More

    ಚರಂಡಿ ಸ್ವಚ್ಛತೆಗೆ ಗ್ರಾಮಸ್ಥರ ಆಗ್ರಹ

    ಐಮಂಗಲ: ಗ್ರಾಮದ ಜನತಾ ಕಾಲನಿಯ ಅಂಗನವಾಡಿ ಕೇಂದ್ರದ ಎದುರು ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳ ತಾಣವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಮೂಡಿದೆ.

    ಜನತಾ ಕಾಲನಿಯ ಅಂಬೇಡ್ಕರ್ ಭವನದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಈ ಕೇಂದ್ರದ ಸ್ವಂತ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಇದರ ಎದುರಿರುವ ಚರಂಡಿ ನಿರ್ವಹಣೆ ಕೊರತೆಯಿಂದ ಕೊಳೆಚೆ ನೀರು ನಿಂತು ದುರ್ವಾಸನೆ ಬೀರುತ್ತಿದೆ.

    ಇಲ್ಲಿಗೆ ಬರುವ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈಗಾಗಲೇ ಹೊಸ ರೋಗಗಳಿಗೆ ತತ್ತರಿಸಿರುವ ಪಾಲಕರು ಮಕ್ಕಳನ್ನು ಹೊರಗೆ ಬಿಡಲು ಹೆದರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಲಿಕಾ ವಾತಾವರಣ ಸುತ್ತಮುತ್ತಲಿನ ಪ್ರದೇಶ ಕಲುಷಿತವಾಗಿದ್ದರೆ ಹೇಗೆ ಅಂಗನವಾಡಿಗೆ ಕಳುಹಿಸಬೇಕು ಎಂಬುದು ಗ್ರಾಮಸ್ಥರ ಪ್ರಶ್ನೆ.

    ಸ್ವಚ್ಛತೆಗೆ ಆದ್ಯತೆ ಕೊಡಬೇಕಾದ ಆರೋಗ್ಯ ಇಲಾಖೆ, ಗ್ರಾಪಂ ಕೂಡಲೇ ಇತ್ತ ಗಮನ ಹರಿಸಿ ಸ್ವಚ್ಛತೆಗೆ ಆದ್ಯತೆ ನೀಡಿ, ಶುಚಿ ಪರಿಸರ ಕಲ್ಪಿಸಬೇಕು ಎಂದು ಅಂಗನವಾಡಿ ಶಿಕ್ಷಕಿ ಅರುಣಾಕುಮಾರಿ, ಗ್ರಾಮಸ್ಥರಾದ ಎಸ್.ಮೈಲಾರಪ್ಪ, ಟಿ.ಸಿದ್ದೇಶ್, ತಿಪ್ಪಮ್ಮ, ವಿಜಯಕುಮಾರ್, ಎಚ್.ಎಸ್.ಸುರೇಶ್ ಒತ್ತಾಯಿಸಿದ್ದಾರೆ.

    ಪಿಡಿಒ ಚಿಕ್ಕಣ್ಣ ಹೇಳಿಕೆ: ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ವರ್ಷ ಚರಂಡಿಯನ್ನು ಸುಸಜ್ಜಿತವಾಗಿ ಕಲ್ಲಿನಿಂದ ನಿರ್ಮಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts