More

    ವಿಶ್ವದ ಶ್ರೇಷ್ಠ ಸ್ಥಳಗಳ ಪೈಕಿ ಭಾರತದ ಈ ಎರಡು ರಾಜ್ಯಗಳ ನಗರಗಳಿಗೂ ಸ್ಥಾನ! ಇಲ್ಲಿದೆ ವಿವರ


    ನವದೆಹಲಿ:  2022ನೇ ಸಾಲಿನ ಟೈಮ್ಸ್​ ಮಾಗಝೈನ್​ ಪ್ರಕಟಿಸಿರುವ ವಿಶ್ವದ ಶ್ರೇಷ್ಠ ಸ್ಥಳಗಳ ಪೈಕಿ ಭಾರತದ ಈ ಎರಡು ರಾಜ್ಯದ ಸ್ಥಳಗಳನ್ನು ಆಯ್ಕೆ ಮಾಡಿದೆ. ವಿಶ್ವದ 50 ಸ್ಥಳಗಳ ಪೈಕಿ  ಈ ಎರಡೂ ಸ್ಥಳಗಳೂ ಕೂಡ ಸ್ಥಾನ ಪಡೆದಿದ್ದು, ಪ್ರವಾಸೋದ್ಯಮಕ್ಕೆ ಅತ್ಯಂತ ಉತ್ತಮ ತಾಣ ಎಂದು ಪರಿಗಣಿಸಿದೆ. 

    ಹಾಗಾದರೆ ಆ ಎರಡೂ ಸ್ಥಳಗಳು ಯಾವುದಿರಬಹುದು ಎಂಬುದಕ್ಕೆ ಇಲ್ಲಿದೆ ಉತ್ತರ. ಗುಜರಾತ್​​ ಜಿಲ್ಲೆಯ ಅಹಮದಾಬಾದ್​ ನಗರ ಹಾಗೂ ಕೇರಳ ರಾಜ್ಯ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಉತ್ತಮ ಸಂವಹನ,ಇಲ್ಲಿನ ಜನರು ಬಹುತೇಕ ಕೊವಿಡ್​ ಲಸಿಕೆ ಪಡೆದಿರುವುದು ಹಾಗೂ ಉತ್ತಮ ರಸ್ತೆ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಇವುಗಳಿಂದ ಈ ಪ್ರದೇಶಗಳು ಅತ್ಯುತ್ತಮ ಸ್ಥಳ ಎಂದು ಗುರುತಿಸಲಾಗಿದೆ.

    ಇನ್ನು ಯುನೆಸ್ಕೋ ವಿಶ್ವ ಪರಂಪರೆಯ ನಗರವಾಗಿ ಗುರುತಿಸಿಕೊಂಡಿರುವ ಅಹಮದಾಬಾದ್ ನಗರ ಪ್ರಾಚೀನ ಹೆಗ್ಗುರುತಗಳು ಮತ್ತು ಸಮಕಾಲೀನ ನಾವೀನ್ಯತೆಯನ್ನೂ ಹೊಂದಿವೆ. ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಉತ್ತಮ ಸ್ಥಳವಾಗಿದ್ದು, ವಿಶೇಷವಾಗಿ ಶಬರಮತಿ ನದಿ ದಡದಲ್ಲಿರುವ ಮಹಾತ್ಮಾ ಗಾಂಧೀಜಿ ಆಶ್ರಮ ಮತ್ತು 9 ದಿನಗಳವರೆಗೆ ಇಲ್ಲಿ ನಡೆಯುವ ನವರಾತ್ರಿ ಆಚರಣೆ ವಿಶ್ವಮಟ್ಟದಲ್ಲೇ ಸ್ಥಾನ ಪಡೆದುಕೊಂಡಿದೆ.

    ಇನ್ನೂ ಕೇರಳವು ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿದೆ. ಅದ್ಭುತವಾದ ಕಡಲತೀರಗಳು ಮತ್ತು ದೇವಾಲಯಗಳು ಹಾಗೂ ಅರಮನೆಗಳೊಂದಿಗೆ ಇದನ್ನು ದೇವರ ಸ್ವಂತ ನಾಡು ಎಂದೇ ಕರೆಯಲಾಗುತ್ತದೆ. ರಾಜ್ಯದ ಮೊದಲ ಕಾರವಾನ್ ಪಾರ್ಕ್, ಕಾರವಾನ್ ಮೆಡೋಸ್, ಸುಂದರವಾದ ಗಿರಿಧಾಮವಾದ ವಾಗಮೋನ್‌ನಲ್ಲಿ ತೆರೆಯಲಾಗಿದೆ. ಈ ಎಲ್ಲಾ ಮಾನದಂಡಗಳನ್ನು ಆಧರಿಸಿ ಭಾರತದ ಈ ಎರಡೂ ಸ್ಥಳಗಳು ಅತ್ಯುತ್ತಮ ನಗರಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts