More

    ಏಡ್ಸ್ ತಡೆಗೆ ಜಾಗೃತಿ ಅವಶ್ಯ

    ಸಿಂಧನೂರು: ಏಡ್ಸ್ ರೋಗ ತಡೆಗೆ ಮುಂಜಾಗ್ರತಾ ಕ್ರಮಗಳ ಜತೆಗೆ, ಆಗಾಗ ಜಾಗೃತಿ ಮೂಡಿಸುವಂಥ ಕಾರ್ಯಕ್ರಮ ನಡೆಯಬೇಕೆಂದು ಸನ್ ರೈಸ್ ಗ್ರೂಪ್ ಆಫ್ ಇನ್ಸಿಟ್ಯೂಟ್ ಕಾರ್ಯದರ್ಶಿ ಕೆ.ಇರ್ಫಾನ್ ಹೇಳಿದರು.

    ಇದನ್ನೂ ಓದಿ: ಏಡ್ಸ್ ತಡೆಗೆ ಜಾಗೃತಿ ಅವಶ್ಯ

    ನಗರದ ಪಿಡಬ್ಲ್ಯುಡಿಕ್ಯಾಂಪ್‌ನ ಸನ್‌ರೈಸ್ ಗ್ರೂಪ್ ಆಫ್ ಇನ್ಸಿಟ್ಯೂಟ್‌ನಲ್ಲಿ ಶುಕ್ರವಾರ ಜಿಲ್ಲಾಡಳಿತ ರಾಯಚೂರು ಮತ್ತು ತಾಲೂಕು ಆಡಳಿತ ಸಿಂಧನೂರು, ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ತಾಲೂಕು ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಮಾತನಾಡಿದರು.

    ಏಡ್ಸ್ ನಿರ್ಮೂಲನೆಗೆ ಅರಿವು ಮೂಡಿಸಲು ನಸಿರ್ಂಗ್ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಆರೋಗ್ಯ ಇಲಾಖೆಯೊಂದಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದರು.

    ಡಾ.ಮಣಿಶಂಕರ್, ಆರೋಗ್ಯಾಧಿಕಾರಿ ಗೀತಾ ಹಿರೇಮಠ, ಆಪ್ತ ಸಮಲೋಚಕ ಅಮರೇಶ, ಪ್ರಾಚಾರ್ಯ ಸಿರಿಲ್, ಸೇಂಟ್ ಲುಕ್ ಸೊಸೈಟಿ ಸದಸ್ಯರಾದ ಲಕ್ಷ್ಮೀ ಪತ್ತಾರ್, ಎಫ್.ಎ.ಹಣಗಿ, ಸಂಗನಗೌಡ, ಓಂಪ್ರಸಾದ, ಖಾದ್ರಿ, ಯಮನೂರು, ಫಾರ್ಮಸಿ ಕಾಲೇಜ್ ಪ್ರಾಂಶುಪಾಲ ವಾಸೀಮ್ ಹುಸೇನ್,

    ಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಕ್ರವರ್ತಿ, ಮನೋಹರ್, ಉಪನ್ಯಾಸಕರಾದ ರಾಜೇಶ್, ಬಸವಲಿಂಗ, ಅಶುಪಾಷ, ಸರ್ವೇಶ್, ಭಾವನಿ, ಜ್ಯಾನೇಶ್ವರಿ, ಭಾಗ್ಯ, ಭಾಗ್ಯಶ್ರೀ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts