More

    ಪ್ರಯಾಣಿಕರಿಲ್ಲದಿದ್ದರೂ ನಡೆಸಲೇ ಬೇಕು ಹಾರಾಟ; ಇಲ್ಲದಿದ್ದರೆ ವಿಮಾನ ಯಾನ ಸಂಸ್ಥೆಗಳಿಗೇ ಸಂಕಷ್ಟ..!

    ನವದೆಹಲಿ: ಕರೊನಾ ಸಂಕಷ್ಟದ ಸಮಯದಲ್ಲಿ ವಿಮಾನ ಯಾನ ಸಂಸ್ಥೆಗಳು ಭಾರಿ ನಷ್ಟ ಅನುಭವಿಸುತ್ತಿವೆ. ಇದನ್ನು ತಗ್ಗಿಸಲು ಸಿಬ್ಬಂದಿ ಕಡಿತ, ಸಂಬಳ ಕಡಿತ ಹಾಗೂ ಸಂಬಳರಹಿತ ರಜೆ ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತಿವೆ.

    ಪ್ರಯಾಣಿಕರಿಲ್ಲದ ಹಾಗೂ ಪ್ರಯಾಣ ನಿರ್ಬಂಧದ ಕಾರಣದಿಂದ ಸದ್ಯ ನಿಗದಿಗಿಂತಲೂ ಶೇ.50ಕ್ಕೂ ಕಡಿಮೆ ವಿಮಾನಗಳು ಹಾರಾಟ ನಡೆಸುತ್ತಿವೆ. ಇದೆಲ್ಲದರ ನಡುವೆ ವಿಮಾನ ಕಂಪನಿಗಳು ವಿಚಿತ್ರ ಸಮಸ್ಯೆಯೊಂದನ್ನು ಎದುರಿಸುತ್ತಿವೆ.

    ಏಷಿಯಾನಾ ಏರಲೈನ್ಸ್​ ಕಂಪನಿ ಜಗತ್ತಿನ ಅತಿ ದೊಡ್ಡ ವಾಣಿಜ್ಯ ವಿಮಾನದ ಹಾರಾಟವನ್ನು 20ಕ್ಕೂ ಅಧಿಕ ಬಾರಿ ನಡೆಸಿದೆ. ಅದೂ ಕೂಡ ಯಾವುದೇ ಪ್ರಯಾಣಿಕರಿಲ್ಲದೇ ಹಾಗೂ ಎಲ್ಲಿಯೂ ಹೋಗದೇ ಇದ್ದಲ್ಲಿಗೆ ಮರಳಲು. ಏಕೆ ಗೊತ್ತೆ? ತನ್ನಲ್ಲಿರುವ ಟ್ರೈನಿ ಪೈಲಟ್​ಗಳ ಚಾಲನಾ ಪರವಾನಗಿಯ ಮಾನ್ಯತೆಯನ್ನು ಚಾಲ್ತಿಯಲ್ಲಿಡಲು.

    ಇದನ್ನೂ ಓದಿ; ಮ್ಯಾಟ್ರಿಮೊನಿ ಸೈಟ್​ಗಳೇ ಈತನಿಗೆ ಆದಾಯ ಮೂಲ; ಹುಡುಗಿಯರಿಗೆ ವಂಚಿಸೋದೇ ಖಯಾಲಿ 

    ಏರ್​ಬಸ್​ ಎಸ್​ಇ ಎ380 ವಿಮಾನ ದಕ್ಷಿಣ ಕೊರಿಯಾದ ವಾಯು ಮಾರ್ಗದಲ್ಲಿ ಸತತ ಮೂರು ದಿನಗಳ ಕಾಲ ಹಲವು ಗಂಟೆಗಳವರೆಗೆ ಹಾರಾಟ ನಡೆಸಿದೆ. 495 ಆಸನ ಸಾಮರ್ಥ್ಯದ ವಿಮಾನದ ಟೇಕ್ಆಫ್​ ಹಾಗೂ ಲ್ಯಾಂಡಿಂಗ್​ ಅಭ್ಯಾಸ ನಡೆಸಲಾಗಿದೆ.

    ಈ ಅಭ್ಯಾಸಕ್ಕೆ ಭಾರಿ ಹಣ ಖರ್ಚಾಗುತ್ತದೆ. ಆದರೆ, ಕಂಪನಿ ತನ್ನ ಪೈಲಟ್​ಗಳು ಲೈಸೆನ್ಸ್​ ಕಳೆದುಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಹೀಗಾಗಿ ವಿಮಾನ ಹಾರಾಟ ಅನಿವಾರ್ಯ ಎಂದು ಸಂಸ್ಥೆ ಹೇಳಿದೆ. ಇದಲ್ಲದೇ, ಏಷಿಯಾನಾದ ಇನ್ನು 135 ಪೈಲಟ್​ಗಳು ನಿಗದಿತ ಹಾರಾಟ ಅವಧಿಯನ್ನು ಪೂರ್ಣಗೊಳಿಸಿಲ್ಲದಿರುವುದು ಮತ್ತೊಂದು ಸಂಕಷ್ಟಕ್ಕೆ ಕಾರಣವಾಗಿದೆ.

    ಇದನ್ನೂ ಓದಿ; ತುರ್ತು ಬಳಕೆಗೆ ಭಾರತದಲ್ಲಿ ರೆಡಿಯಾಗಿದೆ ಕರೊನಾ ಲಸಿಕೆ; ಏಷ್ಟಿರಲಿದೆ ಬೆಲೆ ? 

    ಬೇರೆ ದೇಶಗಳಲ್ಲಿರುವ ಸಿಮ್ಯುಲೇಟರ್​ಗಳಲ್ಲಿ ಅಭ್ಯಾಸ ನಡೆಸಬೇಕೆಂದರೆ ಅಲ್ಲಿಗೆ ತೆರಳಲು ಅಂತಾರಾಷ್ಟ್ರೀಯ ವಿಮಾನ ಯಾನ ಇನ್ನೂ ಆರಂಭವಾಗಿಲ್ಲ. ಇದು ಹಲವು ವಿಮಾನ ಯಾನ ಸಂಸ್ಥೆಗಳಿಗೆ ತೊಂದರೆಗೆ ಕಾರಣವಾಗಿದೆ. ಸೂಪರ್​ ಜಂಬೋ ಜೆಟ್​ ಗಳ ಹಾರಾಟಕ್ಕೆ ಪರವಾನಗಿ ಚಾಲ್ತಿಯಲ್ಲಿ ಇರಬೇಕೆಂದರೆ, 90 ದಿನಗಳಲ್ಲಿ ಕನಿಷ್ಠ 3 ಬಾರಿಯಾದರೂ ಪೈಲಟ್​ ಅಂಥ ವಿಮಾನವನ್ನು ಟೇಕ್​ಆಫ್​ ಹಾಗೂ ಲ್ಯಾಂಡಿಂಗ್​ ಮಾಡಿರಬೇಕು.

    ಚಿನ್ನ ಕಳ್ಳಸಾಗಣೆಯಿಂದ ಗಳಿಸಿದ್ದನ್ನೆಲ್ಲ ಬಚ್ಚಿಟ್ಟಿದ್ದೆಲ್ಲಿ ಸ್ವಪ್ನಾ ಸುರೇಶ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts