More

    ಗಾಯಾಳು ಕಾರ್ಮಿಕರಿಗೆ ಪರಿಹಾರ ನೀಡಿ

    ಬೆಳಗಾವಿ: ಖಾನಾಪುರ ತಾಲೂಕಿನ ತಟ್ಟಿಹಳ್ಳದಲ್ಲಿ ಕಳೆದ ಫೆ. 8ರಂದು ಟ್ರ್ಯಾಕ್ಟರ್ ಉರುಳಿ ಗಂಭೀರವಾಗಿ ಗಾಯಗೊಂಡಿದ್ದ ಬೋಗೂರು ಗ್ರಾಮದ 18 ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಬಡ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದು, ಸರ್ಕಾರ ಶೀಘ್ರ ಗಾಯಾಳುಗಳಿಗೆ ಪರಿಹಾರಧನ ಬಿಡುಗಡೆ ಮಾಡಬೇಕು ಎಂದು ಗ್ರಾಮದ ಗಾಯಾಳುಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.

    ಖಾನಾಪುರ ತಾಲೂಕಿನ ಇಟಗಿಗೆ ಬೋಗೂರಿನಿಂದ ಕೂಲಿ ಕೆಲಸಕ್ಕೆ ತೆರಳುತ್ತಿದ್ದ 24 ಕಾರ್ಮಿಕರ ಪೈಕಿ 6 ಜನ ತಟ್ಟಿಹಳ್ಳದಲ್ಲಿ ಟ್ರ್ಯಾಕ್ಟರ್ ಉರುಳಿ ಮೃತಪಟ್ಟಿದ್ದರು. ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರಧನ ವಿತರಿಸಲಾಗಿದೆ. ಆದರೆ, ಗಂಭೀರವಾಗಿ ಗಾಯಗೊಂಡು ಬದುಕುಳಿದ 18 ಕಾರ್ಮಿಕರಿಗೆ ಪರಿಹಾರ ಸಿಕ್ಕಿಲ್ಲ. ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಕಂದಾಯ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದ್ದರು. ಗಾಯಗೊಂಡಿರುವ ಕಾರ್ಮಿಕರು ಯಾವುದೇ ನೆರವಿಲ್ಲದೇ ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರ ಕೂಡಲೇ ಗಾಯಾಳು ಕಾರ್ಮಿಕರಿಗೆ ಪರಿಹಾರಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಚಂದ್ರಗೌಡ ಪಾಟೀಲ, ಈರಪ್ಪ ರುದ್ರಪ್ಪ ತಳವಾರ, ಸೋಮವ್ವ ಬಾಳಪ್ಪ ಅಳಗೋಡಿ, ನೀಲವ್ವ ಯಲ್ಲಪ್ಪ ಮುತ್ನಾಳ, ಸುವರ್ಣ ಮುರಗೋಡ, ಸಾಂವಕ್ಕ ಅವರೊಳ್ಳಿ, ಬಸಪ್ಪ ಅವರೊಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts