More

    ನಟ ದಿಗಂತ್ ಆರೋಗ್ಯದ ಬಗ್ಗೆ ಪತ್ನಿ ಐಂದ್ರಿತಾ ರೇ ಹೇಳಿದ್ದಿಷ್ಟು

    ಬೆಂಗಳೂರು: ಗೋವಾ ಟ್ರಿಪ್‌ ಅಲ್ಲಿದ್ದ ವೇಳೆ ಸೊಮರ್‌ಸಾಲ್ಟ್ ಜಂಪ್‌ ಮಾಡುವಾಗ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದು ಆಸ್ಪತ್ರೆ ಸೇರಿರುವ ಸ್ಯಾಂಡಲ್​ವುಡ್ ದೂದ್‌ಪೇಡಾ ನಟ ದಿಗಂತ್ ಆರೋಗ್ಯದ ಬಗ್ಗೆ ಪತ್ನಿ ಐಂದ್ರಿತಾ ರೇ ಮಾಹಿತಿ ನೀಡಿದ್ದಾರೆ.

    ಇಂದು ಮಾಧ್ಯಮಗಳ ಮುಂದೆ ಪತಿಯ ಆರೋಗ್ಯದ ಬಗ್ಗೆ ಮಾತನಾಡಿದ ಐಂದ್ರಿತಾ, ದಿಗಂತ್ ನಾವು ವೆಕೆಷನ್‌ಗೆ ಹೋಗಿದ್ವಿ. ರೆಸಾರ್ಟ್‌ಗೆ ಹೋಗಿದ್ವಿ, ಸೊಮರ್‌ಸಾಲ್ಟ್ ಜಂಪ್‌ ಮಾಡುವಾಗ ಸ್ವಲ್ಪ ರಾಂಗ್ ಆಗಿ ಲ್ಯಾಂಡ್ ಆದ ಪರಿಣಾಮ ಕುತ್ತಿಗೆಗೆ ಪೆಟ್ಟಾಗಿದೆ ಎಂದು ತಿಳಿಸಿದರು.

    ಗೋವಾದಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ, ಅವರನ್ನು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಯಿತು. ನಿನ್ನೆ ನಟ ದಿಗಂತ್‌ ಅವರಿಗೆ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಲಾಯಿತು ಎಂದರು. ಗೋವಾ ಮಣಿಪಾಲ್ ಆಸ್ಪತ್ರೆಗೆ ಹೋಗಿದ್ವಿ. ಅಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಏರ್ ಲಿಫ್ಟ್‌ ಮಾಡಿದ್ವಿ. ಗೋವಾ ಸರ್ಕಾರಕ್ಕೆ ಧನ್ಯವಾದ. ಈಗ ಸರ್ಜರಿ ಆಗಿದೆ ಚೇತರಿಕೆ ಕಾಣ್ತಿದ್ದಾರೆ. ಗೋವಾದಲ್ಲಿ ಇದ್ದಾಗ ತುಂಬಾ ಟೆನ್ಷನ್ ಆಗಿದ್ದೆ. ಬೋನ್ ಇಂಜುರಿ ಆಗಿದೆ. ಆಪರೇಷನ್ ಆದಮೇಲೆ ದಿಗಂತ್ ನಗ್ತಿದ್ದಾನೆ ಎಂದು ಭಾವುಕರಾಗಿ ಐಂದ್ರಿತಾ ಹೇಳಿದರು.
    ನಾನು ಇನ್ಮೇಲೆ ದಿಗಂತ್‌ನ ಟೇಕ್ ಕೇರ್ ಮಾಡ್ತೀನಿ. ಡಿಸ್ಚಾರ್ಜ್ ಇವತ್ತು ಅಥವಾ ನಾಳೆ ಮಾಡ್ತೀವಿ ಅಂದಿದ್ದಾರೆ ಎಂದು ತಿಳಿಸಿದರು.

    ಹಿಂದೊಮ್ಮೆ ಕಣ್ಣಿಗೆ ಗಾಯಮಾಡಿಕೊಂಡಿದ್ದ ದಿಗಂತ್: ‘ವೆಡ್ಡಿಂಗ್ ಪುಲಾವ್’ ಎಂಬ ಹಿಂದಿ ಚಿತ್ರದ ಬಳಿಕ ದಿಗಂತ್ ಕೈಗೆತ್ತಿಕೊಂಡ ಇನ್ನೊಂದು ಸಿನಿಮಾ ‘ಟಿಕೆಟ್ ಟು ಬಾಲಿವುಡ್’. ಈ ಚಿತ್ರದ ಶೂಟಿಂಗ್ ವೇಳೆ ನಾಯಕಿ ಎಸೆದ ಚೂರಿ ದಿಗಂತ್ ಕಣ್ಣಿಗೆ ಬಿದ್ದ ಪರಿಣಾಮ ದೃಷ್ಟಿ ಕಳೆದುಕೊಂಡರು ಎಂಬ ಸುದ್ದಿ ಹೊರಬಿದ್ದಿತ್ತು. ಮೂರ್ನಾಲ್ಕು ಬಾರಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಪಟ್ಟರೂ, ಕಣ್ಣು ಮೊದಲಿನಿಂತೆ ಸ್ಪಷ್ಟವಾಗಿ ಕಾಣಿಸಲ್ಲ ಎಂದು ಸುದ್ದಿಗಳು ವರದಿಯಾದವು. ಆದ್ರೆ, ಇದು ಸತ್ಯವಾಗಿರಲಿಲ್ಲ.

    ದೃಷ್ಟಿ ಕಳೆದುಕೊಂಡರು ಎಂಬ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ್ದ ದಿಗಂತ್ ಚಿತ್ರೀಕರಣ ವೇಳೆ ಕಣ್ಣಿಗೆ ಪೆಟ್ಟು ಬಿದ್ದಿದ್ದು ನಿಜ, ಆದ್ರೆ ನಾಯಕಿ ಎಸೆದಿದ್ದು ಚೂರಿ ಅಲ್ಲ, ಹೈ ಹೀಲ್ಡ್ ಚಪ್ಪಲಿ. ಅದು ಅಕಸ್ಮಾತ್ ಆಗಿ ಎಸೆದಿದ್ದು. ಕಣ್ಣು ಗುಡ್ಡೆಗೆ ಗಾಯವಾಗಿದೆ, ದೃಷ್ಟಿ ಕಳೆದುಕೊಂಡಿಲ್ಲ, ಚಿಕಿತ್ಸೆ ಪಡೆಯುತ್ತಿದ್ದೇನೆ. ಸ್ವಲ್ಪ ದಿನ ವಿಶ್ರಾಂತಿ ಬೇಕು. ಪೂರ್ಣವಾಗಿ ದೃಷ್ಟಿ ಕಾಣಿಸುತ್ತೆ. ಭವಿಷ್ಯದಲ್ಲಿ ಏನೂ ತೊಂದರೆ ಇರುವುದಿಲ್ಲ ಎಂದು ದಿಗಂತ್ ಹೇಳಿದ್ದರು.

    ಏನಿದು ಸೊಮರ್‌ಸಾಲ್ಟ್?: ಸೊಮರ್‌ಸಾಲ್ಟ್ (ತಲೆಕೆಳಗಾಗಿ ಹಾರುವ ಸಾಹಸ) ಎನ್ನುವುದು ಮನುಷ್ಯನ ದೇಹವನ್ನು ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ತಲೆ ಕೆಳಗಾಗಿ ಪಲ್ಟಿ ಹೊಡೆಯುವುದೇ ಸೊಮರ್‌ಸಾಲ್ಟ್ ಅಥವಾ ಬ್ಯಾಕ್ ಫ್ಲಿಪ್ ಜಂಪ್ ಎನ್ನುತ್ತಾರೆ. ಸಾಮಾನ್ಯವಾಗಿ ಇದನ್ನು ಸಾಹಸಿಗಳು, ದೈಹಿಕ ಕಸರತ್ತು ಮಾಡುವವರು, ಕ್ರೀಡಾಪಟುಗಳು ಮಾಡುತ್ತಾರೆ. ಗೋಲ್ ಹೊಡೆದ ಬಳಿಕ ಕೆಲ ಫುಟ್ಬಾಲ್ ಆಟಗಾರರು ಈ ರೀತಿ ಜಂಪ್ ಮಾಡುವ ಸಾಹಸಕ್ಕೆ ಮುಂದಾಗುತ್ತಾರೆ. ತರಬೇತಿ ಪಡೆದು ಈ ಸಾಹಸ ಮಾಡಬೇಕು ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ. ಇದೇ ರೀತಿ ಈ ಸಾಹಸ ಜಂಪ್ ಮಾಡಲು ಹೋಗಿ ಹಲವಾರು ಕ್ರೀಡಾಪಟುಗಳು ಪ್ರಾಣ ಕಳೆದುಕೊಂಡಿದ್ದಾರೆ.

    ನಟ ದಿಗಂತ್ ಹೆಲ್ತ್ ಬುಲೆಟಿನ್ ಬಿಡುಗಡೆ; ಈಗಿನ ಸ್ಥಿತಿಯ ಬಗ್ಗೆ ವೈದ್ಯರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts