More

    1.5 ಕೆಜಿ ಚಿನ್ನವನ್ನು ಕಳ್ಳ ಸಾಗಾಣಿಕೆ​ ಮಾಡಲು ಯತ್ನಿಸಿದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

    ಕೊಚ್ಚಿ; 1.5 ಕೆಜಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

    ಶಫಿ ಬಂಧಿತ ಆರೋಪಿಯಾಗಿದ್ದಾನೆ. ಈತ ವಯನಾಡು ಮೂಲದವನಾಗಿದ್ದಾನೆ. ಬಂಧಿತ ಶಫಿಯಿಂದ 1487 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

    ಇದನ್ನೂ ಓದಿ: ಒಂದು ತಿಂಗಳ ಕಾಲ ಕೀಟ ತಿಂದು, ತನ್ನ ಮೂತ್ರವನ್ನೇ ಕುಡಿದು ಬದುಕುಳಿದ!

    ಬಹ್ರೇನ್ , ಕೋಯಿಕ್ಕೋಡ್ ಹಾಗೂ ಕೊಚ್ಚಿ ನಡುವಿನ ಏರ್ ಇಂಡಿಯಾ ವಿಮಾನದ ಕ್ಯಾಬಿನ್ ಸಿಬ್ಬಂದಿ ಚಿನ್ನ ಸಾಗಾಣಿಕೆ ಮಾಡುತ್ತಿರುವ ಮಾಹಿತಿ ಅಧಿಕಾರಿಗಳಿಗೆ ಲಭಿಸಿತ್ತು. ಕೈಗಳಿಗೆ ಚಿನ್ನವನ್ನು ಸುತ್ತಿಕೊಂಡು, ಅಂಗಿಯ ತೋಳುಗಳಿಂದ ಮುಚ್ಚಿ ಗ್ರೀನ್ ಚಾನೆಲ್ ಮೂಲಕ ಆರೋಪಿ ಹಾದುಹೋಗುವ ಪ್ಲಾನ್ ಮಾಡಿದ್ದನು.

    ಆರೋಪಿಯು ತನ್ನ ಕೈಗಳಿಗೆ ಚಿನ್ನವನ್ನು ಸುತ್ತಿ ಅಂಗಿಯ ತೋಳಿನಿಂದ ಮುಚ್ಚಿಕೊಂಡಿದ್ದನು. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳಿಗಾಗಿ ವಿಚಾರಣೆ ನಡೆಸುತ್ತಿದ್ದಾರೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಬ್ರೆಸ್ಟ್‌ ಕ್ಯಾನ್ಸರ್‌ ವಿರುದ್ಧ ಹೋರಾಡಿ ಗೆದ್ದ ನಟಿ ಹಂಸನಂದಿನಿ

    ಈ ಮೊದಲು ಸಿಂಗಾಪುರದಿಂದ ಚೆನೈಗೆ ಆಗಮಿಸಿದ್ದ ಇಬ್ಬರು ಪ್ರಯಾಣಿಕರಿಂದ 3.32 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡು ಬಂಧಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎಮ್ಮೆನೋ..ಹಸುನೋ.. ಸುಂದರವಾದ ಕರು ಹಾಕಿದ್ರೆ ಸಿದ್ದರಾಮಯ್ಯ ಅದೂ ನನ್ನದು ಅಂತಾರೆ: ಪ್ರಹ್ಲಾದ್ ಜೋಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts