More

    ರಾಜಧಾನಿಯಲ್ಲಿ ಕೋವಿಡ್​-19 ಸೋಂಕು ಹೆಚ್ಚುವ ಆತಂಕ; ಕಾರಣವೇನು ಗೊತ್ತೇ?

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಂಟಾಗಿರುವ ಉಸಿರುಗಟ್ಟಿಸುವ ವಾತಾವರಣ ಮತ್ತೊಂದು ಆತಂಕವನ್ನು ತಂದಿಟ್ಟಿದೆ. ದೆಹಲಿಯಲ್ಲಿ ಹೆಚ್ಚಾಗಿರುವ ವಾಯುಮಾಲಿನ್ಯ ಕೋವಿಡ್​-19 ಸೋಂಕಿನ ಪ್ರಕರಣ, ಸೋಂಕಿತರ ರೋಗಲಕ್ಷಣಗಳನ್ನು ಹೆಚ್ಚಾಗಿಸುವ ಸಾಧ್ಯತೆ ಇದೆ ಎಂಬ ಭಯ ಇದೀಗ ಕಾಡಲಾರಂಭಿಸಿದೆ.

    ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸನ್​ನ ನಿರ್ದೇಶಕ ಡಾ. ರಣ್​ದೀಪ್​ ಗುಲೇರಿಯಾ ಅವರು ಇಂಥದ್ದೊಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ವಾಯುಮಾಲಿನ್ಯ ಶ್ವಾಸಕೋಶದ ಆರೋಗ್ಯದ ಮೇಲೆ ಅದರಲ್ಲೂ ಶ್ವಾಸಕೋಶದ ತೊಂದರೆ, ಅಸ್ತಮಾ ಹೊಂದಿರುವವರನ್ನು ಬಹುವಾಗಿ ಕಾಡಲಿದೆ. ಅಲ್ಲದೆ ಕೋವಿಡ್​ ಕೂಡ ಶ್ವಾಸಕೋಶವನ್ನು ಬಾಧಿಸುವ ರೋಗವಾದ್ದರಿಂದ ಕೋವಿಡ್​ ಸೋಂಕಿತರ ಸಾವಿನ ಸಾಧ್ಯತೆಯನ್ನು ಈ ಮಾಲಿನ್ಯ ಹೆಚ್ಚಿಸಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಪುನೀತ್ ರಾಜಕುಮಾರ್ ಸಾವಿನ ಕುರಿತು ಮತ್ತೊಂದು ಅನುಮಾನ!?; ತನಿಖೆಗೆ ಆಗ್ರಹಿಸಿ ಪೊಲೀಸ್ ಠಾಣೆಗೂ ದೂರು…

    ಇನ್ನು ಮಾಲಿನ್ಯಯುಕ್ತ ಗಾಳಿಯಲ್ಲಿ ಕೋವಿಡ್​-19 ವೈರಸ್ ಹೆಚ್ಚು ಕಾಲ ಇರಬಲ್ಲದು, ಗಾಳಿ ಮೂಲಕ ಹೆಚ್ಚು ಹರಡಬಲ್ಲದು. ಅಲ್ಲದೆ ಈ ಮಾಲಿನ್ಯ ಶ್ವಾಸಕೋಶದ ಊತ ಹಾಗೂ ಉರಿಯನ್ನು ಹೆಚ್ಚಿಸುತ್ತದೆ. ಇದು ಕೂಡ ಕೋವಿಡ್​ ಸೋಂಕಿನ ಲಕ್ಷಣಗಳನ್ನು ಗಂಭೀರವಾಗಿಸಬಲ್ಲದು ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಭಾನುವಾರ ಸಂಜೆ ರಾಜ್ಯಾದ್ಯಂತ ಏಕಕಾಲಕ್ಕೆ ಪುನೀತ್ ರಾಜಕುಮಾರ್‌ಗೆ ಬೃಹತ್ ಶ್ರದ್ಧಾಂಜಲಿ: ಎಲ್ಲೆಲ್ಲಿ, ಹೇಗೆ? ಇಲ್ಲಿದೆ ಮಾಹಿತಿ..

    ಕೇಂದ್ರದ ಒಂದೇ ನಿರ್ಧಾರಕ್ಕೆ ದೇಶದ 22 ರಾಜ್ಯಗಳಲ್ಲಿ ಪೆಟ್ರೋಲ್‌-ಡೀಸೆಲ್‌ ದರ ಇಳಿಕೆ: ಜಾಸ್ತಿ ಇಳಿಕೆ ಎಲ್ಲಿ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts