More

    ರಕ್ತನೂ ಕೊಟ್ಟು, ಚಿಕಿತ್ಸೆಯನ್ನೂ ಮಾಡಿ ಜೀವ ಉಳಿಸಿದ ವೈದ್ಯ

    ನವದೆಹಲಿ: ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ರೋಗಿಗಳ ಪಾಲಿಗೆ ದೇವರಾಗಿ ಬಂದು ಅವರ ಜೀವ ಉಳಿಸುವ ಘಟನೆಗಳ ಬಗ್ಗೆ ಸಾಕಷ್ಟು ವರದಿಗಳಾಗುತ್ತಲೇ ಇರುತ್ತವೆ.

    ಅಂಥದ್ದೇ ಒಂದು ಘಟನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. 24 ವರ್ಷದ ಜ್ಯೂನಿಯರ್‌ ಡಾಕ್ಟರ್‌ ಒಬ್ಬರು ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದ ರೋಗಿಯೊಬ್ಬರಿಗೆ ರಕ್ತ ನೀಡುವ ಮೂಲಕ ರೋಗಿಯ ಜೀವವನ್ನು ಉಳಿಸಿದ್ದಾರೆ. ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

    ಈ ವೈದ್ಯರ ಹೆಸರು ಮೊಹದ್ ಫವಾಜ್. ಏಮ್ಸ್‌ ಆಸ್ಪತ್ರೆಗೆ ರಕ್ತಕ್ಕೆ ಸಂಬಂಧಿಸಿದ ಒಂದು ಮಾರಣಾಂತಿಕ ಕಾಯಿಲೆಯಾಗಿರುವ ‘‘ವಿಷ ರಕ್ತ ಆಘಾತ’ ಎಂಬ ಸೋಂಕಿನ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಅಡ್ಮಿಟ್‌ ಆಗಿದ್ದರು. ಅವರಿಗೆ ತುರ್ತಾಗಿ ಸರ್ಜರಿ ಆಗಬೇಕಾಗಿತ್ತು. ಇಲ್ಲದಿದ್ದರೆ ಅವರ ಜೀವಕ್ಕೆ ಅಪಾಯವಿತ್ತು. ಆದರೆ ಆಕ್ಷಣದಲ್ಲಿ ಅವರಿಗೆ ರಕ್ತ ನೀಡುವ ಅವಶ್ಯಕತೆ ಇತ್ತು. ತಕ್ಷಣಕ್ಕೆ ಆ ರಕ್ತ ಲಭ್ಯವಿರಲಿಲ್ಲ. ಹಿಂದೆ-ಮುಂದೆ ಏನನ್ನೂ ಯೋಚಿಸದ ವೈದ್ಯ ಮೊಹದ್‌ ಅವರು ರಕ್ತ ನೀಡಿದ್ದಾರೆ.

    ಇದನ್ನೂ ಓದಿ: ಅಮ್ಮಾ ಕ್ಷಮಿಸಿಬಿಡು, ಅವನೂ ನನ್ನ ಮದ್ವೆ ಆಗಲ್ಲ, ಬೇರೆಯವರನ್ನೂ ಆಗಲು ಬಿಡಲ್ಲ…

    ರೋಗಿಗೆ ತಗುಲಿದ್ದ ಸೋಂಕು ಕಾಲು ಪೂರ್ತಿ ಹರಡಲು ಶುರುವಾಗಿತ್ತು. ಅವರಿಗೆ ಶಸ್ತ್ರಚಿಕಿತ್ಸೆ ಆಗಲೇ ಮಾಡಬೇಕಾಗಿತ್ತು. ರೋಗಿಯ ಸಂಬಂಧಿಕರು ಯಾರೂ ಆಸ್ಪತ್ರೆಗೆ ಬಂದಿರಲಿಲ್ಲ. ಅವರ ಪತ್ನಿ ಬಂದಿದ್ದರು. ಆದರೆ ಕೆಲವೊಂದು ವೈದ್ಯಕೀಯ ಸಮಸ್ಯೆಯಿಂದಾಗಿ ಅವರಿಗೆ ರಕ್ತ ನೀಡಲು ಸಾಧ್ಯವಾಗಿರಲಿಲ್ಲ. ಕುಟುಂಬದ ಇತರ ಸದಸ್ಯರಿಗೆ ತಿಳಿಸಿ ರಕ್ತದ ವ್ಯವಸ್ಥೆ ಮಾಡುವಷ್ಟರಲ್ಲಿ ತುಂಬಾ ಲೇಟಾಗಿ ಹೋಗಿ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಆದ್ದರಿಂದ ನಾನೇ ರಕ್ತ ಕೊಟ್ಟೆ. ವೈದ್ಯನಾಗಿ ನನ್ನ ಕೆಲಸ ನಾನು ಮಾಡಿದ್ದೇನೆ ಅಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಮೊಹದ್‌ ಫವಾಜ್‌.

    ಇವರ ಈ ಕಾರ್ಯದ ಬಗ್ಗೆ ತಿಳಿಯುತ್ತಿದ್ದಂತೆಯೇ ಎಲ್ಲೆಡೆಯಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿದೆ.

    ಮಗು ನೋಡಿ ಬೆಂಕಿಹಚ್ಚಿಕೊಂಡ ಅಪ್ಪ- ಅಮ್ಮನಿಗೆ ಹೃದಯಾಘಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts