More

    ಈ ದಶಕದ ಮೊದಲ ಅಧಿವೇಶನವು ಭಾರತದ ಉಜ್ವಲ ಭವಿಷ್ಯಕ್ಕೆ ತುಂಬಾ ಮುಖ್ಯ: ಪ್ರಧಾನಿ ಮೋದಿ

    ನವದೆಹಲಿ: ಈ ದಶಕದ ಮೊದಲ ಅಧಿವೇಶನವು ಇಂದು ಆರಂಭವಾಗುತ್ತಿದ್ದು, ಭಾರತದ ಉಜ್ವಲ ಭವಿಷ್ಯಕ್ಕೆ ಈ ಹತ್ತು ವರ್ಷ ತುಂಬಾ ಮುಖ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

    ಬಜೆಟ್​ ಅಧಿವೇಶನ ಆರಂಭಕ್ಕೂ ಮುನ್ನ ಸಂಸತ್ತಿನ ಹೊರಭಾಗದಲ್ಲಿ ಮಾಧ್ಯಮದವರೊಂದಿಗೆ ಪ್ರಧಾನಿ ಮೋದಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರರು ಕಂಡಂತಹ ಕನಸನ್ನು ನನಸು ಮಾಡುವ ಸುವರ್ಣಾವಕಾಶ ರಾಷ್ಟ್ರದ ಮುಂದೆ ಬಂದಿದೆ ಎಂದರು.

    ಈ ದಶಕವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಇಂದಿನಿಂದ ಆರಂಭವಾಗುವ ಅಧಿವೇಶನದಲ್ಲಿ ದಶಕವನ್ನು ಕೇಂದ್ರೀಕರಿಸುವ ಚರ್ಚೆಗಳು ನಡೆಯಬೇಕು. ಇದನ್ನೇ ರಾಷ್ಟ್ರವು ನಿರೀಕ್ಷಿಸುತ್ತಿದೆ. ಜನರ ಆಕಾಂಕ್ಷೆಗಳನ್ನು ನೆರವೇರಿಸಲು ನಮ್ಮ ಕಾಣಿಕೆಗಳನ್ನು ನೀಡುವಲ್ಲಿ ನಾವು ಹಿಂದೆ ಬೀಳಬಾರದು ಎಂದು ನಾನು ನಂಬಿದ್ದೇನೆಂದು ಹೇಳಿದರು.

    ಹಣಕಾಸು ಸಚಿವರು 2020ರಲ್ಲಿ 4 ರಿಂದ 5 ಮಿನಿ ಬಜೆಟ್‌ಗಳನ್ನು ವಿವಿಧ ಪ್ಯಾಕೇಜ್‌ಗಳ ರೂಪದಲ್ಲಿ ಮಂಡಿಸಬೇಕಾಗಿತ್ತು. ಆದರೆ, ಈ ಬಜೆಟ್ ಅನ್ನು ಆ 4 ರಿಂದ 5 ಮಿನಿ ಬಜೆಟ್​ಗಳ ಭಾಗವಾಗಿ ನೋಡಲಾಗುತ್ತದೆ. ಇದನ್ನು ನಾನು ನಂಬುತ್ತೇನೆಂದು ಪ್ರಧಾನಿ ಮೋದಿ ತಿಳಿಸಿದರು. (ಏಜೆನ್ಸೀಸ್​)

    ಇನ್ನಷ್ಟು ಮೇಡ್ ಇನ್ ಇಂಡಿಯಾ ಲಸಿಕೆ ಉತ್ಪಾದನೆ; ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ

    ದೇಹವ್ಯವಸ್ಥೆಯಲ್ಲಿ ಪರಿಪೂರ್ಣತೆ ಸಾಧಿಸುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts