More

    ಕೋವಿಡ್​ 19 ಬಗ್ಗೆ ಎಚ್ಚರಿಕೆ ನೀಡಿದ್ದ ಚೀನಾದ ವೈದ್ಯೆ ಆಯ್​ಫೆನ್​ ನಿಗೂಢ ಕಣ್ಮರೆ

    ಬೀಜಿಂಗ್​: ಕೋವಿಡ್​ 19 ವೈರಸ್​ ಅನ್ನು ಮೊದಲಿಗೆ ಗುರುತಿಸಿ, ವೈದ್ಯಕಿಯ ಸಮುದಾಯಕ್ಕೆ ಈ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ ಚೀನಾದ ವೈದ್ಯೆ ಆಯ್​ಫೆನ್​ ನಿಗೂಢವಾಗಿ ಕಾಣೆಯಾಗಿದ್ದಾರೆ. ಕೋವಿಡ್​ 19 ಬಗ್ಗೆ ಡಿಸೆಂಬರ್​ನಲ್ಲೇ ಎಚ್ಚರಿಕೆ ನೀಡಿದ್ದೆ. ಆದರೆ, ಚೀನಾದ ಅಧಿಕಾರಿಗಳು ಈ ಮಾಹಿತಿಯನ್ನು ಗೌಪ್ಯವಾಗಿರಿಸುವಂತೆ ಹೇಳಿದ್ದರು. ಸೋಂಕು ತಡೆಗಟ್ಟಲು ಅವರು ಆಗಲೇ ಕ್ರಮ ಕೈಗೊಳ್ಳುವ ಜತೆಗೆ ಜಗತ್ತಿಗೆ ಈ ಬಗ್ಗೆ ಮಾಹಿತಿ ನೀಡಿದ್ದರೆ, ಕರೊನಾ ವೈರಸ್​ ಸೋಂಕಿನ ಪಿಡುಗನ್ನು ಮೂಲದಲ್ಲೇ ಚಿವುಟಬಹುದಿತ್ತು ಎಂದು ಚೀನಾದ ನಿಯತಕಾಲಿಕ ರೆನ್ವುಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

    ಅವರ ಈ ಸಂದರ್ಶನ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಜಾಗತಿಕವಾಗಿ ಚೀನಾ ಬೆತ್ತಲಾಗುತ್ತಿರುವಂತೆ ಎಚ್ಚೆತ್ತುಕೊಂಡ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಸಂದರ್ಶನವನ್ನು ಇಂಟರ್​ನೆಟ್​ನಿಂದ ತೆಗೆದುಹಾಕುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇದಾಗಿ ಎರಡು ವಾರಗಳಲ್ಲಿ ಆಯ್​ ೆನ್​ ನಿಗೂಢವಾಗಿ ಕಾಣೆಯಾಗಿದ್ದು, ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿಯದಾಗಿದೆ.

    ಕರೊನಾ ಪಿಡುಗಿನ ಉಗಮ ಸ್ಥಾನ ವುಹಾನ್​ನ ಆಸ್ಪತ್ರೆಯೊಂದರಲ್ಲಿ ಆಯ್​ ೆನ್​ ಕಾರ್ಯನಿರ್ವಹಿಸುತ್ತಿದ್ದರು. ನವೆಂಬರ್​ನಲ್ಲಿ ಒಬ್ಬ ರೋಗಿ ಜ್ವರ, ಶೀತ, ನೆಗಡಿ, ಕೆಮ್ಮಿಗೆ ಚಿಕಿತ್ಸೆ ಪಡೆಯಲು ಬಂದಿದ್ದರು. ಸಾಮಾನ್ಯ ಜ್ವರಕ್ಕೆ ಕೊಡುವ ಔಷಧ ನೀಡಿದರೂ ಆತ ಚೇತರಿಸಿಕೊಂಡಿರಲಿಲ್ಲ. ರಕ್ತ ಮಾದರಿಯ ಜತೆಗೆ ಗಂಟಲಿನ ದ್ರವವನ್ನು ಪ್ರಯೋಗಾಲಯದಲ್ಲಿ ಪರೀಸಿದಾಗ ಸಾರ್ಸ್​ ಮಾದರಿಯ ವೈರಸ್​ ಇದು ಎಂಬುದು ಡಿಸೆಂಬರ್​ನಲ್ಲಿ ಖಚಿತಪಟ್ಟಿತ್ತು. ಈ ವಿಷಯವನ್ನು ಆಕೆ ತಮ್ಮ ಮೇಲಿನ ವೈದ್ಯಾಧಿಕಾರಿಗಳಿಗೆ ತಿಳಿಸಿದ್ದರು. ಅಲ್ಲದೆ, ಪ್ರಯೋಗಾಲಯದ ವರದಿಯ ಚಿತ್ರವನ್ನು ಮೊಬೈಲ್​ನಲ್ಲೆ ಸೆರೆಹಿಡಿದು ತಮ್ಮ ವೈದ್ಯಕಿಯ ಮಿತ್ರರಿಗೆ ರವಾನಿಸಿದ್ದರು. ಸಂಜೆ ವೇಳೆಗೆ ಇದು ವೈರಲ್​ ಆಗಿತ್ತು.

    ಅದೇ ದಿನ ರಾತ್ರಿ ಆಯ್​ ೆನ್​ ಅವರ ಮೊಬೈಲ್​ಗೆ ಕರೆ ಮಾಡಿದ್ದ ಆಸ್ಪತ್ರೆಯ ಮೇಲಧಿಕಾರಿಗಳು ಅನಗತ್ಯ ಆತಂಕ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬಗ್ಗೆ ಎಲ್ಲಿಯೂ ಬಾಯ್ಬಿಡದಂತೆ ಕಟ್ಟಪ್ಪಣೆ ಮಾಡಿದ್ದರು.

    ಎರಡು ದಿನಗಳ ಬಳಿಕ ಆಸ್ಪತ್ರೆಯ ಶಿಸ್ತು ಸಮಿತಿಯವರು ವದಂತಿಯನ್ನು ಹಬ್ಬಿಸುವ ಜತೆಗೆ ದೇಶದ ಸ್ಥಿರತೆಗೆ ಧಕ್ಕೆಯುಂಟು ಮಾಡುತ್ತಿರುವುದಾಗಿ ಆರೋಪಿಸಿದ್ದಲ್ಲದೆ, ಸುಮ್ಮನಿರದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬೆದರಿಸಿದ್ದರು.

    ನೋಡುನೋಡುತ್ತಿದ್ದಂತೆ ಕರೊನಾ ಸೋಂಕು ಹರಡುವಿಕೆ ಹೆಚ್ಚಾಗುತ್ತಲೇ ಹೋಯಿತು. ವುಹಾನ್​ನಲ್ಲಿ ಸೋಂಕು ಹರಡುವಿಕೆ ಆರಂಭವಾಗಿದ್ದ ಪ್ರದೇಶದ ಹೊರತಾಗಿ ಬೇರೆ ಪ್ರದೇಶದ ಜನರಲ್ಲೂ ಸೋಂಕು ಕಾಣಿಸಿಕೊಳ್ಳಾರಂಭಿಸಿತು. ಹೀಗಾಗಿ ಇದು ಜನರಿಂದ ಜನರಿಗೆ ಹಬ್ಬುತ್ತಿರುವ ಅನುಮಾನ ಮೂಡಿತು ಎಂದು ಆಯ್​ ೆನ್​ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.

    ಡಿಸೆಂಬರ್​ನಲ್ಲೇ ಈ ವಿಷಯ ತಿಳಿದರೂ ಚೀನಾದ ಅಧಿಕಾರಿಗಳು ಮಾತ್ರ 2020ರ ಜ.21ರಂದು ಈ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಬಗ್ಗೆ ಎಚ್ಚರವಹಿಸುವಂತೆ ಸಲಹೆ ನೀಡಿದ್ದರು. ಆದರೆ, ಅಷ್ಟರಲ್ಲೇ ಇದು ಜಾಗತಿಕವಾಗಿ ಹರಡಿತ್ತು ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts