More

    ನಾಳೆಯಿಂದ ರಾಜಸ್ಥಾನ ವಿಧಾನಸಭೆ ಕಲಾಪ; ಸಿಎಂ ಅಶೋಕ್ ಗೆಹ್ಲೋಟ್​​ರನ್ನು ಭೇಟಿಯಾದ ಸಚಿನ್​ ಪೈಲಟ್​

    ಜೈಪುರ: ರಾಜಸ್ಥಾನದಲ್ಲಿ ಬಂಡಾಯವೆದ್ದಿದ್ದ ಕಾಂಗ್ರೆಸ್​ ಶಾಸಕರು ಪಕ್ಷಕ್ಕೆ ಮರಳಿದ್ದಾರೆ. ನಾಳೆಯಿಂದ ವಿಧಾನಸಭೆ ಕಲಾಪವೂ ಪ್ರಾರಂಭವಾಗಲಿದ್ದು, ಈ ಮಧ್ಯೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ಅವರು ವಿಶ್ವಾಸಮತ ಯಾಚನೆಗೂ ಮುಂದಾಗಿದ್ದಾರೆ.
    ಇದೀಗ ಇನ್ನೊಂದು ಮಹತ್ವದ ಬೆಳವಣಿಗೆ ನಡೆದಿದ್ದು, ಮಾಜಿ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಅವರು ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ.

    ಸಚಿನ್​ ಪೈಲಟ್​ ಹಾಗೂ ಅವರ ಬೆಂಬಲಿಗರಾದ 18 ಕಾಂಗ್ರೆಸ್​ ಶಾಸಕರು ಅಶೋಕ್ ಗೆಹ್ಲೋಟ್​ ವಿರುದ್ಧ ಜುಲೈನಲ್ಲಿ ಬಂಡಾಯ ಎದ್ದಿದ್ದರು. ಇದರಿಂದಾಗಿ ಸಚಿನ್​ ಪೈಲಟ್ ಅವರನ್ನು ಡಿಸಿಎಂ ಸ್ಥಾನ ಮತ್ತು ಪ್ರದೇಶ ಕಾಂಗ್ರೆಸ್​ ಸಮಿತಿ ಅಧ್ಯಕ್ಷನ ಸ್ಥಾನದಿಂದ ವಜಾ ಮಾಡಲಾಗಿತ್ತು. ಇದನ್ನೂ ಓದಿ: ನಾಲ್ಕನೇ ದೀರ್ಘಾವಧಿಯ ಪ್ರಧಾನಿ ನಮೋ: ನಾಳೆ ಏಳನೇ ಬಾರಿ ಕೆಂಪುಕೋಟೆಯಿಂದ ಭಾಷಣ

    ಇಂದು ಪೈಲಟ್​ ಹಾಗೂ ಗೆಹ್ಲೋಟ್​ ಇಬ್ಬರೂ ಭೇಟಿಯಾಗಿದ್ದಾರೆ. ಇಬ್ಬರೂ ನಗುತ್ತ, ಶೇಕ್​ ಹ್ಯಾಂಡ್ ಮಾಡಿದ್ದಾರೆ. ಈ ವೇಳೆ ಕೆ.ಸಿ.ವೇಣುಗೋಪಾಲ್​, ಅವಿನಾಶ್​ ಪಾಂಡೆ, ರಣದೀಪ್​ ಸುರ್ಜೇವಾಲಾ, ಅಜಯ್​ ಮೇಕನ್​, ಗೋವಿಂದ್ ಸಿಂಗ್​ ದೋತ್ಸಾರಾ ಇದ್ದರು.

    ಸಚಿನ್​ ಪೈಲಟ್​ ಪಕ್ಷದಿಂದ ಬಂಡಾಯ ಎದ್ದ ಬಳಿಕ ಅಶೋಕ್​ ಗೆಹ್ಲೋಟ್​ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅವರೊಬ್ಬ ಯೂಸ್​ಲೆಸ್​ ಎಂದು ಹೇಳಿದ್ದರು. (ಏಜೆನ್ಸೀಸ್​)

    ರಾಜಸ್ಥಾನ ರಾಜಕೀಯದಲ್ಲಿ ರೋಚಕ ಟ್ವಿಸ್ಟ್​!: ಅವಿಶ್ವಾಸ ಗೊತ್ತುವಳಿಗೆ ಬಿಜೆಪಿ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts