ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಉಡುಪಿ ರಸ್ತೆಯ ಆಗುಂಬೆ ಘಾಟಿ ರಸ್ತೆಯಲ್ಲಿ ಅಕ್ಟೋಬರ್ 15ರವರೆಗೆ 12 ಟನ್‌ಗಿಂತ ಅಧಿಕ ಭಾರದ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.
ಘಾಟಿ ರಸ್ತೆ ಕಿರಿದಾಗಿದ್ದು, ಮಳೆಗಾಲದಲ್ಲಿ ಭಾರಿ ಸರಕು ಸಾಗಾಟ ವಾಹನ ಸಂಚರಿಸುವುದರಿಂದ ರಸ್ತೆ ಬದಿಯ ಮಣ್ಣು ಕುಸಿದು, ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಬದಲಿ ಮಾರ್ಗ: ಉಡುಪಿ – ಸಿದ್ದಾಪುರ – ಹೊಸಂಗಡಿ – ಬಾಳೆಬರೇ ಘಾಟಿ ಹುಲಿಕಲ್- ಮಾಸ್ತಿಕಟ್ಟೆ- ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹಾಗೂ ಕಾರ್ಕಳ-ಹೆಬ್ರಿ-ಸಿದ್ಧಾಪುರ-ಹೊಸಂಗಡಿ-ಬಾಳೆಬರೆ ಘಾಟಿ -ಹುಲಿಕಲ್-ಮಾಸ್ತಿಕಟ್ಟೆ-ತೀರ್ಥಹಳ್ಳಿ-ಮಾರ್ಗವಾಗಿ ಶಿವಮೊಗ್ಗ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

Share This Article

Success Secrets: ನಿಮ್ಮ ಜೀವನದಲ್ಲಿ ಈ 4 ಸ್ಥಳಗಳಲ್ಲಿ ಎಂದಿಗೂ ಹಿಂಜರಿಯಬೇಡಿ! ಈ ಕೆಲಸ ಮಾಡಿದ್ರೆ ಸಕ್ಸಸ್‌ ಗ್ಯಾರೆಂಟಿ

ಬೆಂಗಳೂರು: ಆಚಾರ್ಯ ಚಾಣಕ್ಯರನ್ನು ಭಾರತದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ…

Salt Benefits | ಒಂದು ತಿಂಗಳು ಉಪ್ಪು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ರೆ ತೂಕ ನಷ್ಟ ಪಕ್ಕಾ! ಅಪಾಯವೂ ಖಂಡಿತ

ಬೆಂಗಳೂರು:  ಇತ್ತೀಚಿನ ದಿನಗಳಲ್ಲಿ ಎಲ್ಲರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳಲು ಗಮನ…

Palmistry: ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದ್ರೆ ನಿಮ್ಮಂಥ ಅದೃಷ್ಟವಂತರು ಯಾರೂ ಇಲ್ಲ! ಹಣ ನಿಮ್ಮನ್ನು ಹುಡುಕಿ ಬರುತ್ತೆ

ಅನೇಕ ಜನರು ತಮ್ಮ ಭವಿಷ್ಯ (prediction)ವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ