸಾಥ್​; ದಿಲ್​ ಪಸಂದ್ ಚಿತ್ರದಲ್ಲಿ ಅಜೇಯ್​ ರಾವ್​ ವಿಶೇಷ ಪಾತ್ರ

    ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ ಈ ಚಿತ್ರಕ್ಕಿದೆ.

    ‘ಕಾಂತಾರ’ ಮತ್ತೊಂದು ದಾಖಲೆ; ಹೊಂಬಾಳೆ ಫಿಲ್ಮ್ಸ್​ಗೆ ಇದು ಸಂಭ್ರಮದ ಸಂಗತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts